Composer : Shri Jagannatha dasaru
ಇದನೆ ಪಾಲಿಸು ಪಾಲಿಸೆನಗೆ ದೇವಾ [ಪ]
ವಿದುರ ಸನ್ನುತ ಮಹಿಮ
ಪದೋಪದಗೆ ಬಿನ್ನೈಪೆ [ಅ.ಪ]
ಶ್ರೀವಿರಿಂಚಾದ್ಯಖಿಳ ಚೇತನಾಚೇತನವು
ಶ್ರೀವರನೆ ನಿನಗಧಿಷ್ಠಾನವೆಂದೂ |
ಸ್ಥಾವರಗಳೊಳಗೆ ನೈಜನು ಯೆನಿಸಿ ಪರಿಣಾಮ
ನೀವೆ ವೃದ್ಧಿ ಪ್ರಾಸ ಸರ್ವ ಕಾಲದ ವೆಂಬೋ [೧]
ಪ್ರಕೃತಿ ಗುಣಗಳ ಪ್ರವೇಶಿಸಿ ಬಾಧ್ಯ ಬಾಧಕನು
ಅಕೃತಜ್ಞ ನೀನೆನಿಸಿ ಭಕುತಾ ಜನರಾ |
ಸುಕೃತ ದುಷ್ಕೃತ ಕರ್ಮ ಪರಿಹರಿಸಿ ಪಾಲಿಸುವೆ
ಸಕೃತ ನಿನ್ನನು ಸ್ಮರಿಸಿ ಹಿಗ್ಗುವರ ಸಂಗ ಸುಖ [೨]
ಕರ್ತು ಕಾರ್ಯತ್ರು ಪ್ರೇರಕ ಪ್ರೇರ್ಯ ಸುಖ ಸಾಕ್ಷಿ
ಕ್ಷೇತ್ರ ಧನಧಾನ್-ಯಹಿಕ ಪಾರತ್ರಿಕಾ |
ಮಿತ್ರ ತಮ ಶ್ರೀ ಜನಗನ್ನಾಥ ವಿಠ್ಠಲನೆ
ಸರ್ವತ್ರ ವ್ಯಾಪಕ ಮಮ ಸ್ವಾಮಿಯೆಂಬೋ ಜ್ಞಾನ [೩]
idane pAlisu pAlisenage dEvA [pa]
vidura sannuta mahima
padOpadage binnaipe [a.pa]
SrIviriMcAdyaKiLa cEtanAcEtanavu
SrIvarane ninagadhiShThAnaveMdU |
sthAvaragaLoLage naijanu yenisi pariNAma
nIve vRuddhi prAsa sarva kAlada veMbO [1]
prakRuti guNagaLa pravESisi bAdhya bAdhakanu
akRutaj~ja nInenisi BakutA janarA |
sukRuta duShkRuta karma pariharisi pAlisuve
sakRuta ninnanu smarisi higguvara saMga suKa [2]
kartu kAryatru prEraka prErya suKa sAkShi
kShEtra dhanadhAn-yahika pAratrikA |
mitra tama SrI janagannAtha viThThalane
sarvatra vyApaka mama svAmiyeMbO j~jAna [3]

Leave a Reply
You must be logged in to post a comment.