-
Hindilla swami mundilla
Composer : Shri Purandara dasaru ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-ವಿಂದ ನೀನಲ್ಲದೆ ಇಹಪರವಿಲ್ಲ |ಪ| ಪರರ ಬೇಡಿಪ್ಪಂತೆ ಗತಿಯಾಯಿತಲ್ಲನರರ ತುತಿಸಿ ನಾಲಿಗೆ ಬರಡಾಯಿತಲ್ಲಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾಪದ ಪಂಜರಗೆ |೧| ತನುವು ತನ್ನದಲ್ಲ ತನ್ನವರು ತನಗಿಲ್ಲಅನುಕೂಲವಿರುವಾಗ ಸತಿಸುತರೆಲ್ಲಅನುವು ತಪ್ಪಿ ಮನ ತಲ್ಲಣಿಸುವಾಗವನಜನಾಭ ನೀನಲ್ಲದೆ ಯಾರಿಲ್ಲ |೨| ಮಾತಾಪಿತೃ ಬಂಧುಗಳು ಮುಂತಾಗಿ ಸಂ-ಪ್ರೀತಿಯೊಳಿರಲು ಮನ್ನಿಪರೈ ಎಲ್ಲಕಾತರನಾಗ್ ಯಮ ಕೊಂಡೊಯ್ಯುವಾಗ ಸಂ-ಗಾತ ಇನ್ನ್ಯಾರಯ್ಯ ಪುರಂದರವಿಠಲ |೩| hiMdillA svAmi muMdillA , gO-viMda nInallade…
-
Vijita madana shubha
Composer : Shri Shrikara vittala ವಿಜಿತ ಮದನ ಶುಭ ಕಾಯಾ ಹೇ [ಪ]ಗೊಪಾಲದಾಸಾಖ್ಯ ತಾಪಸರೊಡೆಯತಾಪ ನಿವಾರಿಸೊ ನಾ ಪಾದ ಪಿಡಿವೆನೊ [ಅ.ಪ] ಮೇಲು ಕರುಣ ಸಿರಿ ಲೋಲ ಪಂಢರಿ ರಾಯಆಲೆನಾಹಿಯನ್ನೆ ಕೇಳಿ ನೀ ಸ್ತುತಿಸಿದೆ [೧] ವಟುವರ ಶ್ರೀಕರ ವಿಠ್ಠಲನ ಭಕುತಿಲಿತೃಟಿ ಬಿಡದಲಿ ನೆನೆವಾ , ಚಟುಲ ವಿಕ್ರಮನೆ [೨] vijita madana shubha kAyA hE [pa]gopAladAsAkhya tApasaroDeyatApa nivAriso naa pAda piDiveno [a.pa] mElu karuNa siri lOla paMDhari rAyaAlenAhiyanne…
-
Puttisa byadavo
Composer : Shri Purandara dasaru ಪುಟ್ಟಿಸ ಬ್ಯಾಡವೊ ದೇವ ಎಂದೆಂದಿಗು ಇಂಥ ||ಪ||ಕಷ್ಟಪಟ್ಟು ತಿರುಗುವ ಪಾಪಿ ಜೀವನವ ||ಅ.ಪ|| ನರರ ಸ್ತುತಿಸಿ ನಾಲಿಗೆ ಬರಡು ಮಾಡಿ ಕೊಂಡುಉದರ ಪೋಷಣೆಗಾಗಿ ಅವರಿವರೆನ್ನದೆಧರೆಯೊಳು ಲಜ್ಜೆ ನಾಚಿಕೆಗಳನೀಡ್ಯಾಡಿಪರರ ಪೀಡಿಸಿ ತಿಂಬ ಪಾಪಿ ಜೀವನವ |೧| ಎಂಟು ಗೇಣು ಶರೀರವು ಒಂದು ಗೇಣು ಮಾಡಿ ಕೊಂಡುಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿಗಂಟಲ ಸೆರೆಗಳುಬ್ಬಿ ಕೇಳವೊ ಸಂಕಟವ ವೈ-ಕುಂಠಪತಿ ನೀನೇ ಬಲ್ಲೆ ಕಪಟ ನಾಟಕನೆ |೨| ಲೆಕ್ಕದಲ್ಲಿ ನೀ ಮೊದಲು ಮಾಡಿದಷ್ಟಲ್ಲದೆಸಖಿಯು ವೆಗ್ಗಳವಾಗಿ ಕೊಡುವರುಂಟೆಕಕ್ಕುಲಾತಿ…