Endu baruvalo

Composer : Shri Venkata vittala

By Smt.Shubhalakshmi Rao

ಎಂದು ಬರುವಳೋ ಗೋ-ವಿಂದನೊಲ್ಲಭೆ
ಲಕ್ಷ್ಮೀ ರಂಗನ ಸನ್ನಿಧಿಗೆ [ಪ]

ಮಂಗಳಾಂಗಿ ಸರ್ವಾಂಗ ಬಳಲಿ ಮುಖ ಕಂದಿ
ಕಳೆಗುಂದಿದಂತೆ | ಬಲು ವ್ಯಥೆಯಂತೆ [ಅ.ಪ]

ಶೇಷನ ಶಿಖಿ ಮ್ಯಾಲೆ ವಾಸುದೇವರು
ಲಕ್ಷ್ಮೀ ಸಮೇತರಾಗಿರುತಿರಲು,
ಆ ಸಮಯದಿ ಭೃಗುಮುನಿ ಬಂದು ಕೋ-
ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ (೧)

ಥಟ್ಟನೆ ಇಳಿದಾಳು ಸಿಟ್ಟಿನಿಂದಲಿ
ಬಹು ಧಿಕ್ಕಾರ ಮಾಡಿದಳು
ಲಕ್ಷ್ಮೀ ರಮಣನೆಂಬೊ ಬಿರುದು ನಿಮಗೆ
ಈ ಹೊತ್ತಿಗೆ ಅಲ್ಲೆಂದಾಳು | ತೆರಳಿದಳು (೨)

ನಿಲ್ಲದೆ ಪೊರಟಾಳು ಫುಲ್ಲಾಕ್ಷಿ
ಮನದೊಳು ತಲ್ಲಣಿಸುತಿರಲು
ವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ
ಕೊಲ್ಹಾಪುರಕೆ ಬಂದಾಳು | ನೆಲೆಗೊಂಡಾಳು (೩)

ಜಾತೆ ಬಾಮಾರನ ಮಾತೆ ಬಾ
ವಾರಿಜದಳ ನೇತ್ರೆ ಬಾ
ಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು
ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು (೪)

ಜಯ ಲಕ್ಷ್ಮೀರಮಣಗೆ ಜಯ ಶ್ರೀನಿವಾಸಗೆ
ಜಯ ಮೋಕ್ಷ ದಾಯಕಗೆ
ಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆ |
ಶ್ರೀದೇವಿಯಳಿಗೆ (೫)

ವೆಂಕಟ ವಿಠಲ ವೈಕುಂಠಪತಿ ಲಕ್ಷ್ಮೀ
ಶಾಂತ ಏಕಾಂತದೊಳು,
ಶಂಖ ಚಕ್ರಧರ ಸರ್ವ ಮಂಗಳಕಾರ
ಸಂಚಿತಾಗಮ ದೂರನು | ಮಲಗಿರುವನು (೬)


eMdu baruvaLO gO-viMdanollaBe
lakShmI raMgana sannidhige [pa]

maMgaLAMgi sarvAMga baLali muKa kaMdi
kaLeguMdidaMte | balu vyatheyaMte [a.pa]

SEShana SiKi myAle vAsudEvaru
lakShmI samEtarAgirutiralu,
A samayadi BRugumuni baMdu kO-
pise sOkisidanu pAdavA | vakSha sthaLavA (1)

thaTTane iLidALu siTTiniMdali
bahu dhikkAra mADidaLu
lakShmI ramaNaneMbo birudu nimage
I hottige alleMdALu | teraLidaLu (2)

nillade poraTALu PullAkShi
manadoLu tallaNisutiralu
vallaBanariyada sthaLavilladire tAyi
kolhApurake baMdALu | nelegoMDALu (3)

jAte bAmArana mAte bA
vArijadaLa nEtre bA
mUrlOkadoLage nI praKyAte bAreMdu
SrIma-nnArAyaNane kareyalu | nasunageyoLu (4)

jaya lakShmIramaNage jaya SrInivAsage
jaya mOkSha dAyakage
jayatu kolhApuradoL nelasidavaLige |
SrIdEviyaLige (5)

veMkaTa viThala vaikuMThapati lakShmI
SAMta EkAMtadoLu,
SaMKa cakradhara sarva maMgaLakAra
saMcitAgama dUranu | malagiruvanu (6)

You might also like

error: Content is protected !!