Composer: Shri Purandara dasaru
ನೀ ದಯಾಪರನೊ ನಿನ್ನವರ ಸಾಧನವೊ || ಪ ||
ಮುದ್ದು ಹಯವದನ ಸುಖಸದನ ಪೇಳಿದನ || ಅ ಪ||
ಮದಕರಿಯು ಸರಸಿಯೊಳು ಮಕರಿ ಬಾಧೆಗೆ ಸಿಲುಕಿ |
ಪದುಮಾಕ್ಷ ಪದುಮೇಶ ಪದುಮನಾಭನೆನಲು ||
ಪದುಮ ಸಂಭವನಯ್ಯ ಪಾಹಿಪಾಹಿ ಎನಲು |
ಒದಗಿ ಪಾಲಿಸಿದೆ ತವ ದಯವೋ ಸಾಧನವೊ || ೧ ||
ಅಂತ್ಯಜಳ ಸಹವಾಸ-ದಲಿ ವಿಪ್ರವರನೊಬ್ಬ |
ಸಂತೋಷದಿಂದಲಿ ಬಹುಕಾಲ ಕಳೆದು ||
ಪ್ರಾಂತ್ಯ ಸಮಯಕೆ ತನ್ನ ಮಗನ ಕರೆಯಲು ಕಾಯ್ದೆ |
ಕಂತುಪಿತನೆ ನಿನ್ನ ದಯವೋ ಸಾಧನವೊ || ೨ ||
ಅವರವರ ಯೋಗ್ಯತೆಯ ಅರಿತು ಪ್ರೇರಕನಾಗಿ |
ಅವರಿಂದ ನುಡಿಸಿ ಅವರ ನುಡಿಗಳಿಗೆ ಹಿಗ್ಗಿ ||
ಅವರಿಗೊಲಿದೆ ನಮ್ಮ ಪುರಂದರವಿಠ್ಠಲನೆ |
ಅವನೀಶನೆ ನಿನ್ನ ದಯವೊ ಸಾಧನವೊ || ೩ ||
nI dayAparano ninnavara sAdhanavo || pa ||
muddu hayavadana suKasadana pELidana || a pa||
madakariyu sarasiyoLu makari bAdhege siluki |
padumAkSha padumESa padumanABanenalu ||
paduma saMBavanayya pAhipAhi enalu |
odagi pAliside tava dayavO sAdhanavo || 1 ||
aMtyajaLa sahavAsa-dali vipravaranobba |
saMtOShadiMdali bahukAla kaLedu ||
prAMtya samayake tanna magana kareyalu kAyde |
kaMtupitane ninna dayavO sAdhanavo || 2 ||
avaravara yOgyateya aritu prErakanAgi |
avariMda nuDisi avara nuDigaLige higgi ||
avarigolide namma puraMdaraviThThalane |
avanISane ninna dayavo sAdhanavo || 3 ||

Leave a Reply
You must be logged in to post a comment.