Tulasi Sankeertane – Composer : Shri Vadirajaru
ಗೋವಿಂದ ಗೋವಿಂದ ರಾಮ
ಗೋವಿಂದ ನಾರಾಯಣ |
ಗೋವಿಂದ ಗೋಪಾಲಕೃಷ್ಣ |
ಗೋವಿಂದ ನಾರಾಯಣ |
ದೇವರ ದೇವನೆ ಬಾರೊ ದೇವಕೀ ನಂದನ ಬಾರೊ |
ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ |ಪ|
ಮತ್ಸ್ಯನಾಗಿ ಶ್ರುತಿಯ ತಂ-ದಿತ್ತ ಭಕ್ತವತ್ಸಲ |
ನೃತ್ಯ ಸತ್ಯವ್ರತನೆಂದು ಪೊತ್ತೆ ಬಾರೊ ಹರಿಯೆ |೧|
ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿದ |
ಗಿರಿಯನುದ್ಧರಿಸಿದ ಕೂರ್ಮ ಬಾರೊ ಹರಿಯೆ |೨|
ಧರೆಯನುದ್ಧರಿಸಲು ವರಾಹನಾದವನೆ |
ಹಿರಣ್ಯಾಕ್ಷನ ಗೆಲಿದ ಧೀರ ಬಾರೊ ಹರಿಯೆ |೩|
ನಂಬಿದ ಭಕ್ತರ ಕಾವೆನೆಂಬ ಕರುಣದಿ ಕಲ್ಲ |
ಕಂಬದಿಂದಲುದಿಸಿದ ಡಿಂಬ ಬಾರೊ ಹರಿಯೆ |೪|
ಮಾಣವಕ ವೇಷನಾಗಿ ಕೋಣಿಯಾನಳೆದವನೆ |
ದಾನವನ ಸೋಲಿಸಿದ ಜಾಣ ಬಾರೊ ಹರಿಯೆ |೫|
ಜಡಿದು ದುಷ್ಟ ನೃಪರ ಗಡಣವ ಬಿಡದೆ |
ಕಡಿದುಗ್ರ ಕೊಡಲಿಯ ಪ್ರೌಢ ಬಾರೊ ಹರಿಯೆ |೬|
ವೃಂದಾರಕವಂದ್ಯ ಸೇತುಬಂಧನ ವಿಹಾರ ದಶ |
ಕಂಧರನ್ನ ಕೊಂದ ರಾಮಚಂದ್ರ ಬಾರೊ ಹರಿಯೆ |೭ |
ಮಲ್ಲರನೆಲ್ಲರ ಸೀಳಿ ಬಲ್ಲಿದ ಮಾವನ ಕೊಂದ |
ಗೊಲ್ಲರ ವಲ್ಲಭ ನಮ್ಮ ನಲ್ಲ ಬಾರೊ ಹರಿಯೆ |೮|
ಬುದ್ಧನಾಗಿ ದೈತ್ಯರಿಗಬದ್ಧ ಪದ್ಧತಿಯ ತೋರಿ |
ರುದ್ರನ ಗೆಲಿಸಿದ ಸುಭದ್ರ ಬಾರೊ ಹರಿಯೆ |೯|
ಕಕ್ಕಸದ ಖಳರನ್ನು ಕಲ್ಕಿ ರೂಪನಾಗಿ ಮೇಲೆ |
ಶಿಕ್ಷಿಸುವ ಸುಜನರ ಪಕ್ಷ ಬಾರೊ ಹರಿಯೆ |೧೦|
ವಿಜಯ ಶ್ರೀಹಯವದನ ಭಜಕರ ಭಾಗ್ಯನೆ |
ಸುಜನಾಭಿ ರಾಜ ಶಶಿತೇಜ ಬಾರೊ ಹರಿಯೆ |೧೧|
gOviMda gOviMda rAma
gOviMda nArAyaNa |
gOviMda gOpAlakRuShNa |
gOviMda nArAyaNa |
dEvara dEvane bAro dEvakI naMdana bAro |
dEvEMdrana salahida dEva bAro hariye |pa|
matsyanAgi Srutiya taM-ditta Baktavatsala |
nRutya satyavrataneMdu potte bAro hariye |1|
sArida surarigAgi nIroLage muLugida |
giriyanuddharisida kUrma bAro hariye |2|
dhareyanuddharisalu varAhanAdavane |
hiraNyAkShana gelida dhIra bAro hariye |3|
naMbida Baktara kAveneMba karuNadi kalla |
kaMbadiMdaludisida DiMba bAro hariye |4|
mANavaka vEShanAgi kONiyAnaLedavane |
dAnavana sOlisida jANa bAro hariye |5|
jaDidu duShTa nRupara gaDaNava biDade |
kaDidugra koDaliya prauDha bAro hariye |6|
vRuMdArakavaMdya sEtubaMdhana vihAra daSa |
kaMdharanna koMda rAmacaMdra bAro hariye |7 |
mallaranellara sILi ballida mAvana koMda |
gollara vallaBa namma nalla bAro hariye |8|
buddhanAgi daityarigabaddha paddhatiya tOri |
rudrana gelisida suBadra bAro hariye |9|
kakkasada KaLarannu kalki rUpanAgi mEle |
SikShisuva sujanara pakSha bAro hariye |10|
vijaya SrIhayavadana Bajakara BAgyane |
sujanABi rAja SaSitEja bAro hariye |11|
