Vishwatma paripoorna

Composer : Shri Mahipati Dasaru

By Smt.Shubhalakshmi Rao

ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇ
ವಿಶ್ವವಂದಿತ ವಿಶ್ವನಾಥ ನೀನೆ ||ಪ||

ವಿಶ್ವಾತ್ಮದಲ್ಯಾಡುವ ವಿಶ್ವಸ್ವರೂಪವು ನೀನೆ
ವಿಶ್ವನಿರ್ಮಿತ ವಿಶ್ವಪಾಲ ನೀನೆ
ವಿಶ್ವವುದ್ಧರಿಸುವ ವಿಶ್ವಪಾವನ್ನನೆ
ವಿಶ್ವಲಿಹ ವಿಶ್ವೇಶ್ವರನು ನೀನೆ ||೧||

ವಿಶ್ವತೋಚಕ್ಷು ನೀ ವಿಶ್ವತೋಮುಖ ನೀನೆ
ವಿಶ್ವತೋಬಾಹು ಸಾಕ್ಷಾತ್ ನೀನೆ
ವಿಶ್ವಾಂತ್ರಸೂತ್ರನೆ ವಿಶ್ವಂಭರನು ನೀನೆ
ವಿಶ್ವರಹಿತ ವಿರಾಜಿತನು ನೀನೆ ||೨||

ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ
ವಿಶ್ವಾನಂದ ಘನಮಹಿಮ ನೀನೇ
ವಿಶ್ವಾತ್ಮಹಂಸ ಮಹಿಪತಿ ಗುರುನಾಥನೆ
ವಿಶ್ವಾಸಲೋಲ ವಿಶ್ವೇಶ ನೀನೆ ||೩||


viSvAtma paripUrNa viSvavyApaka nInE
viSvavaMdita viSvanAtha nIne ||pa||

viSvAtmadalyADuva viSvasvarUpavu nIne
viSvanirmita viSvapAla nIne
viSvavuddharisuva viSvapAvannane
viSvaliha viSvESvaranu nIne ||1||

viSvatOcakShu nI viSvatOmuKa nIne
viSvatObAhu sAkShAt nIne
viSvAMtrasUtrane viSvaMBaranu nIne
viSvarahita virAjitanu nIne ||2||

viSvAMtarAtma BAskara kOTitEjane
viSvAnaMda Ganamahima nInE
viSvAtmahaMsa mahipati gurunAthane
viSvAsalOla viSvESa nIne ||3||

Leave a Reply

You might also like

error: Content is protected !!