Kanakadasaru

  • Lali Pavana Charana

    Composer : Shri Kanakadasaru ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ||ಪ|| ವನಜಾಕ್ಷ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿ ನಿಲಯ ವೆಂಕಟರಾಯ ಜೀಯ ||೧|| ಜಗದೇಕನಾಯಕ ಜಲಜದಳನೇತ್ರಖಗರಾಜ ವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶಕುಲತಿಲಕ ರಮಣೀಯಗಾತ್ರ ||೨|| ನಂದಗೋಪ ಕುಮಾರ ನವನೀತ ಚೋರಮಂದಾಕಿನೀ ಜನಕ ಮೋಹನಾಕಾರಇಂದುಧರಸತಿ ವಿನುತ ವಿಶ್ವಸಂಚಾರನಂದಗೋವಿಂದ ಮುಚುಕುಂದ ನುತಸಾರ ||೩|| ಪಕ್ಷಿವಾಹನ ವಿಷ್ಣುಪಾಹಿ ಪರಮೇಶರಕ್ಷ ಕೌಸ್ತುಭಭೂಷ ವೈಕುಂಠವಾಸಅಕ್ಷಯ ಫಲದಾತ ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮಿಪ್ರಾಣೇಶ…

  • Tanu ninnadu

    Composer : Shri Kanakadasaru ತನು ನಿನ್ನದು ಜೀವನ ನಿನ್ನದು |ಅನುದಿನದಲಿ ಬಾಹೊ ಸುಖ ದುಃಖ ನಿನ್ನದೈಯ್ಯಸುಖ ದುಃಖ ನಿನ್ನದಯ್ಯ [ಅ.ಪ] ಸವಿ ನುಡಿ ವೇದ ಪುರಾಣ ಶಾಸ್ತ್ರಂಗಳಕಿವಿ ಕೊಟ್ಟು ಕೇಳುವ ಕಥೆ ನಿನ್ನದೊ [೧] ನವ ಯೌವ್ವನ ಮೊಹನಾಂಗೆಯರ ರೂಪವಎವೆ ಇಕ್ಕದೆ ನೊಳ್ಪ ಆ ನೋಟ ನಿನ್ನದಯ್ಯ [೨] ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲಬಿಡದೆ ಲೇಪಿಸಿ ಕೊಳ್ವ ಈ ದೇಹ ನಿನ್ನದೊ [೩] ಷಡು ರಸದ್ದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರೆ ಆ ರುಚಿ ನಿನ್ನದಯ್ಯ [೪]…

  • Putta Dasanu nanalla – mundige

    Composer : Shri Kanakadasaru ಪುಟ್ಟ ದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |೧| ಸುಡಗಾಡು ದಾಸ ನಾನಲ್ಲ | ಕಷ್ಟದಾಸ ನಾನಲ್ಲ |ಕೊಟ್ಟ ದಾಸ ನಾನಲ್ಲ | ಹೊಟ್ಟೆ ದಾಸ ನಾನಲ್ಲ |೨| ಇಟ್ಟಿಗೆ ದಾಸ ನಾನಲ್ಲ | ಶಿಷ್ಟ ದಾಸ ನಾನಲ್ಲ |ನಿಷ್ಟ ದಾಸ ನಾನಲ್ಲ | ಭ್ರಷ್ಟ ದಾಸ ನಾನಲ್ಲ |೩| ಶ್ರೇಷ್ಟ ದಾಸ ನಾನಲ್ಲ | ವಿತ್ತ ದಾಸ ನಾನಲ್ಲ…

error: Content is protected !!