Saturday – Ninna padava

Tulasi Sankeertane – Composer : Shri Vadirajaru

ಗೋವಿಂದ ಗೋವಿಂದ ರಾಮ
ಗೋವಿಂದ ನಾರಾಯಣ |
ಗೋವಿಂದ ಗೋಪಾಲಕೃಷ್ಣ |
ಗೋವಿಂದ ನಾರಾಯಣ |

ನಿನ್ನ ಪಾದವ ನಂಬಿದೆ ನಾ
ನಿನ್ನನೆ ಮರೆಹೊಕ್ಕೆನು |
ನಿನ್ನ ದಾಸರ ದಾಸ ನಾನು ಪ್ರ-
ಸನ್ನವೇಂಕಟ ಪಾಹಿ ಮಾಂ |ಪ|

ಲೋಕಲೋಕಂಗಳನೆಲ್ಲಾ-
ನೇಕರೂಪದಿ ಸಲಹಿದೆ |
ಸಾಕು ಸಾಸಿರ ನಾಮದೊಡೆಯ
ಲೋಕ ವೇಂಕಟ ಪಾಹಿ ಮಾಂ |೧|

ಮಂದರಾದ್ರಿಯನೊಂದು ಬೆರಳಲಿ
ಬಂದು ನೀ ನಲಿದೆತ್ತಿದೆ |
ಸಿಂಧು ಶಯನಾನಂದ ಮೂರುತಿ
ತಂದೆ ವೇಂಕಟ ಪಾಹಿ ಮಾಂ |೨|

ರಾಮ ಭಾರ್ಗವರಾಮ ದಶರಥ-
ರಾಮ ರಘುಕುಲರಾಮನೆ |
ಕಾಮಿತಾರ್ಥವನೀವ ದಯಾಳು
ಕರುಣಿ ವೇಂಕಟ ಪಾಹಿ ಮಾಂ |೩|

ಕರಿಯು ಮೊರೆಯಿಡೆ ಕೇಳಿ ಬೇಗದಿ
ಭರದಿ ಮಕರಿಯ ಸೀಳಿದೆ |
ಪರಮ ಭಕ್ತರ ಧುರದಿ ಪಾಲಿಪ
ವರದವೇಂಕಟ ಪಾಹಿ ಮಾಂ |೪|

ನರಗೆ ಸಾರಥಿಯಾಗಿ ತುರಗವ
ಭರದಿ ನೀನೇ ನಡೆಸಿದೆ |
ಹರಿ ಮುಕುಂದ ಮುರಾರಿ ರಕ್ಷಿಸು
ವರದವೇಂಕಟ ಪಾಹಿ ಮಾಂ |೫|

ನಾರದಾದಿ ಮುನೀಂದ್ರರೆಲ್ಲರ
ಭರದಿ ನೀನೇ ಪಾಲಿಪೆ |
ಗರುವ ಮೂಡಲಗಿರಿಯವಾಸ
ಹರಿಯೆ ವೇಂಕಟ ಪಾಹಿ ಮಾಂ |೬|

ಶರಣು ಶ್ರೀ ವೈಕುಂಠ ನಾಯಕ
ಶರಣು ಶ್ರೀ ಪುರುಷೋತ್ತಮ |
ಶರಣು ಶ್ರೀಧರ ಗರುಡ ವಾಹನ
ಶರಣು ವೇಂಕಟ ಪಾಹಿ ಮಾಂ |೭|


gOviMda gOviMda rAma
gOviMda nArAyaNa |
gOviMda gOpAlakRuShNa |
gOviMda nArAyaNa |

ninna pAdava naMbide nA
ninnane marehokkenu |
ninna dAsara dAsa nAnu pra-
sannavEMkaTa pAhi mAM |pa|

lOkalOkaMgaLanellA-
nEkarUpadi salahide |
sAku sAsira nAmadoDeya
lOka vEMkaTa pAhi mAM |1|

maMdarAdriyanoMdu beraLali
baMdu nI nalidettide |
siMdhu SayanAnaMda mUruti
taMde vEMkaTa pAhi mAM |2|

rAma BArgavarAma daSaratha-
rAma raGukularAmane |
kAmitArthavanIva dayALu
karuNi vEMkaTa pAhi mAM |3|

kariyu moreyiDe kELi bEgadi
Baradi makariya sILide |
parama Baktara dhuradi pAlipa
varadavEMkaTa pAhi mAM |4|

narage sArathiyAgi turagava
Baradi nInE naDeside |
hari mukuMda murAri rakShisu
varadavEMkaTa pAhi mAM |5|

nAradAdi munIMdrarellara
Baradi nInE pAlipe |
garuva mUDalagiriyavAsa
hariye vEMkaTa pAhi mAM |6|

SaraNu SrI vaikuMTha nAyaka
SaraNu SrI puruShOttama |
SaraNu SrIdhara garuDa vAhana
SaraNu vEMkaTa pAhi mAM |7|

You might also like

error: Content is protected !!