Haridasa seva

  • Nee paaliso gururaya

    Composer : Shri Gurujagannatha dasaru ನೀ ಪಾಲಿಸು ಗುರುರಾಯ ಎನ್ನಕಾಪಾಡು ಬಾ ಮಹರಾಯ [ಪ] ಭೂಪತಿ ನೀ ಎನ್ನ ಆಪದ್ಭಾಂಧವಶ್ರೀಪತಿ ಪದಪ್ರಿಯ ಈ ಪರಿ ಮಾಡದೆ [ಅ.ಪ] ಪಾಪಿಗಳೊಳಗೆ ಹಿರಿಯನು ನಾನುನಿಷ್ಪಾಪಿಗಳರಸೆ ಗುರುರಾಯಅಪಾರ ಜನುಮದಿ ಬಂದೆನೊ ಈಗತಾಪತ್ರಯಗಳ ಕಳೆ ಮಹರಾಯಾ (೧) ನೀಚರ ಒಳಗೆ ನೀಚನೊ ಪಾಪ-ಮೋಚನೆ ಮಾಡೋ ಗುರುರಾಯಯೊಚನೆ ಇಲ್ಲದೆ ಅನ್ಯರ ಅನುದಿನಯಾಚಿಸಿ ಕೆಟ್ಟೆನೊ ಮಹರಾಯಾ (೨) ದಾತನೆ ನಿನ್ನಯ ಪೋತನು ನಾನಯ್ಯಈತೆರ ಮಾಳ್ಪರೆ ಗುರುರಾಯದಾತ ಗುರು ಜಗನ್ನಾಥ ವಿಠ್ಠಲ ಪದದೂತನು ನೀನೆ ಮಹರಾಯಾ…

    ,
  • Raghavendra munirayara

    Composer : Shri Prasannavenkata dasaru ರಾಘವೇಂದ್ರ ಮುನಿರಾಯರ ಸ್ಮರಣೆ |ಜಾಗಿಲ್ಲದೆ ಮಾಡಿ ನೀಗೊ ಭವಣೆ [ಪ] ಹಿಂದಿನ ಮೂರು ಜನುಮಗಳಲ್ಲೂ |ಇಂದಿರೇಶನನು ಒಲಿಸಿ ಮೆರೆದು ಬಲುಕುಂದಿಲ್ಲದ ಪುಣ್ಯಗಳಿಸಿ ಸುರತರು |ಮಂದ ಭಾಗ್ಯರಿಗೆ ಹಂಚುತಲಿಹರು [೧] ಭೂತಪ್ರೇತ ಸಕಲಾದಿ – ಶಕುನಭಯ |ಘಾತಚಕ್ರ ಜಾತಕದ ಪೀಡೆಗಳು ||ಗತಿಸುವವೀಯತಿ ಕರುಣೆ ತೋರಲು |ನಿತ್ಯತುತಿಸೆ ನಿಜ ಮುಕುತಿ ನಿಶ್ಚಿತವು [೨] ಕಲಿಬಲ ಹೆಚ್ಚಿ ನಲುಗಿದ ಜನಕೆ |ಸುಲಭದ ದಾರಿಲಿ ನಿಲ್ಲಿಸಿ |ನಳಿಲನನಾಭ ಪ್ರಸನ್ವೆಂಕಟನಾಜ್ಞೆಲಿ |ಸುಲಲಿತ ಮಹಿಮೆಗಳ ತೋರಿ ಮೆರೆಯುತಿಹ [೩]…

    ,
  • Tangi kelidya Raghavendra

    Composer : Shri Gurupranesha vittala ತಂಗಿ ಕೇಳಿದ್ಯಾ ರಾಘವೇಂದ್ರ-ಅಘಂಗಳ ಕಳೆದು ಸುಖಂಗಳ ಕೊಡುವದು [ಪ] ಶ್ರೀಪೂರ್ಣಭೋಧರ ಮತಾಪಯೋಬ್ಧಿಗೆ ಚಂದ್ರತಾಪಸೋತ್ತಮರ ದಿವ್ಯಾಪಾರ ಮಹಿಮೆಯ | ೧ | ಅಂಗ ಹೀನರಿಗೆ ದಿವ್ಯಾಂಗ ಕೊಟ್ಟರೆಂದುಸಂಗೀತ ಮುಖದಿ ಜನಂಗಳು ಪಾಡುವುದು | ೨ | ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದುಸುವಿವೇಕ ಮನದಿಂದ ಕವಿಜನ ಪಾಡುವುದು | ೩ | ವಂಧ್ಯ ಸ್ತ್ರೀಯರು ಬಂದು ನಿಂದು ಆರಾಧಿಸೆಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ | ೪ | ಗುರುಪ್ರಾಣೇಶವಿಠ್ಠಲ ಸರ್ವ ಕಾಮಿತಾರ್ಥವಗುರು ರಾಘವೇಂದ್ರರಲ್ಲಿ…

    ,

error: Content is protected !!