Composer : Shri Purandara dasaru
ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ |
ಸುತಗೆ ವಂದನೆಯ ಮಾಡಿದಳು |
ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ |
ಸದ್ಗತಿಯಾಗಲೆನುತ ಪೇಳಿದಳು |೧|
ಸುಧಾಮನೆಂದೋರ್ವ ಸೂಕ್ಷ್ಮದ ಬ್ರಾಹ್ಮಣ |
ಹೊದಿಯಲಿಕ್ಕಿಲ್ಲ ಅಶನವಿಲ್ಲ |
ಗಡಗಡ ನಡಗುತ ಮಧುರ ಮಾತಾಡುತ್ತಾ |
ಸದನದೊಳಿರುತಿದ್ದನಾಗ |೨|
ಪ್ರಾತ:ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ |
ನಾಥನ ಧ್ಯಾನ ಮಾಡುತಲಿ |
ಪಾತ್ರರ ಮನೆಗ್ ಹೋಗಿ ಯಾಚನೆಗಳ ಮಾಡಿ |
ಗ್ರಾಸ ತರುವನು ಮುಷ್ಟಿ ತುಂಬ |೩|
ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕು |
ಹಿತದಿಂದ ಪಾಕ ಮಾಡುವಳು |
ಅತಿಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ |
ಮತಿವಂತಿ ಉಳಿದಿದ್ದುಂಬುವಳು |೪|
ಹಸಿವೆ ತೃಷೆಗಳಿಂದ ಅತಿ ಕ್ಲೇಶವಾಗಿದ್ದು |
ಪತಿ ಕೂಡ ಮಾತನಾಡಿದಳು |
ಗತಿಯೇನು ನಮಗಿನ್ನು ಹಿತದವರ್ಯಾರಿಲ್ಲೆ |
ಸದ್ಗತಿಯೇನೆನುತ ಪೇಳಿದಳು |೫|
ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ |
ಒಡನೆ ಆಡಿದ ಗೆಳಯರಿಲ್ಲೆ |
ಕರೆದು ಕೂಡಿಸಿಕೊಂಡು ಬಿರುಸು ಮಾತ್ ಹೇಳುವ |
ಹಿರಿಯರು ದಾರರಿಲ್ಲೆ ನಿಮಗೆ |೬|
ಚಿಕ್ಕಂದಿಲ್-ಓದಿಲ್ಲೆ ಹೆತ್ತವರ್-ಹೇಳಿಲ್ಲೆ |
ಉತ್ತಮ ಗುರುಗಳಿಲ್ಲೇನು |
ಹೊತ್ತುವೇಳಿಗಾಗೋ ಮಿತ್ರರು ಯಾರಿಲ್ಲೇ |
ಮತ್ತೆ ಕೇಳಿದಳು ಕ್ಲೇಶದಲಿ |೭|
ಮಡದಿ ಮಾತನು ಕೇಳಿ ಮನದಲ್ಲಿ ಯೋಚಿಸಿ |
ಹುಡಗನಾಗಿರಲಿಕ್ಕೆ ಹೋಗಿ |
ಗುರುಕುಲ ವಾಸದಲಿ ಹರಿ ನಾವು ಓದಿದ್ದು |
ಹರಿ ಹೊರ್ತು ಇನ್ನೊಬ್ಬರಿಲ್ಲ |೮|
ಇನ್ನೊಬ್ಬರ್ಯಾತಕೆ ಅನ್ಯರಪೇಕ್ಷೇಕೆ |
ಮನ್ನಿಸಿ ಹೋಗಿ ಬರ್ರೆಂದು |
ಇನ್ನೇನು ಕೊಡುತಿಹೆ ಹರಿ ಮುಂದೆ ಇಡಲಿಕ್ಕೆ |
ಚೆನ್ನಾಗಿ ಕೇಳಿದನಾಗ | |೯|
ಗಾಬರಿಯಾದಾಳು ಸಾಗಿ ತಾ ನಡೆದಳು |
ಬೇಗ ತಂದಳು ಅವಲಕ್ಕಿ |
ಬಾಗಿ ವಸ್ತ್ರದೊಳು ಬೇಗ ಕಟ್ಟಿಕೊಟ್ಟು |
ಹೋಗಿ ಬರ್ರೆನುತ ಹೇಳಿದಳು |೧೦|
ಅಂಗಳವನು ಬಿಟ್ಟು ಮುಂದಕ್ಕೆ ಬರಲು |
ಹಂಗ ಹಾರಿ ಹೋದಿತೆಡಕೆ |
ಮಂಗಳವಾಗುವದು ರಂಗನ ದರುಶನ |
ಸಂದೇಹವಿಲ್ಲದಾಗುವದು |೧೧|
ಬಾಗಿಲವನೆ ಬಿಟ್ಟು ಸಾಗಿ ಮುಂದಕೆ ಬರಲು |
ಕಾಗಿ ಹಾರ್-ಹೋದವು ಬಲಕೆ |
ಆಗುವದು ನಮಗಿನ್ನು ಆಗುವದು ಶುಭಚಿನ್ನ |
ಆಗುವದು ಹರಿ ಕೃಪೆಯಿಂದ |೧೨|
ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು |
ಕಂಡನು ಕಮಲ ಪುಷ್ಪಗಳ |
ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು |
ತೆಕ್ಕ್ಕೊಂಡ ಕಮಲ ಪುಷ್ಪಗಳ |೧೩|
ಹರಿಯುವ ಜಲವೆಲ್ಲಾ ಹರಿಯಭಿಷೇಕೆಂದು |
ಹರುಷದಿಂದಲೆ ತುಂಬಿಕೊಂಡು |
ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ |
ಹರಿಹ್ಯಾಗೆ ದೊರಕುವನೆಂದಾ |೧೪|
ನಿಂತನು ಬ್ರಾಹ್ಮಣ ಅಂತರೂಪದಿ ಧ್ಯಾನ |
ಅಂತರಂಗದಲ್ಲಿ ಮಾಡುತಲಿ |
ಸಂತೋಷದಿಂದಲಿ ಧರಸಿದ ದಶರೂಪ |
ದಿಂದ ಬಂದೆನ್ನ ಕಾಯೆಂದ |೧೫|
ಹರಕು ವಸ್ತ್ರವನುಟ್ಟು ಹರಿಧ್ಯಾನ ಮಾಡುವ |
ವಿಪ್ರನ ಕಂಡು ಚಾರಕರು |
ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ |
ತಿರುಗಿ ಹೋಗೆನುತ ಹೇಳಿದರು |೧೬|
ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ |
ಇಂದಿರಾರಮಣಗ್ ಹೇಳೆಂದ |
ಹೆಸರು ಸುಧಾಮನಂತೆ ಹಸಿದು ಬಂದಾನೆಂದು |
ವಸುದೇವ ತನಯಗ್ ಹೇಲಿದರು |೧೭|
ಕೇಳಿದ ಹರಿಯೆದ್ದು ಬಹಳ ಹರುಷದಿಂದ |
ಬೇಗನೆ ಕರತನ್ನಿರವನ |
ಹೋಗು ಹೋಗೆಂದರೆ ಸಾಗಿ ಮುಂದಕೆ ಬಂದು |
ಬಾಗಿಲಿಗೆ ಬಂದ ಸುಧಾಮ |೧೮|
ಬಂದ ಭಕ್ತನ ನೋಡಿ ಆನಂದಿದೆದ್ದು |
ವಂದಿಸಿ ಅಸನವ ಹಾಕಿದರು |
ಚಂದದಿಂದಲಿ ಕರವ ಹಿಡಿದು ಮಾತಾಡಿಸಿ |
ಬಂದ ಕಾರಣವ ಕೇಳಿದರು | ೧೯|
ಮಂದಗಮನೆ ಸಹಿತ ತಂದ ಉದಕದಿಂದ |
ಚಂದದಿಂದಲಿ ಪಾದ ತೊಳೆದು |
ಗಂಧಕೇಶರ ಹಚ್ಚಿ ಚಂದ ಚಾಮರದಿಂದ |
ಅಂದದಿ ಗಾಳಿ ಬೀಸಿದರು |೨೦|
ಹಸಿದು ಬಂದಾನೆಂದು ಹಸಿವೆಗೆ ತಕ್ಕಂಥ |
ಹಸನಾದ ಹಣ್ಣು ಸಕ್ಕರೆಯು |
ಕುಸುಮನಾಭನು ತಾನು ಪನ್ನೀರು ತಂದಿಡೆ |
ಉಂಡು ಕೈ ತೊಳೆದ ಸುಧಾಮ |೨೧|
ಮಂದರಧರಗಿನ್ನು ಸುಂದರ ಸತಿಯರು |
ತಂದರು ತವಕ ವೀಳೆಯನು |
ಇಂದಿರೆ ರಮಣನು ಬಂದ ಸುಧಾಮನು |
ಚಂದದಿ ಮೆಲೆದರು ವೀಳೆಯವನು |೨೨|
ಶ್ರಮ ಬಹಳವಾಗಿದೆ ವಿಶ್ರಮಿಸಿಕೊಳ್ಳಿರೆಂದು |
ಸೆಳಮಂಚ ತಂದು ಹಾಕಿದರು |
ಶಾಲು ಸಕಲಾತಿಯು ಮೊದಲಾದ ಹಾಸಿಗೆ |
ಮೇಲೆ ಮಲಗಿದನು ಸುಧಾಮ |೨೩|
ಅಂದಿನ ರಾತ್ರಿಯಲಿ ಮಂದಗಮನೆಯರ ಬಿಟ್ಟು |
ಬಂದು ಮಲಗಿದನು ಶ್ರೀ ಹರಿಯು |
ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ್ತ |
ಆನಂದದಿ ಹರಿಯು ಸುಧಾಮ |೨೪|
ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು |
ಬಂದಿರಿ ಬಹುದಿನಕೆಂದ |
ಹೆಂಡತಿ ಮಕ್ಕಳು ಇಹರೇನು ನಿಮಗೆಂದು |
ಇಂದಿರೆ ರಮಣ ಕೇಳಿದನು |೨೫|
ಹೆಂಡತಿ ಕಳುಹಿದಳು ರಂಗನ ದರುಶನ |
ಕೊಂಡು ಬಾರೆನುತ ಪೇಳಿದಳು |
ತಂದದ್ದು ಕೊಡಲಿಕ್ಕೆ ಸಂದೇಹವೇತಕ |
ತಂಡುಲವ ಹಿಡಿದು ಜಗ್ಗಿದನು |೨೬|
ಮುಷ್ಠಿ ತುಂಬವಲಕ್ಕಿ ಮುಕ್ಕಿದ ಹರಿ ಬ್ಯಾಗ |
ನಕ್ಕರು ಸತಿಯರು ಎಲ್ಲಾ |
ಇಷ್ಟೆ ಸಾಕು ಎಂದು ಘಟ್ಯಾಗಿ ಕೈ ಹಿಡಿದು |
ಕೊಟ್ಟನು ಭಕ್ತಗೈಶ್ವರ್ಯ |೨೭|
ಹದಿನಾರು ಸಾವಿರ ಚದುರೆಯರ ಕರೆಸಿದ |
ಕೊಡಿಸಿದರೆಲ್ಲರಿಗು ತಂಡುಲವ |
ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ |
ಬೇಕೆಂದು ಬಿಗಿದು ಕಟ್ಟಿದರು |೨೮|
ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು |
ಹೊನ್ನ ಹೊಸ್ತಲವ ನಿರ್ಮಿಸಿದ |
ರನ್ನಮಾಣಿಕ್ಯ ಬಿಗಿದ ತೊಲಿ ಕಂಬ ಗಿಳಿಬೋದು |
ಪನ್ನಗಶಯನ ನಿರ್ಮಿಸಿದ |೨೯|
ಇರಿರಿ ನಾಲ್ಕು ದಿವಸ ತ್ವರೆ ಯಾಕೆ ಮಾಡುವಿರಿ |
ಇರಲಿಕ್ಕೆ ಬಾರದೆ ಅಂದ |
ನೆರೆ ಹೊರೆಯಾರಿಲ್ಲ ತರುಣಿಯೊಬ್ಬಳಿಹಳು |
ಇರಲಿ ನಾ ಹೇಗೆ ಪೇಳೆಂದ |೩೦|
ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ |
ಬಾಗಿಲಕೆ ಬಂದ ಸುಧಾಮ |
ಹೋಗಿರಿ ಹಿಂದಕೆ ಹೋಗಿಬರುತೇನಲು |
ಬಾಗಿ ಕೈ ಮುಗಿದ ಶ್ರೀ ಹರಿಯು |೩೧|
ಮುಂದಕ್ಕೆ ಬಂದನು ಇಂದೇನು ಕೊಡಲಿಲ್ಲ |
ಹೆಂಡತಿಗೆ ಹೇಳಲೇನೆಂದಾ |
ನಿಂತನು ಓಣಿಯಲಿ ಮಂದಿರ ಸಿಗಲಿಲ್ಲಾ |
ಹೆಂಡತಿಯ ಕಂಡ ಸುಧಾಮ |೩೨|
ಮಂದಿರವನ್ನೆಲ್ಲಾ ಕಂಡನು ಐಶ್ವರ್ಯ |
ಚಂದದಿಂದಾಭರಣವ ಕಂಡಾ |
ಇಂದಿರಾಪತಿಯನ್ನು ಕಂಡು ಬಂದುದರಿಂದ |
ಬಂದಿತು ಸಕಲ ಸಂಪತ್ತು |೩೩|
ರವಿವಾರ ಹಾಡಿದವರಿಗೆ ರಾಜಕಾರ್ಯವಾಗುವದು |
ಬಂಜೆಗೆ ಮಕ್ಕಳಾಗುವವು |
ಬರಡೆಮ್ಮೆ ಕರೆಯೋದು ಬಡತನ ಹಿಂಗುವದು |
ಗುರುವಾರ ಹಾಡಿದವರಿಗೆ |೩೪|
ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ |
ನಾನಾ ಸಂಪತ್ತು ಪಡೆದರು |
ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು |
ಶ್ರೀ ಹರಿ ಕೊಡು ದೇವಸಿರಿಯ |೩೫|
ಇದು ಭಾಗವತವೆನ್ನಿ ಇದು ಭಾಗವತವೆನ್ನಿ |
ಇದು ಭಾಗವತಕೆ ಕೀಲುಗಳು |
ಇದಕೆ ಪ್ರಿಯನು ನಮ್ಮ ಪುರಂದರವಿಟ್ಠಲ |
ಇದರಿಂದ ಮುಕ್ತಿ ಕೊಡುವನು |೩೬|
patiya pAdakkeragi mati bEDi pArvati |
sutage vaMdaneya mADidaLu |
ati BaktiyiMdali stutisuva janarige |
sadgatiyAgalenuta pELidaLu |1|
sudhAmaneMdOrva sUkShmada brAhmaNa |
hodiyalikkilla aSanavilla |
gaDagaDa naDaguta madhura mAtADuttA |
sadanadoLirutiddanAga |2|
prAta:kAladalleddu nitya karmava mugisi |
nAthana dhyAna mADutali |
pAtrara maneg hOgi yAcanegaLa mADi |
grAsa taruvanu muShTi tuMba |3|
pativRute heMDati pati taMdadde sAku |
hitadiMda pAka mADuvaLu |
atiBaktiyiMdali patige BOjana baDisi |
mativaMti uLididduMbuvaLu |4|
hasive tRuShegaLiMda ati klESavAgiddu |
pati kUDa mAtanADidaLu |
gatiyEnu namaginnu hitadavaryArille |
sadgatiyEnenuta pELidaLu |5|
poDaviyoLage nimma oDahuTTidavarille |
oDane ADida geLayarille |
karedu kUDisikoMDu birusu mAt hELuva |
hiriyaru dArarille nimage |6|
cikkaMdil-Odille hettavar-hELille |
uttama gurugaLillEnu |
hottuvELigAgO mitraru yArillE |
matte kELidaLu klESadali |7|
maDadi mAtanu kELi manadalli yOcisi |
huDaganAgiralikke hOgi |
gurukula vAsadali hari nAvu Odiddu |
hari hortu innobbarilla |8|
innobbaryAtake anyarapEkShEke |
mannisi hOgi barreMdu |
innEnu koDutihe hari muMde iDalikke |
cennAgi kELidanAga | |9|
gAbariyAdALu sAgi tA naDedaLu |
bEga taMdaLu avalakki |
bAgi vastradoLu bEga kaTTikoTTu |
hOgi barrenuta hELidaLu |10|
aMgaLavanu biTTu muMdakke baralu |
haMga hAri hOditeDake |
maMgaLavAguvadu raMgana daruSana |
saMdEhavilladAguvadu |11|
bAgilavane biTTu sAgi muMdake baralu |
kAgi hAr-hOdavu balake |
Aguvadu namaginnu Aguvadu SuBacinna |
Aguvadu hari kRupeyiMda |12|
hIgeMda brAhmaNa muMdake naDedanu |
kaMDanu kamala puShpagaLa |
raMgana heMDarige heraLige bEkeMdu |
tekkkoMDa kamala puShpagaLa |13|
hariyuva jalavellA hariyaBiShEkeMdu |
haruShadiMdale tuMbikoMDu |
karadalli hiDakoMDu purada bAgila muMde |
harihyAge dorakuvaneMdA |14|
niMtanu brAhmaNa aMtarUpadi dhyAna |
aMtaraMgadalli mADutali |
saMtOShadiMdali dharasida daSarUpa |
diMda baMdenna kAyeMda |15|
haraku vastravanuTTu haridhyAna mADuva |
viprana kaMDu cArakaru |
barabEDiroLage hiriyarappaNeyilla |
tirugi hOgenuta hELidaru |16|
aMda mAtanu kELi aMjida brAhmaNa |
iMdirAramaNag hELeMda |
hesaru sudhAmanaMte hasidu baMdAneMdu |
vasudEva tanayag hElidaru |17|
kELida hariyeddu bahaLa haruShadiMda |
bEgane karatanniravana |
hOgu hOgeMdare sAgi muMdake baMdu |
bAgilige baMda sudhAma |18|
baMda Baktana nODi AnaMdideddu |
vaMdisi asanava hAkidaru |
caMdadiMdali karava hiDidu mAtADisi |
baMda kAraNava kELidaru | 19|
maMdagamane sahita taMda udakadiMda |
caMdadiMdali pAda toLedu |
gaMdhakESara hacci caMda cAmaradiMda |
aMdadi gALi bIsidaru |20|
hasidu baMdAneMdu hasivege takkaMtha |
hasanAda haNNu sakkareyu |
kusumanABanu tAnu pannIru taMdiDe |
uMDu kai toLeda sudhAma |21|
maMdaradharaginnu suMdara satiyaru |
taMdaru tavaka vILeyanu |
iMdire ramaNanu baMda sudhAmanu |
caMdadi meledaru vILeyavanu |22|
Srama bahaLavAgide viSramisikoLLireMdu |
seLamaMca taMdu hAkidaru |
SAlu sakalAtiyu modalAda hAsige |
mEle malagidanu sudhAma |23|
aMdina rAtriyali maMdagamaneyara biTTu |
baMdu malagidanu SrI hariyu |
hiMdina vRuttAMta oMdoMdu smarisutta |
AnaMdadi hariyu sudhAma |24|
aMdina snEhavu iMdEke nenapAytu |
baMdiri bahudinakeMda |
heMDati makkaLu iharEnu nimageMdu |
iMdire ramaNa kELidanu |25|
heMDati kaLuhidaLu raMgana daruSana |
koMDu bArenuta pELidaLu |
taMdaddu koDalikke saMdEhavEtaka |
taMDulava hiDidu jaggidanu |26|
muShThi tuMbavalakki mukkida hari byAga |
nakkaru satiyaru ellA |
iShTe sAku eMdu ghaTyAgi kai hiDidu |
koTTanu BaktagaiSvarya |27|
hadinAru sAvira cadureyara karesida |
koDisidarellarigu taMDulava |
uLisida avalakki uNalikke mArgakke |
bEkeMdu bigidu kaTTidaru |28|
rannada bAgilige cinnada caukaTTu |
honna hostalava nirmisida |
rannamANikya bigida toli kaMba giLibOdu |
pannagaSayana nirmisida |29|
iriri nAlku divasa tvare yAke mADuviri |
iralikke bArade aMda |
nere horeyArilla taruNiyobbaLihaLu |
irali nA hEge pELeMda |30|
pAdake eragi tA sAgi muMdake baMda |
bAgilake baMda sudhAma |
hOgiri hiMdake hOgibarutEnalu |
bAgi kai mugida SrI hariyu |31|
muMdakke baMdanu iMdEnu koDalilla |
heMDatige hELalEneMdA |
niMtanu ONiyali maMdira sigalillA |
heMDatiya kaMDa sudhAma |32|
maMdiravannellA kaMDanu aiSvarya |
caMdadiMdABaraNava kaMDA |
iMdirApatiyannu kaMDu baMdudariMda |
baMditu sakala saMpattu |33|
ravivAra hADidavarige rAjakAryavAguvadu |
baMjege makkaLAguvavu |
baraDemme kareyOdu baDatana hiMguvadu |
guruvAra hADidavarige |34|
SrInivAsana dhyAna maunadiMdali mADi |
nAnA saMpattu paDedaru |
adara viShaya tiLidu gati mOkSha iraleMdu |
SrI hari koDu dEvasiriya |35|
idu BAgavatavenni idu BAgavatavenni |
idu BAgavatake kIlugaLu |
idake priyanu namma puraMdaraviTThala |
idariMda mukti koDuvanu |36|
