Bidde nimmaya

Composer : Shri Krishna vittala

By Smt.Shubhalakshmi Rao

ಬಿದ್ದೆ ನಿಮ್ಮಯ ಪಾದದಲ್ಲಿ ನಾ [ಪ]
ಮಧ್ವರಾಯರ ಮನದಲಿದ್ದು ವಲಿವ ವೇದವ್ಯಾಸ [ಅ.ಪ]

ವೇದ ಓದದ ಶುದ್ಧ ಕಳ್ಳನಾ,
ಮೆದ್ದು ಮೆಲ್ಲುತ ವೃದ್ಧನಾದೆ, ಭಲ್
ಗದ್ದ ದಾಸಗೆ ಕರುಣದಿ ತೋರಿ,
ಉದ್ಧರಿಸುವ ಬಗೆ ಬಲ್ಲೀ (೧)

ಅನ್ಯದೇವರ ನಾ ನೊಲ್ಲೆ
ನಿನ್ನ ಪಾದವ ಬಿಡಲೊಲ್ಲೆ
ಘನ್ನ ಕರುಣಿ ನೀನು ಬಲ್ಲೆ
ನಿನ್ನ ಬಿಡಲು ಜಗಕಲ್ಲೇ (೨)

ಉತ್ತಮೋತ್ತಮ ದೇವ ಸತ್ಯ
ಭೃತ್ಯ ಜೀವನು ಎಂಬೆ ನಿತ್ಯ
ಭಕ್ತ ಪ್ರಥಮ ಪ್ರಾಣ ನೀನೇ
ಮುಕ್ತಿ ನಿನ್ನಾಧೀನವೇನೇ (೩)

ಇಂದಿರಾದೇವಿ ನಿನ್ನ ರಾಣಿ
ಕಂದರು ವಿಧಿ ಪರಿವಾರ
ಎಂದೆಂದಿಗೂ ಭಿನ್ನರೇನೇ
ಎಂದೆಂದು ಅಧೀನರೇನೇ (೪)

ಶ್ರೀಕೃಷ್ಣವಿಠಲ ಏಕ
ಸಕಲ ದೋಷ ವಿದೂರ
ಸಕಲ ಸದ್ಗುಣ ಪೂರ್ಣ ಹಾಗೆ
ಅಕಟ ಪೊರೆಯೋ ಎಂದು ಕೂಗಿ (೫)


bidde nimmaya pAdadalli nA [pa]
madhvarAyara manadaliddu valiva vEdavyAsa [a.pa]

vEda Odada Suddha kaLLanA,
meddu melluta vRuddhanAde, Bal
gadda dAsage karuNadi tOri,
uddharisuva bage ballI (1)

anyadEvara nA nolle
ninna pAdava biDalolle
Ganna karuNi nInu balle
ninna biDalu jagakallE (2)

uttamOttama dEva satya
BRutya jIvanu eMbe nitya
Bakta prathama prANa nInE
mukti ninnAdhInavEnE (3)

iMdirAdEvi ninna rANi
kaMdaru vidhi parivAra
eMdeMdigU BinnarEnE
eMdeMdu adhInarEnE (4)

SrIkRuShNaviThala Eka
sakala dOSha vidUra
sakala sadguNa pUrNa hAge
akaTa poreyO eMdu kUgi (5)

Leave a Reply

You might also like

error: Content is protected !!