-
Ava karmavo idu
Composer : Shri Kanakadasaru ಆವ ಕರ್ಮವೊ ಇದು ಆವ ಧರ್ಮವೊಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ (ಪ) ಸತ್ತವನು ಎತ್ತ ಪೋದ, ಸತ್ತು ತನ್ನ ಜನ್ಮಕೆ ಪೋದಸತ್ತವನು ಉಣ್ಣುವನೆಂದು ನಿತ್ಯ ಪಿಂಡವಿಕ್ಕುತೀರಿ (೧) ಎಳ್ಳು ದರ್ಭೆ ಕೈಲಿ ಪಿಡಿದು, ಪಿತರ ತೃಪ್ತಿ ಪಡಿಸುತೀರಿಎಳ್ಳು ಮೀನು ನುಂಗಿ ಹೋಯಿತು, ದರ್ಭೆ ನೀರೊಳು ಹರಿದು ಹೋಯಿತು (೨) ಎಡಕೆ ಒಂದು ಬಲಕೆ ಒಂದು, ಎಡಕೆ ತೋರಿಸಿ ಬಲಕೆ ತೋರಿಸಿಕಡು ಧಾವಂತ ಪಡಿಸಿ, ಕಟಿಯ ಹಸ್ತದೊಳಗೆ ಪಿಡಿಸುತೀರಿ (೩) ಮಂತ್ರಾಕ್ಷತೆಯ ಕೈಗೆ…
-
Toredu jeevisabahude
Composer : Shri Kanakadasaru ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ || ಪ ||ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || ಅ ಪ || ತಾಯಿ ತಂದೆಯ ಬಿಟ್ಟು ತಪವ ಮಾಡಲಿ ಬಹುದು |ದಾಯಾದಿ ಬಂಧುಗಳ ಬಿಡಲು ಬಹುದು ||ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು |ಕಾಯಜಪಿತ ನಿನ್ನ ಅಡಿಯ ಬಿಡಲಾಗದೊ || ೧ || ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು |ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು ||ಮಡದಿ ಮಕ್ಕಳ ಕಡೆಗೆ ತೊಲಗಿಸಿ ಬಿಡಬಹುದು |ಕಡಲೊಡೆಯ…
-
Neenupeksheya made
Composer : Shri Kanakadasaru ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆ, ನಿಗಮಗೋಚರ ಮುಕುಂದ |ಗಾನರಸಲೋಲ ಆಗಮಶೀಲಭಕ್ತ ಪರಿಪಾಲ ಸನ್ನುತ ಗೋಪಾಲ ಬಾಲ ||ಪ|| ಜಪತಪಾನುಷ್ಠಾನ ಜಪಿತನೆಂದೆನಿಸುವೆನೆಜಾಣತನವೆನ್ನೊಳಿಲ್ಲ,ಗುಪಿತದಿಂ ದಾನ ಧರ್ಮವನು ನಾ ಮಾಡುವೆನೆಅಪರಿಮಿತ ಧನವು ಇಲ್ಲ , ಹರಿಯೇ ||೧|| ಆನೆನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲುಮೌನದಿಂ ಬಂದು ಕಾಯ್ದೆ,ಹೇ ನಾರಗಾ ಎಂದ ಅಜಮಿಳಗೆ ಮುಕ್ತಿಯನುನೀನೊಲಿದು ಕೃಪೆ ಮಾಡಿದೆ, ಹರಿಯೇ ||೨|| ಹಾನಿಯಿಲ್ಲದ ಪದವಿ ನೀನಿತ್ತು ಧೃವಗೆಕಡು ದೀನತ್ವವನು ಬಿಡಿಸಿದೆ,ದಾನವಂತಕ ಸಕಲ ದಿವಿಜ ಮುನಿವಂದ್ಯಅಭಿಮಾನಿ ಎನ್ನನು ಸಲಹದೆ , ಬರಿದೆ…
