Haridasa seva

  • Kandena Yatirajana

    Composer : Shri Gurushyamasundara dasaru ಕಂಡೆನಾ ಯತಿರಾಜನಾಪುಂಡರೀಕಾಕ್ಷನ ಪಾದ ಭಜಕನಾ |ಪ| ದಂಡ ಕಮಂಡಲ ಧರಿಸಿಹನಾಉದ್ಧಂಡರ ವಾದದಿ ಗೆಲಿದಿಹನಾ |ತಂಡತಂಡದಿ ಬರುವ ಭಕುತರನಾಹಿಂಡು ಪಾಪವ ತರಿದು ಪೊರೆವನಾ [೧] ಕಾಷಾಯ ವಸನ ವಿಭೂಷಣವಿಶೇಷ ಮಹಿಮೆಯಿಂದ ಮೆರೆಯುವನಾವಾಸುಕಿ ಶಯನನ ನಿಜದಾಸನಾಭೂಷಿತ ಮಂತ್ರನಿಲಯ ನಾಥನಾ [೨] ಕರಿವರದನ ದಿವ್ಯ ದಯವ ಪಡೆದನಾವರತುಂಗತೀರಿ ರಾಜಿಪನಾ |ಗುರು ಶ್ಯಾಮಸುಂದರನ ನಿಜವರ ಭಕ್ತನಾಗುರುಸಾರ್ವಭೌಮನ ಪರಿಮಳಾರ್ಯನಾ [೩] kaMDenA yatirAjanApuMDarIkAkShana pAda BajakanA |pa| daMDa kamaMDala dharisihanAuddhaMDara vAdadi gelidihanA |taMDataMDadi baruva…

  • Endu kambe guruve

    Composer : Shri Vittalesha ಎಂದು ಕಾಂಬೆ ಗುರುವೆ ದೊರೆಯೆ [ಪ]ಎಂದು ಕಾಂಬೆ ನಿನ್ನ ಚಂದಿರ ಮುಖಸಿರಿತಂದೆ ಶ್ರೀ ರಾಘವೇಂದ್ರ ಇಂದು ದಯವ ತೋರೊ [ಅ.ಪ] ಘೋರ ಸಂಸಾರದಲ್ಲಿ ಜಾರಿ ಹೋಯಿತು ಕಾಲಸಾರಿ ಕೇಳುವೆ ಸುಕುಮಾರ ಪ್ರಹ್ಲಾದ ನಿನ್ನ [೧] ನಾನಾರೋಗಗಳಲ್ಲಿ ಕ್ಷೀಣವಾಯಿತು ದೇಹಏನು ಸ್ಥಿರವೋ ತನು ಮೌನಿ ವ್ಯಾಸನೆ ನಿನ್ನ [೨] ಕ್ಲೇಶ ಕಷ್ಟಗಳಲ್ಲಿ ಮಾಸಿ ಹೋಯಿತು ಬುದ್ಧಿದೈಶಿಕ ವರ ವಿಠಲೇಶದಾಸನೆ ನಿನ್ನ [೩] eMdu kAMbe guruve doreye [pa]eMdu kAMbe ninna caMdira…

  • Raghavendra salaho

    Composer : Shri Vidyaratnakara Tirtharu ರಾಘವೇಂದ್ರ ಸಲಹೋ ಗುಣಸಾಂದ್ರ || ಪ || ಭಗವದ್ಗೀತಾವಿವರಣ ತಂತ್ರ ದೀಪನಿಗಮತತಿಗೆ ಖಂಡಾರ್ಥವ ರಚಿಸಿಋಗರ್ಥಗಳನ್ನು ಅತಿ ಸ್ಪುಟವಾಗಿ ವಿವರಿಸಿಖಗವಾಹನನ ತೋಷಪಡಿಸಿದ ಧೀರ || ೧ || ಧರಣಿದಿವಿಜರಿಗೆ ವರಗಳ ಕೊಡುವಂಥಸುರತರುವೇ ನಿನಗೆ ಕರಗಳ ಮುಗಿದುಪರಮ ಪುರುಷಹರಿ ಚರಣಕಮಲದಲಿಸ್ಥಿರವಾದ ಭಕುತಿಯ ಬೇಡುವೆ ಧೀರ || ೨ || ಚಂಡಕುಮತಗಳ ಖಂಡಿಸಿ ಬುಧಜನಮಂಡಲದೊಳಗೆ ಪ್ರಚಂಡನೆಂದೆನಿಸಿಕುಂಡಲಿಶಯನನ ಪಾದಮಂಡಿತ ಹೃದಯ ಭೂಮಂಡಲದೊಳಗೆ ಅಖಂಡಲನಾದ || ೩ || ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತಪದ್ಧತಿ ಬಿಡದಂತೆ ಮಾಡಿ…

    ,

error: Content is protected !!