Composer : Shri Purandara dasaru
ವೃಂದಾವನ ದೇವಿ ನಮೋ ನಮೋ |
ಚೆಲ್ವ ಮಂದರಧರನ ಪ್ರೀಯಳೇ ||ಪ||
ನಿನ್ನ ಸೇವಿಸಿ ಉದಕವನೆರೆಯಲು |
ಮುನ್ನ ಮಾಡಿದ ಪಾಪ ಹೋಗುವುದು ||
ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ |
ಉನ್ನತ ವೈಕುಂಠ ಪದವೀವಳೇ ||೧||
ಒಂದೊಂದು ದಳದಲ್ಲಿ ಒಂದೊಂದು ಮೂರುತಿ |
ಸಂದಣಿಸಿವೆ ಬಹು ಗುಪುತದಲಿ ||
ಬಂದು ಕುಂಕುಮ ಶಂಖ ಚಕ್ರ ಧರಿಸಿದರೆ |
ತಂದೆ ನಾರಾಯಣ ಕರೆದೊಯ್ಯುವ ||೨||
ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ |
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||
ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ |
ಹರಿ ತನ್ನವರೆಂದು ಕೈಯ ಪಿಡಿವ ||೩||
ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ |
ಉತ್ತಮ ವೈಕುಂಠ ಪದವೀವಳೆ ||
ಭಕ್ತಿಯಿಂದಲೆ ಬಂದು ಕೈಯ ಮುಗಿದವರನ್ನು |
ಕರ್ತೃ ನಾರಾಯಣ ಕರೆದೊಯ್ವನು ||೪||
ಆವಾವ ಪರಿಯಲ್ಲಿ ಸೇವೆಯ ಮಾಡಲು |
ಪಾವನ ವೈಕುಂಠ ಪದವೀವಳೇ ||
ದೇವ ಶ್ರೀ ಪುರಂದರ ವಿಟ್ಠಲರಾಯನ
ದೇವಿ ನಿನ್ನ ಮುಟ್ಟಿ ತ್ರಾಹಿ ತ್ರಾಹಿಯೆಂಬೆ ||೫||
vRuMdAvana dEvi namO namO |
celva maMdaradharana prIyaLE ||pa||
ninna sEvisi udakavanereyalu |
munna mADida pApa hOguvudu ||
enna ippattoMdu kuladavarigella |
unnata vaikuMTha padavIvaLE ||1||
oMdoMdu daLadalli oMdoMdu mUruti |
saMdaNisive bahu guputadali ||
baMdu kuMkuma SaMKa cakra dharisidare |
taMde nArAyaNa karedoyyuva ||2||
harige samarpisida tuLasi nirmAlyava |
koraLoLu dharisi karNadoLiTTare ||
durita rASigaLella aMji ODutalive |
hari tannavareMdu kaiya piDiva ||3||
hattu pradakShiNe hattu vaMdane mADe |
uttama vaikuMTha padavIvaLe ||
BaktiyiMdale baMdu kaiya mugidavarannu |
kartRu nArAyaNa karedoyvanu ||4||
AvAva pariyalli sEveya mADalu |
pAvana vaikuMTha padavIvaLE ||
dEva SrI puraMdara viTThalarAyana
dEvi ninna muTTi trAhi trAhiyeMbe ||5||
