Composer : Shri Kanakadasaru
ಬೈ ಬೈ ತನಕ ಊಟದ ಕೆಲಸ
ಉಂಡ ಮೇಲೆ ಶಯನ |ಪ|
ಬೈಲಾಗಿತು ಈ ವಗತನವೆಲ್ಲ
ರಕ್ಷಿಸಯ್ಯ ರಘುಕುಲ ತಿಲಕ |ಅ.ಪ|
ಪುರಾಣವಿಲ್ಲ ಪುಣ್ಯಕಥೆಯಿಲ್ಲ
ಪಾರಾಯಣದಿ ಮನಸಿಲ್ಲ |
ತರೋಣ ಬರೋಣ ತಿಂದ್-ಹೋಗೋಣ
ಮಲಗೋಣ ಮತ್ತೇಳೋಣ |೧|
ಕಣ್ಣಿಗೆ ಜೊಂಪಿಯು ಹತ್ತುವ ತನಕ
ಅನ್ಯರ ಕೂಡಾಟ |
ಹೆಣ್ಣು ಮಣ್ಣು ಹೊನ್ನು ಚಿಕ್ಕ ಬಾಲಕರ
ಸಂಗ ದೌರಿನ ಕಾಟ |೨|
ಹೇಗಾಗಿನ್ನಿಲ್ಲಿಗೆ ಬಂದೆ
ಇನ್ನಾದರೂ ಸಲಹೋ |
ಸಿರಿ ಕಾಗಿನೆಲೆಯಾದಿ ಕೇಶವ
ಶಿರಬಾಗಿ ನಾನು ಬೇಡಿಕೊಂಬೆ |೩|
bai bai tanaka UTada kelasa
uMDa mEle Sayana |pa|
bailAgitu I vagatanavella
rakShisayya raGukula tilaka |a.pa|
purANavilla puNyakatheyilla
pArAyaNadi manasilla |
tarONa barONa tiMd-hOgONa
malagONa mattELONa |1|
kaNNige joMpiyu hattuva tanaka
anyara kUDATa |
heNNu maNNu honnu cikka bAlakara
saMga daurina kATa |2|
hEgAginnillige baMde
innAdarU salahO |
siri kAgineleyAdi kESava
SirabAgi nAnu bEDikoMbe |3|
