Monday – Daava kula

Tulasi Sankeertane – Composer : Shri Vadirajaru

ಗೋವಿಂದ ಗೋವಿಂದ ರಾಮ
ಗೋವಿಂದ ನಾರಾಯಣ |
ಗೋವಿಂದ ಗೋಪಾಲಕೃಷ್ಣ |
ಗೋವಿಂದ ನಾರಾಯಣ |

ದಾವ ಕುಲವೆಂದರಿಯಬಾರದು
ಗೋವ ಕಾವ ಗೊಲ್ಲನಂತೆ |ಪ|

ತಾನು ಪೋಗಿ ಪಾರಿಜಾತದ ಹೂವ
ಸತಿಗೆ ತಂದನಂತೆ |ಅ|

ಗೋಕುಲದಲ್ಲಿ ಪುಟ್ಟಿದನಂತೆ
ಗೋವುಗಳನೆ ಕಾಯ್ದನಂತೆ |
ಕೊಳಲನೂದಿ ಮೃಗ ಪಕ್ಷಿಗಳ
ಮರುಳು ಮಾಡಿದ ದೇವನಂತೆ |೧|

ತರಳತನದಲಿ ಒರಳನೆಳೆದು
ಮರನ ಮುರಿದು ಮತ್ತಿಯ ತ |
ನ್ನೊಡಲ ಒಳಗೆ ಈರೇಳು ಜಗಂಗಳ
ಪಡೆದ ತಾಯಿಗೆ ತೋರಿದನಂತೆ |೨|

ಗೊಲ್ಲ ಸತಿಯರ ಮನೆಯ ಪೊಕ್ಕು
ಕಳ್ಳತನವ ಮಾಡಿದನಂತೆ |
ಬಲ್ಲಿದ ಪೂತನಿ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ |೩|

ಕಾಲಿಲಿ ಶಕಟನ ಒದ್ದನಂತೆ
ಗಾಳಿ ಕಂಬವ ಕಿತ್ತನಂತೆ |
ಕಾಳಿಂಗ ನಾಗನ ಫಣವ ತುಳಿದು
ಬಾಲರಿಗೆಲ್ಲ ಒಲಿದನಂತೆ |೪|

ಸರ್ಪ ತನ್ನ ಹಾಸಿಗೆಯಂತೆ
ಪಕ್ಷಿ ತನ್ನ ವಾಹನವಂತೆ |
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದು ಮುಖದ ಚೆಲುವನಂತೆ |೫|

ಕಡಲ ಮಗಳ ತಂದನಂತೆ
ಕರಡಿ ಮಗಳು ಮಡದಿಯಂತೆ |
ಕೊಡೆಯ ಪಿಡಿದು ಬೇಡಿದನಂತೆ
ಈರೇಳು ಲೋಕಕ್ಕೆ ಒಡೆಯನಂತೆ |೬|

ಹಡಗಿನೊಳಗಿಂದ ಬಂದನಂತೆ
ಕಡಲ ತಡಿಯಲಿ ನಿಂದನಂತೆ |
ಗುರು ಮಧ್ವಮುನಿಗೆ ಒಲಿದನಂತೆ
ಹಯವದನ ಚೆಲುವನಂತೆ |೭|


gOviMda gOviMda rAma
gOviMda nArAyaNa |
gOviMda gOpAlakRuShNa |
gOviMda nArAyaNa |

dAva kulaveMdariyabAradu
gOva kAva gollanaMte |pa|

tAnu pOgi pArijAtada hUva
satige taMdanaMte |a|

gOkuladalli puTTidanaMte
gOvugaLane kAydanaMte |
koLalanUdi mRuga pakShigaLa
maruLu mADida dEvanaMte |1|

taraLatanadali oraLaneLedu
marana muridu mattiya ta |
nnoDala oLage IrELu jagaMgaLa
paDeda tAyige tOridanaMte |2|

golla satiyara maneya pokku
kaLLatanava mADidanaMte |
ballida pUtani viShavanuMDu
mellane tRuNana koMdanaMte |3|

kAlili SakaTana oddanaMte
gALi kaMbava kittanaMte |
kALiMga nAgana PaNava tuLidu
bAlarigella olidanaMte |4|

sarpa tanna hAsigeyaMte
pakShi tanna vAhanavaMte |
mukkaNNa tanna mommaganaMte
muddu muKada celuvanaMte |5|

kaDala magaLa taMdanaMte
karaDi magaLu maDadiyaMte |
koDeya piDidu bEDidanaMte
IrELu lOkakke oDeyanaMte |6|

haDaginoLagiMda baMdanaMte
kaDala taDiyali niMdanaMte |
guru madhvamunige olidanaMte
hayavadana celuvanaMte |7|

You might also like

error: Content is protected !!