Nodayya hariye

Composer : Shri Rangesha vittala

By Smt.Shubhalakshmi Rao

ಪಂಕಜನಾಭನಂಕಿತನಾದವಗೆ
ಪಂಕ ಲವ ಲೇಶವಿಲ್ಲ ಶಂಕೆ ಬೇಡಿದಕೆ ,
ಮಂಕುಮತಿಯವರು ಪಂಕಜ ಸಂಭವ
ಶಂಕರರ ನಂಬಿ ಸಂಕಟಪಟ್ಟುದನರಿಯ,
ಬಿಂಕದ ಬಿರದಿನ ಕಳಂಕ ರಂಗೇಶ ವಿಠಲ
ನಿರಾತಂಕದಿ ಪೊರೆವ ತನ್ನವರ ಯೇಣಾಂಕ ಸನ್ನಿಭವಕ್ತ್ರ ||

ನೋಡಯ್ಯಾ ಹರಿಯೆ |ಪ|
ಪಂಡರಪುರ ನಿಲಯನೆ ಕುಂಡಲಿಶಯನನೆ |ಅ.ಪ|

ಪುಂಡರೀಕಗೊಲಿದವನೆ ಅಂದು
ಶುಂಡಾಲವ ಪೊರೆದವನೆ
ಅಂಡಜ ವರ ವಾಹನನೆ ಎನ್ನ
ಮಂಡೆಯ ಮೇಲ್ ಕರವಿಡುತಲಿ | ೧ |

ವಿಜಯಗೆ ಸಾರಥಿಯಾದಿ ಅವನ
ಭುಜಗ ಶರದಿಂದ ಪೊರೆದಿ
ನಿಜ ಭಕುತಗೆ ನೀ ಒಲಿದ ದೇವ
ಕುಜನಮರ್ದನ ಹರಿ ಮುದದಿ | ೨ |

ಪಟುತರ ದೇಹ ಪ್ರಕಾಶ-ದಿಂದ
ವಟುವಂತೆ ಮೆರೆವ ಶ್ರೀಶ
ಕುಟಿಲ ರಹಿತ ರಂಗೇಶ ವಿಠಲ
ಹಟ ಮಾಡದೆ ಕಣ್ತೆರದು | ೩ |


paMkajanAbhanaMkitanAdavage
paMka lava lEshavilla shaMke bEDidake ,
maMkumatiyavaru paMkaja saMbhava
shaMkarara naMbi saMkaTapaTTudanariya,
biMkada biradina kaLaMka raMgEsha viThala
nirAtaMkadi poreva tannavara yENAMka sannibhavaktra ||

nODayyA hariye |pa|
paMDarapura nilayane kuMDaliSayanane |a.pa|

puMDarIkagolidavane aMdu
SuMDAlava poredavane
aMDaja vara vAhanane enna
maMDeya mEl karaviDutali | 1 |

vijayage sArathiyAdi avana
Bujaga SaradiMda poredi
nija Bakutage nI olida dEva
kujanamardana hari mudadi | 2 |

paTutara dEha prakASa-diMda
vaTuvaMte mereva SrISa
kuTila rahita raMgESa viThala
haTa mADade kaNteradu | 3 |

Leave a Reply

You might also like

error: Content is protected !!