-
Krishnana nodirai
Composer: Shri Jagannatha dasaru ಕೃಷ್ಣನ ನೋಡಿರೈ ಭಕ್ತಿ ಸಂತುಷ್ಟನ ಪಾಡಿರೈ || ಪ ||ಕೃಷ್ಣೆಗೆ ಒಲಿದತಿ ದುಷ್ಟ ರಾಯರ ತರಿದ |ಜಗದೊಳು ಮೆರೆದ || ಅ ಪ || ನಂದವ್ರಜದಲಿ ಕಂದನಾಗಿ ತಾ ಬೆಳೆದ |ದೈತ್ಯರನಳಿದ |ವೃಂದಾವನದೊಳು ಇಂದು ಮುಖಿಯರನು ಕೂಡಿ |ಪರಿಪರಿಯಾಡಿ |ಒಂದೊಂದು ಪರಿಲೀಲೆ ಸಂದೋಹಗಳ ತೋರಿಸಿದ |ಮೋಹ ಬೆರೆಸಿದ ||ಕಂದರ್ಪ ಪಿತ ತನ್ನ ಹೊಂದಿದ ಜನರನು ಕಾವಾ |ವರಗಳನೀವಾ || ೧ || ಬಾಲೇರ ಮನೆಯಲಿ ಪಾಲು ಮೊಸರುಗಳ ಕದ್ದ |ತೀವ್ರದಿ ಮೆದ್ದ…
-
Amma nimma manegalalli
Composer : Shri Purandara dasaru ಅಮ್ಮ ನಿಮ್ಮ ಮನೆಗಳಲ್ಲಿನಮ್ಮ ರಂಗನ ಕಂಡಿರೇ ||ಪ|| ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದಶ್ರೀ ಗಂಧ ಮೈಯೊಳಗಮ್ಮಲೇಸಾಗಿ ತುಳಸಿಯ ಮಾಲೆಯ ಹಾಕಿದವಾಸುದೇವನು ಬಂದ ಕಂಡಿರೇ ||೧|| ಕರದಲ್ಲಿ ಕಂಕಣ ಬೆರಳಲ್ಲಿಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮಅರಳೆಲೆ ಕನಕ ಕುಂಡಲ ಕಾಲಲನುಗೆಉರಗ ಶಯನ ಬಂದ ಕಂಡಿರೇ ||೨|| ಕುಂಕುಮ ಕಸ್ತೂರಿ ಕರಿ ನಾಮ ತಿದ್ದಿಶಂಖ ಚಕ್ರಗಳ ಧರಿಸಿಹನಮ್ಮಬಿಂಕದಿಂದಲಿ ಕೊಳಲೂದುತ್ತ ಪಾಡುತ್ತಪಂಕಜಾಕ್ಷನು ಬಂದ ಕಂಡಿರೇ ||೩|| ಮಾವನ ಮಡುಹಿದ ಶಕಟನಕೆಡಹಿದ ಗೋವರ್ಧನ ಗಿರಿ ಎತ್ತಿದನಮ್ಮಆವ…
-
Helidare namma mele
Composer : Shri Purandara dasaru ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ|| ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆಬಣ್ಣಿಸಿ ಕಸ್ತೂರಿ ತಿಲಕನಿಟ್ಟುಚಿಣ್ಣಿಕೋಲು ಚೆಂಡು ಬುಗುರಿ ಕೈಯಲಿಟ್ಟು, ಪೊಸಬೆಣ್ಣೆಯ ಮೆಲ್ಲು ಹೋಗೆಂದು ಕಳುಹಿಬಿಟ್ಟು |೧| ಕರೆದು ಕೈಯಲ್ಲಿ ಚಿಟ್ಟೆ ಬೆಲ್ಲ ಕೊಟ್ಟು, ಚಿಕ್ಕಹರಳು ಕಲ್ಲುಗಳನ್ನೆ ಆರಿಸಿ ಕೊಟ್ಟುವಾರಿಗೆಯ ಪುಂಡರನ್ನು ಮಾಡಿಕೊಟ್ಟು, ಗೋಪಿಊರನೆಲ್ಲ ಸುಲಿಯೆಂದು ಕಳುಹಿಕೊಟ್ಟು |೨| ಹೋಗೆಂದು ರಂಗನ ಕಳುಹಿಕೊಟ್ಟು, ಗೋಪಿಆಗ ಭೋಗಂಗಳೆಲ್ಲ ತುಂಬಿಕೊಟ್ಟುನಿಗಮ ಗೋಚರನೆಂಬ…
