Composer : Shri Vijayaramachandra vittala
ಮಧ್ವರಾಯರಿಗೆ ನಮೋ ನಮೋ [ಪ]
ಮಾಯವಾದಿಗಳ ಮತವ ಸೋಲಿಸಿ,
ಸುಯತಿಗಳಿಗೆ ಸದ್ಗತಿ ಮಾರ್ಗವ ತೋರಿದ [ಅ.ಪ]
ದೈತ್ಯ ರಾವಣಗೆ ಹಲವು ಭೀತಿ ತೋರಿಸಿ,
ಮಾತೆ ಜಾನಕಿಯಿಂದ ಖ್ಯಾತಿ ಪಡೆದ ಗುರು [೧]
ಮಂದ ಜರಾಸಂಧನ ಅಂಗವ ಸೀಳಿ,
ತಂದ ಕಪ್ಪವನ್ನು ಬಂದು ಧರ್ಮಗಿತ್ತ [೨]
ಕುಜನಾದಿಗಳ ನಿಜ ವಚನದಿ ಸೋಲಿಸಿ,
ವಿಜಯ ರಾಮಚಂದ್ರವಿಠಲ
ಸರ್ವೋತ್ತಮನೆನಿಸಿದ [೩]
madhvarAyarige namO namO [pa]
mAyavAdigaLa matava sOlisi,
suyatigaLige sadgati mArgava tOrida [a.pa]
daitya rAvaNage halavu BIti tOrisi,
mAte jAnakiyiMda KyAti paDeda guru [1]
maMda jarAsaMdhana aMgava sILi,
taMda kappavannu baMdu dharmagitta [2]
kujanAdigaLa nija vacanadi sOlisi,
vijaya rAmacaMdraviThala
sarvOttamanenisida [3]
