Tag: shubha rao

  • Jaya Jaya Shri Vadiraja

    Composer: Shri Abhinava Janardana Vittala ಜಯ ಜಯ ಶ್ರೀ ವಾದಿರಾಜ || ಪ || ಜಯ ಜಯ ಆಶ್ರಿತ ಕಲ್ಪ ಭೂಜ || ಅ.ಪ || ದಂಡ ಕಮಂಡಲ ಕರದವನೆ ಭೂ-ಮಂಡಲದೊಳು ಬಹು ಮೆರೆದವನೆ ಉ-ದಂಡ ಖಳರ ಮತ ಮುರಿದವನೆ ಚೆಲ್ವಪುಂಡರೀಕ ನಯನನ ತೋರ್ದವನೇ || ೧ || ಭವಭಯ ಮದವನೆ ಮಣಿಸಿದನೆ ಶುದ್ಧಸುವಿವೇಕ ಶಿರೋಮಣಿ ಎನಿಸಿದನೆ, ನಮ್ಮಅವನಿಪ ಹಯಾಸ್ಯನ ಭಜಿಸುವನೆ ಎ-ನ್ನವಗುಣಗಳ ದೂರ ನಿಲಿಸಿದನೇ || ೨ || ಕವಿ ಜನರಿಗೆ ಸುಖ ಸುರಿಸಿದನೆ…

  • Entu tutisali enna

    Composer: Shri Gopala dasaru ಎಂತು ತುತಿಸಲಿ ಎನ್ನ ದೇವನಸಂತತ ನಮ್ಮ ಸಲಹೋನಾಅಂತರಂಗದಿ ಹರಿಯ ತೋರಿಸಿಸಂತೋಷದಿಂದ ನಲಿವ ಪವನನ ||ಪ|| ತಾನು ಮಾಡಿದ ಕರ್ಮಶೇಷವುತಾನು ತಿಳುಹಿದ ಜ್ಞಾನಶೇಷವುತಾನು ಮಾಡಿದ ಭಕುತಿಶೇಷವುನಾನಾ ಸಾಧನಶೇಷವೂ,ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮ ಮಾಡಿಸಿತಾನು ಸಹಿತ ಧ್ಯಾನದಲಿ ಹರಿಕಾಣಿಸೀ ತೋರ್ಪ ಕರುಣಿಯ ||೧|| ಇವನ ಪ್ರೇರಣೆ ಹರಿಯ ಪ್ರೇರಣೆಇವನ ಸೇವಿಯು ಹರಿಯಸೇವೆಯುಇವನ ಕರುಣವೆ ಹರಿಯ ಕರುಣವುಇವನ ಬಲವೆ ಪ್ರಬಲವೂ,ಇವನು ನಂಬಲು ಹರಿಯು ನಂಬಿದಇವನು ಒಲಿಯಲು ಹರಿಯು ಒಲಿವಪವನಾಖ್ಯನಾಗಿ ನಮ್ಮನುಪವನಗತಿ ಪೊಂದಿಸುವನು ||೨|| ಜ್ಞಾನ…

  • Baa gumma

    Composer : Shri Purandara dasaru ಬಾ ಗುಮ್ಮ ಬಂದಂಜಿಸು ಗುಮ್ಮ ||ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ|| ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆಪುನುಗು ಜವ್ವಾಜಿ ಕಸ್ತೂರಿ ಲೇಪಿಸಿದೆತೊಳೆದ ಮೈಯ ಮೇಲೆ ಧೂಳು ಚೆಲ್ಲಿಕೊಂಡುಹಳೆಯ ಗೋಡೆಯ ಹೊಂಪುಳಿಯ ಬಿಡಿಸುತಾನೆ |೧| ನೊರೆ ಹಾಲು ಸಕ್ಕರೆ ಲಡ್ಡಿಗೆ ಮಂಡಿಗೆಉಣಲೊಲ್ಲದೆ ಬಟ್ಟಲೊಳು ಬಿಟ್ಟನು ತಾನೆತಿರುಗ್-ಹೋಗಿ ಯಜ್ಞ ಶಾಲೆಯೊಳುಂಡು ಬರುತಾನೆದಿನಕೆ ನೂರು ಜಗಳವ ಕೊಂಡು ಬರುತಾನೆ |೨| ಹಾವಿನ ಬಣ್ಣದ ಗುಮ್ಮ ಈ ಮನೆಯಮಾಳಿಗೆ ಚಿಂತೆಯಲಿರು ಕಂಡ್ಯವಾರಿಜನಾಭ ಶ್ರೀ…

error: Content is protected !!