-
Sudhama charitre
Composer : Shri Purandara dasaru ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ |ಸುತಗೆ ವಂದನೆಯ ಮಾಡಿದಳು |ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ |ಸದ್ಗತಿಯಾಗಲೆನುತ ಪೇಳಿದಳು |೧| ಸುಧಾಮನೆಂದೋರ್ವ ಸೂಕ್ಷ್ಮದ ಬ್ರಾಹ್ಮಣ |ಹೊದಿಯಲಿಕ್ಕಿಲ್ಲ ಅಶನವಿಲ್ಲ |ಗಡಗಡ ನಡಗುತ ಮಧುರ ಮಾತಾಡುತ್ತಾ |ಸದನದೊಳಿರುತಿದ್ದನಾಗ |೨| ಪ್ರಾತ:ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ |ನಾಥನ ಧ್ಯಾನ ಮಾಡುತಲಿ |ಪಾತ್ರರ ಮನೆಗ್ ಹೋಗಿ ಯಾಚನೆಗಳ ಮಾಡಿ |ಗ್ರಾಸ ತರುವನು ಮುಷ್ಟಿ ತುಂಬ |೩| ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕು |ಹಿತದಿಂದ ಪಾಕ…
