Composer : Shri Harapanahalli Bheemavva
ವಿಷ್ಣುಪಾದವ ನೋಡಿದೆ ಎನ್ನ ಮನ-
ದಿಷ್ಟ ಫಲಗಳ ಬೇಡಿದೆ |
ವಿಷ್ಣು ಪಾದವ ನೋಡ್ಯಭೀಷ್ಟ ಫಲಗಳ ಬೇಡಿ
ಶ್ರೇಷ್ಠ ಪಾದಕೆ ಶಿರವ ಮುಟ್ಟಿಸ್ವಂದನೆ ಮಾಡಿ [ಪ]
ಗಂಗೆ ಹುಟ್ಟಿದ್ದ ಪಾದ ಇದು ನೋಡೆ
ಗಯನ ಮೆಟ್ಟಿದ್ದ ಪಾದ
ತಂಗಿ ದ್ರೌಪದಿ ದೇವಿ ಪತಿಗೆ ಸಾರಥಿಯಾಗಿ
ಸಂಗ್ರಾಮದಿ ರಥವ ನೆಲಕೊತ್ತಿ ಉಳುಹಿದ ಪಾದ (೧)
ಧ್ವಜ ವಜ್ರಾಂಕುಶದ ಪಾದ ಶಂಖವು
ಚಕ್ರ ಪದ್ಮ ರೇಖ್ಯುಳ್ಳ ಪಾದ
ಮಧುರೆಯಲಿ ಮಾವನ ಮಂಚಿಕೆಯಲ್ ಹಾರಿ
ವಧೆಯ ಮಾಡಿ ಮಾತೆ ಬದಿಲಿ ಬಂದ ಪಾದ (೨)
ಬಲಿಯ ಶಿರ ತುಳಿದ ಪಾದ
ನೆಲನ ಮೂರಡಿಯ ಮಾಡಿದ್ದ ಪಾದ
ಶಿಲೆಯಾದಹಲ್ಯೆಯ ಉದ್ಧಾರವನು ಮಾಡಿ
ಮಲತಾಯಿಯ ಮಾತಿಗರಣ್ಯ ತಿರುಗಿದ ಪಾದ (೩)
ಖಗನ ಹೆಗಲೇರೊ ಪಾದ ಕಾಳಿಫಣ
ಜಿಗಿದು ತುಳಿದಂಥ ಪಾದ
ಅಗರ ಕೇಸರಿ ಗಂಧದಿಂದ ಪೂಜಿತ ಪಾದ ಕಾ-
ಲುಗುರಿನಲಿ ಬ್ರಹ್ಮಾಂಡ ಕಟಾಹ ಸೀಳಿದ ಪಾದ (೪)
ಲಕ್ಷ್ಮಿ ಸೇವಿಸುವ ಪಾದ ಈ ಗಯದಿ
ಸಾಕ್ಷಾತ ಹರಿಯ ಪಾದ
ಕುಕ್ಷಿಯಲಿ ತ್ರಿಜಗವಿಟ್ಟು ರಕ್ಷಿಸುವಂಥ
ಮೋಕ್ಷಪ್ರದ ಭೀಮೇಶಕೃಷ್ಣ ಮೂರುತಿ ಪಾದ (೫)
viShNupAdava nODide enna mana-
diShTa PalagaLa bEDide |
viShNu pAdava nODyaBIShTa PalagaLa bEDi
SrEShTha pAdake Sirava muTTisvaMdane mADi [pa]
gaMge huTTidda pAda idu nODe
gayana meTTidda pAda
taMgi draupadi dEvi patige sArathiyAgi
saMgrAmadi rathava nelakotti uLuhida pAda (1)
dhvaja vajrAMkuSada pAda SaMKavu
cakra padma rEKyuLLa pAda
madhureyali mAvana maMcikeyal hAri
vadheya mADi mAte badili baMda pAda (2)
baliya Sira tuLida pAda
nelana mUraDiya mADidda pAda
SileyAdahalyeya uddhAravanu mADi
malatAyiya mAtigaraNya tirugida pAda (3)
Kagana hegalEro pAda kALiPaNa
jigidu tuLidaMtha pAda
agara kEsari gaMdhadiMda pUjita pAda kA-
lugurinali brahmAMDa kaTAha sILida pAda (4)
lakShmi sEvisuva pAda I gayadi
sAkShAta hariya pAda
kukShiyali trijagaviTTu rakShisuvaMtha
mOkShaprada BImESakRuShNa mUruti pAda (5)
