Ninna nambi bande

Composer : Shri Tande venkatesha vittala

ನಿನ್ನ ನಂಬಿ ಬಂದೆ ಎನ್ನ,
ಕೈ ಬಿಡಬೇಡ ಘನ್ನ ಮಹಿಮನೆ ಶ್ರೀನಿವಾಸ,
ಪನ್ನಗ ಶಯನ ಆಪನ್ನ ರಕ್ಷಕ ,
ಪ್ರಸನ್ನ ನಾಗೋ ಬೇಗ ಶ್ರೀನಿವಾಸ [೧]

ಜನನಿ ಜನಕನೇ ಶ್ರೀನಿವಾಸ,
ಎನ್ನ ಅನುಬಂಧಿಯು ನೀನೆ ಶ್ರೀನಿವಾಸ,
ಜನುಮ ಜನುಮದಲಿ ಶ್ರೀನಿವಾಸ ಎನ್ನ,
ಉದ್ಧರಿಸುವವ ನೀನೆ ಶ್ರೀನಿವಾಸ [೨]

ದೇಶ ದೇಶವ ತಿರುಗಿ ಶ್ರೀನಿವಾಸ ಬಹು,
ಕ್ಲೇಶ ಪಟ್ಟಿರುವೆನೋ ಶ್ರೀನಿವಾಸ,
ಆಶಾ ಪಾಶವ ಬಿಡಿಸೋ ಶ್ರೀನಿವಾಸ ನಿನ್ನ ,
ದಾಸನ ಮಾಡಿಕೊಳ್ಳೋ ಶ್ರೀನಿವಾಸ [೩]

ಹೃದಯದಲ್ಲಿ ನಿನ್ನ ರೂಪ ಶ್ರೀನಿವಾಸ ಎನ್ನ,
ವದನದಲ್ಲಿ ನಿನ್ನ ನಾಮ ಶ್ರೀನಿವಾಸ,
ಸದಯನಾಗಿ ಎನಗೆ ಇತ್ತು ಶ್ರೀನಿವಾಸ ,
ಒದಗಿ ಬಂದು ಪಾಲಿಸಯ್ಯ ಶ್ರೀನಿವಾಸ [೪]

ಬಂಧನವ ಕಳೆಯುವವನೇ ಶ್ರೀನಿವಾಸ ಭವ,
ಬಂಧನವ ಬಿಡಿಸುವವನೇ ಶ್ರೀನಿವಾಸ,
ಅಂದು ನೀನೆ ಇಂದು ನೀನೆ ಶ್ರೀನಿವಾಸ,
ಎಂದೆಂದಿಗೂ ನೀನೆ ಶ್ರೀನಿವಾಸ [೫]

ಝಲ್ಲಡಿಯ ನೆರಳಿನಂತೆ ಶ್ರೀನಿವಾಸ ಬಹು,
ತಲ್ಲಣವಗೊಳಿಸುವವನೇ ಶ್ರೀನಿವಾಸ,
ಎಲ್ಲಾ ಕಾಲದಲ್ಲೂ ನೀನೆ ಶ್ರೀನಿವಾಸ ಸಿರಿ
ವಲ್ಲಭನೇ ಎನ್ನ ತಂದೆ ವೆಂಕಟೇಶ [೬]


ninna naMbi baMde enna,
kai biDabEDa Ganna mahimane SrInivAsa,
pannaga Sayana Apanna rakShaka ,
prasanna nAgO bEga SrInivAsa [1]

janani janakanE SrInivAsa,
enna anubaMdhiyu nIne SrInivAsa,
januma janumadali SrInivAsa enna,
uddharisuvava nIne SrInivAsa [2]

dESa dESava tirugi SrInivAsa bahu,
klESa paTTiruvenO SrInivAsa,
ASA pASava biDisO SrInivAsa ninna ,
dAsana mADikoLLO SrInivAsa [3]

hRudayadalli ninna rUpa SrInivAsa enna,
vadanadalli ninna nAma SrInivAsa,
sadayanAgi enage ittu SrInivAsa ,
odagi baMdu pAlisayya SrInivAsa [4]

baMdhanava kaLeyuvavanE SrInivAsa Bava,
baMdhanava biDisuvavanE SrInivAsa,
aMdu nIne iMdu nIne SrInivAsa,
eMdeMdigU nIne SrInivAsa [5]

JallaDiya neraLinaMte SrInivAsa bahu,
tallaNavagoLisuvavanE SrInivAsa,
ellA kAladallU nIne SrInivAsa siri
vallaBanE enna taMde veMkaTESa [6]

You might also like

error: Content is protected !!