Composer : Shri Vijayadasaru
ಪಾಲಿಸೆ ಪದುಮಾಲಯೆ ನೀನೇ ಗತಿ
ಪಾಲಿಸೆ ಪದುಮಾಲಯೆ ||ಪ||
ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ
ನಂದ ಗೋಕುಲ ಬಾಲೆಯರ ಮೋಹಿಸುತ
ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ||ಅ.ಪ||
ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದವನ್ನು
ನಂಬಿದೆ ನೀ ಬಲ್ಲೆ, ತಡ ಮಾಡದಲೆ,
ಚಿಣ್ಣ ಕರೆಯಲು ಘನ್ನ ಮಹಿಮನು
ಉನ್ನತದ ರೂಪಿನಲಿ ,
ಗುಣ ಸಂಪನ್ನ ರಕ್ಕಸರನ್ನು ಸೀಳಿದ
ಪನ್ನಗಾದ್ರಿ ನಿವಾಸ ಹರಿಪ್ರಿಯೆ ||೧||
ಅರಿಯದ ತರಳನೆಂದು ಶ್ರೀಪತಿ ಸತಿ
ಕರುಣದಿ ಸಲಹೆ ಬಂದು, ಕಾರುಣಾ ಸಿಂಧು,
ಸರಸಿಜಾಸನ ರುದ್ರರೀರ್ವರ ವರದಿ
ಮೂರ್ಖರು ಸುರರ ಬಾಧಿಸೆ
ಹರಿವರರ ದಂಡೆತ್ತಿ ಬಹುಮುಖ
ದುರುಳನ ಶಿರ ತರಿದವನ ಪ್ರಿಯೆ ||೨||
ಅಜ ಮನಸಿಜ ಜನನಿ ಅಂಬುಜಪಾಣಿ
ಭುಜಗ ಸನ್ನಿಭ ವೇಣಿ, ನಿತ್ಯ ಕಲ್ಯಾಣಿ
ಕುಜನ ಮರ್ದನ ವಿಜಯವಿಠಲನ ಭಜಿಸಿ
ಪಾಡುವ ಭಕ್ತ ಕೂಟವ ನಿಜದಿ
ಸಲಹುವೆನೆಂಬ ಬಿರುದುಳ್ಳ
ವಿಜಯಸಾರಥಿ ವಿಶ್ವಂಬರ ಪ್ರಿಯೆ ||೩||
pAlise padumAlaye nInE gati
pAlise padumAlaye ||pa||
bAlakanu tAnAgi gOpige lIleyiMdali
naMda gOkula bAleyara mOhisuta
asurara kAlanenisida bAlakana priye ||a.pa||
anyara neneyalolle ninnaya pAdavannu
naMbide nI balle, taDa mADadale,
ciNNa kareyalu Ganna mahimanu
unnatada rUpinali ,
guNa saMpanna rakkasarannu sILida
pannagAdri nivAsa haripriye ||1||
ariyada taraLaneMdu SrIpati sati
karuNadi salahe baMdu, kAruNA siMdhu,
sarasijAsana rudrarIrvara varadi
mUrKaru surara bAdhise
harivarara daMDetti bahumuKa
duruLana Sira taridavana priye ||2||
aja manasija janani aMbujapANi
bhujaga sanniBa vENi, nitya kalyANi
kujana mardana vijayaviThalana Bajisi
pADuva Bakta kUTava nijadi
salahuveneMba biruduLLa
vijayasArathi viSvaMbara priye ||3||
