-
Vrundavana Devi namo
Composer : Shri Purandara dasaru ವೃಂದಾವನ ದೇವಿ ನಮೋ ನಮೋ |ಚೆಲ್ವ ಮಂದರಧರನ ಪ್ರೀಯಳೇ ||ಪ|| ನಿನ್ನ ಸೇವಿಸಿ ಉದಕವನೆರೆಯಲು |ಮುನ್ನ ಮಾಡಿದ ಪಾಪ ಹೋಗುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ |ಉನ್ನತ ವೈಕುಂಠ ಪದವೀವಳೇ ||೧|| ಒಂದೊಂದು ದಳದಲ್ಲಿ ಒಂದೊಂದು ಮೂರುತಿ |ಸಂದಣಿಸಿವೆ ಬಹು ಗುಪುತದಲಿ ||ಬಂದು ಕುಂಕುಮ ಶಂಖ ಚಕ್ರ ಧರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ ||೨|| ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ |ಹರಿ…
