Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli
೨೧. ಸ್ತೋತ್ರ ಸಂಧಿ
|| ಕರ್ಮವಿಮೋಚನ ಸಂಧಿ ||
ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||
ಮೂಲ- ನಾರಾ — ಯಣನು- ಮಾಯಾ- |
ಲೋಲ-ನಂತವ — ತಾರ- ನಾಮಕ |
ವ್ಯಾಳ-ರೂಪ ಜ — ಯಾರ-ಮಣನಾ — ವೇಶ-ನೆನಿಸುವ-ನು ||
ಲೀಲೆ-ಗೈವಾ — ನಂತ- ಚೇತನ- |
ಜಾಲ-ದೊಳು ಪ್ರ — ದ್ಯುಮ್ನ- ಬ್ರಹ್ಮಾಂ- |
ಡಾಲ-ಯದ ಒಳ — ಹೊರಗೆ- ನೆಲೆಸಿಹ — ಶಾಂತಿ-ಯನಿರು-ದ್ಧ || ೨೧-೧ ||
ಐದು- ಕಾರಣ — ರೂಪ- ಇಪ್ಪ- |
ತ್ತೈದು- ಕಾರ್ಯಗ — ಳೆನಿಸು-ವವು ಆ |
ರೈದು- ರೂಪದಿ — ರಮಿಸು-ತಿಪ್ಪನು — ಈ ಚ-ರಾಚರ-ದಿ ||
ಭೇದ- ವರ್ಜಿತ — ಮೂಜ-ಗಜ್ಜ- |
ನ್ಮಾದಿ- ಕಾರಣ — ಮುಕ್ತಿ-ದಾಯಕ |
ಸ್ವೋದ-ರದೊಳಿ — ಟ್ಟೆಲ್ಲ-ರನು ಸಂ — ತೈಪ- ಸರ್ವ-ಜ್ಞ || ೨೧-೨ ||
ಕಾರ್ಯ- ಕಾರಣ — ಕರ್ತೃ-ಗಳೊಳು ಸ್ವ- |
ಭಾರ್ಯ-ರಿಂದೊಡ — ಗೂಡಿ- ಕಪಿಲಾ- |
ಚಾರ್ಯ- ಕ್ರೀಡಿಸು — ತಿಪ್ಪ- ತನ್ನೊಳು — ತಾನೆ- ಸ್ವೇಚ್ಛೆಯ-ಲಿ ||
ಪ್ರೇರ್ಯ-ನಲ್ಲ ರ — ಮಾಬ್ಜ-ಭವ ಭವ- |
ರಾರ್ಯ- ರಕ್ಷಿಸಿ — ಶಿಕ್ಷಿ-ಸುವನು ಸ್ವ- |
ವೀರ್ಯ-ದಿಂದಲಿ — ದಿವಿಜ- ದಾನವ — ತತಿಯ- ದಿನದಿನ-ದಿ || ೨೧-೩ ||
ಈ ಸ-ಮಸ್ತ ಜ — ಗತ್ತಿ-ನೊಳಗಾ- |
ಕಾಶ-ದೋಳಿರು — ತಿಪ್ಪ- ವ್ಯಾಪ್ತಾ- |
ವೇಶ-ನವತಾ — ರಾಂತ-ರಾತ್ಮಕ — ನಾಗಿ- ಪರಮಾ-ತ್ಮ ||
ನಾಶ- ರಹಿತ ಜ — ಗತ್ತಿ-ನೊಳಗವ- |
ಕಾಶ-ದನು ತಾ — ನಾಗಿ- ಯೋಗೀ- |
ಶಾಶ-ಯಸ್ಥಿತ — ತನ್ನೊ-ಳೆಲ್ಲರ — ನಿಟ್ಟು- ಸಲಹುವ-ನು || ೨೧-೪ ||
ದಾರು- ಪಾಷಾ — ಣಗತ- ಪಾವಕ |
ಬೇರೆ- ಬೇರಿ — ಪ್ಪಂತೆ- ಕಾರಣ- |
ಕಾರ್ಯ-ಗಳ ಒಳ — ಗಿದ್ದು- ಕಾರಣ — ಕಾರ್ಯ-ನೆಂದೆನಿ-ಸಿ ||
ತೋರಿ-ಕೊಳ್ಳದೆ — ಯೆಲ್ಲ-ರೊಳು ವ್ಯಾ- |
ಪಾರ- ಮಾಡುವ — ಯೋಗ್ಯ-ತೆಗಳನು – |
ಸಾರ- ಫಲಗಳ — ನುಣಿಸಿ- ಸಂತೈ — ಸುವ ಕೃ-ಪಾಸಾಂ-ದ್ರ || ೨೧-೫ ||
ಊರ್ಮಿ-ಗಳ ವೋ — ಲಿಪ್ಪ- ಕರ್ಮ ವಿ- |
ಕರ್ಮ-ಜನ್ಯ ಫ — ಲಾಫ-ಲಂಗಳ |
ನಿರ್ಮ-ಲಾತ್ಮನು — ಮಾಡಿ- ಮಾಡಿಸಿ — ಉಂಡು-ಣಿಸುತಿ-ಪ್ಪ ||
ನಿರ್ಮ-ಮ ನಿರಾ — ಮಯ ನಿ-ರಾಶ್ರಯ |
ಧರ್ಮ-ವಿದ್ಧ — ರ್ಮಾತ್ಮ- ಧರ್ಮಗ |
ದುರ್ಮ-ತೀ ಜನ — ರೊಲ್ಲ-ನಪ್ರತಿ — ಮಲ್ಲ- ಶ್ರೀನ-ಲ್ಲ || ೨೧-೬ ||
ಜಲದ-ಬಡ ಬಾ — ನಲಗ-ಳಂಬುಧಿ |
ಜಲವ-ನುಂಬುವು — ಅಬ್ದ- ಮಳೆಗರೆ- |
ದಿಳೆಗೆ- ಶಾಂತಿಯ — ನೀವು-ದನಲನು — ತಾನೆ- ಭುಂಜಿಪು-ದು ||
ತಿಳಿವು-ದೀಪರಿ — ಯಲ್ಲಿ- ಲಕ್ಷ್ಮೀ- |
ನಿಲಯ- ಗುಣಕೃತ — ಕರ್ಮ-ಜ ಫಲಾ- |
ಫಲಗ-ಳುಂಡುಣಿ — ಸುವನು- ಸರ್ವಗ — ಸರ್ವ- ಜೀವರಿ-ಗೆ || ೨೧-೭ ||
ಪುಸ್ತ-ಕಗಳವ — ಲೋಕಿ-ಸುತ ಮಂ- |
ತ್ರಸ್ತು-ತಿಗಳನ — ಲೇನು- ರವಿಯುದ- |
ಯಸ್ತ-ಮಯ ಪರಿ — ಯಂತ- ಜಪಗಳ — ಮಾಡಿ- ಫಲವೇ-ನು ||
ಹೃತ್ಸ್ಥ- ಪರಮಾ — ತ್ಮನೆ ಸ-ಮಸ್ತಾ- |
ವಸ್ಥೆ-ಗಳೊಳಿ — ದ್ದೆಲ್ಲ-ರೊಳಗೆ ನಿ- |
ರಸ್ತ- ಕಾಮನು — ಮಾಡಿ- ಮಾಡಿಪ — ನೆಂದು- ತಿಳಿಯದ-ವ || ೨೧-೮ ||
ಮದ್ಯ- ಭಾಂಡವ — ದೇವ-ನದಿಯೊಳ- |
ಗದ್ದಿ- ತೊಳೆಯಲು — ನಿತ್ಯ-ದಲಿ ಪರಿ- |
ಶುದ್ಧ-ವಾಹುದೆ — ಎಂದಿ-ಗಾದರು — ಹರಿ ಪ-ದಾಬ್ಜಗ-ಳ ||
ಬುದ್ಧಿ- ಪೂರ್ವಕ — ಭಜಿಸ-ದವಗೆ ವಿ- |
ರುದ್ಧ-ವೆನಿಸುವು — ವೆಲ್ಲ- ಕರ್ಮ ಸ- |
ಮೃದ್ಧಿ-ಗಳು ದುಃ — ಖವನೆ- ಕೊಡುತಿಹ — ವಧಮ- ಜೀವರಿ-ಗೆ || ೨೧-೯ ||
ಭಕ್ತಿ- ಪೂರ್ವಕ — ವಾಗಿ- ಮುಕ್ತಾ- |
ಮುಕ್ತ- ನೀಯಾ — ಮಕನ- ಸರ್ವೋ- |
ದ್ರಿಕ್ತ- ಮಹಿಮೆಗ — ಳನವ-ರತ ಕೊಂ — ಡಾಡು- ಮರೆಯದ-ಲೆ ||
ಸಕ್ತ-ನಾಗದೆ — ಲೋಕ-ವಾರ್ತೆ ಪ್ರ- |
ಸಕ್ತಿ-ಗಳನೀ — ಡಾಡಿ- ಶ್ರುತಿ ಸ್ಮೃ- |
ತ್ಯುಕ್ತ- ಕರ್ಮವ — ಮಾಡು-ತಿರು ಹರಿ — ಯಾಜ್ಞೆ-ಯೆಂದರಿ-ದು || ೨೧-೧೦ ||
ಲೋಪ-ವಾದರು — ಸರಿಯೆ- ಕರ್ಮಜ- |
ಪಾಪ- ಪುಣ್ಯಗ — ಳೆರಡು- ನಿನ್ನನು |
ಲೇಪಿ-ಸವು ನಿ — ಷ್ಕಾಮ-ಕನು ನೀ — ನಾಗಿ- ಮಾಡುತಿ-ರೆ ||
ಸೌಪ-ರಣಿ ವರ — ವಹನ- ನಿನ್ನ ಮ- |
ಹಾಪ-ರಾಧಗ — ಳೆಣಿಸ-ದಲೆ ಸ್ವ- |
ರ್ಗಾಪ-ವರ್ಗದೊ — ಳಿಟ್ಟು- ಸಲಹುವ — ಸತತ- ಸುಖಸಾಂ-ದ್ರ || ೨೧-೧೧ ||
ಸ್ವರತ- ಸುಖಮಯ — ಸುಲಭ- ವಿಶ್ವಂ- |
ಭರ ವಿ-ಶೋಕ ಸು — ರಾಸು-ರಾರ್ಚಿತ- |
ಚರಣ-ಯುಗ ಚಾ — ರ್ವಾಂಗ- ಶಾರ್ಙ್ಗ ಶ — ರಣ್ಯ- ಜಿತಮ-ನ್ಯು ||
ಪರಮ- ಸುಂದರ — ತರ ಪ-ರಾತ್ಪರ |
ಶರಣ- ಜನ ಸುರ — ಧೇನು- ಶಾಶ್ವತ |
ಕರುಣಿ- ಕಂಜದ — ಳಾಕ್ಷ- ಕಾಯೆನೆ — ಕಂಗೊ-ಳಿಪ ಶೀ-ಘ್ರ || ೨೧-೧೨ ||
ನಿರ್ಮ-ಮನು ನೀ — ನಾಗಿ- ಕರ್ಮ ವಿ- |
ಕರ್ಮ-ಗಳನು ನಿ — ರಂತ-ರದಲಿ ಸು- |
ಧರ್ಮ- ನಾಮಕ — ಗರ್ಪಿ-ಸುತ ನಿ — ಷ್ಕಲುಷ- ನೀನಾ-ಗು ||
ಭರ್ಮ- ಗರ್ಭನ — ಜನಕ- ದಯದಲಿ |
ದುರ್ಮ-ತಿಗಳನು — ಕೊಡದೆ- ತನ್ನಯ |
ಹರ್ಮ್ಯ-ದೊಳಗಿ — ಟ್ಟೆಲ್ಲ- ಕಾಲದಿ — ಕಾವ- ಕೃಪೆಯಿಂ-ದ || ೨೧-೧೩ ||
ಕಲ್ಪ- ಕಲ್ಪದಿ — ಶರಣ-ಜನ ವರ- |
ಕಲ್ಪ-ವೃಕ್ಷನು — ತನ್ನ- ನಿಜ ಸಂ- |
ಕಲ್ಪ-ದನುಸಾ — ರದಲಿ- ಕೊಡುತಿ — ಪ್ಪನು ಫ-ಲಾಫಲ-ವ ||
ಅಲ್ಪ-ಸುಖದಾ — ಪೇಕ್ಷೆ-ಯಿಂದಹಿ- |
ತಲ್ಪ-ನಾರಾ — ಧಿಸದಿ-ರೆಂದಿಗು |
ಶಿಲ್ಪ-ಕನ ಕೈ — ಸಿಕ್ಕ- ಶಿಲೆಯಂ — ದದಲಿ- ಸಂತೈ-ಪ || ೨೧-೧೪ ||
ದೇಶ- ಭೇದಾ — ಕಾಶ-ದಂದದಿ |
ವಾಸು-ದೇವನು — ಸರ್ವ- ಭೂತ ನಿ- |
ವಾಸಿ-ಯೆನಿಸಿ ಚ — ರಾ ಚ-ರಾತ್ಮಕ — ನೆಂದು- ಕರೆಸುವ-ನು ||
ದ್ವೇಷ- ಸ್ನೇಹೋ — ದಾಸಿ-ನಗಳಿ- |
ಲ್ಲೀ ಶ-ರೀರಗ — ಳೊಳಗೆ- ಅವರೋ- |
ಪಾಸ-ನೆಗಳಂ — ದದಲಿ- ಫಲವೀ — ವನು ಪ-ರಬ್ರ-ಹ್ಮ || ೨೧-೧೫ ||
ಸಂಚಿ-ತಾಗಾ — ಮಿಗಳ- ಕರ್ಮ ವಿ- |
ರಿಂಚಿ- ಜನಕನ — ಭಜಿಸೆ- ಕೆಡುವವು |
ಮಿಂಚಿ-ನಂದದಿ — ಪೊಳೆವ- ಪುರುಷೋ — ತ್ತಮ ಹೃ-ದಂಬರ-ದಿ ||
ವಂಚಿ-ಸುವ ಜನ — ರೊಲ್ಲ- ಶ್ರೀವ- |
ತ್ಸಾಂಚಿ-ತ ಸುಸ — ದ್ವಕ್ಷ- ತಾ ನಿ- |
ಷ್ಕಿಂಚ-ನ ಜನ — ಪ್ರೀಯ- ಸುರಮುನಿ — ಗೇಯ- ಶುಭಕಾ-ಯ || ೨೧-೧೬ ||
ಕಾಲ- ದ್ರವ್ಯ ಸು — ಕರ್ಮ- ಶುದ್ಧಿಯ- |
ಪೇಳು-ವರು ಅ — ಲ್ಪರಿಗೆ- ಅವು ನಿ- |
ರ್ಮೂಲ- ಗೈಸುವ — ವಲ್ಲ- ಪಾಪಗ — ಳೆಲ್ಲ- ಕಾಲದ-ಲಿ |
ತೈಲ-ಧಾರೇ — ಯಂತ-ವನ ಪದ |
ಓಲ-ಯಿಸಿ ತುತಿ — ಸದಲೆ- ನಿತ್ಯದಿ |
ಬಾಲಿ-ಶರು ಕ — ರ್ಮಗಳೆ- ತಾರಕ — ವೆಂದು- ಪೇಳುವ-ರು || ೨೧-೧೭ ||
ಕಮಲ- ಸಂಭವ — ಶರ್ವ- ಶಕ್ರಾ- |
ದ್ಯಮರ-ರೆಲ್ಲರು — ಇವನ- ದುರತಿ- |
ಕ್ರಮ ಮ-ಹಿಮೆಗಳ — ಮನವ-ಚನದಿಂ — ಪ್ರಾಂತ-ಗಾಣದ-ಲೆ ||
ಶ್ರಮಿತ-ರಾಗಿ ಪ — ದಾಬ್ಜ- ಕಲ್ಪ- |
ದ್ರುಮನೆ-ಳಲನಾ — ಶ್ರಯಿಸಿ- ಲಕ್ಷ್ಮೀ- |
ರಮಣ- ಸಂತೈ — ಸೆಂದು- ಪ್ರಾರ್ಥಿಪ — ರತಿ ಭ-ಕುತಿಯಿಂ-ದ || ೨೧-೧೮ ||
ವಾರಿ-ಚರವೆನಿ — ಸುವವು- ದರ್ದುರ |
ತಾರ-ಕಗಳೆಂ — ದರಿದು- ಭೇಕವ- |
ನೇರಿ- ಜಲಧಿಯ — ದಾಟು-ವೆನು ಎಂ — ಬವನ- ತೆರದಂ-ತೆ ||
ತಾರ-ತಮ್ಯ — ಜ್ಞಾನ- ಶೂನ್ಯರು |
ಸೂರಿ-ಗಮ್ಯನ — ತಿಳಿಯ-ಲರಿಯದೆ |
ಸೌರ- ಶೈವ ಮ — ತಾನು-ಗರ ಅನು — ಸರಿಸಿ- ಕೆಡುತಿಹ-ರು || ೨೧-೧೯ ||
ಕ್ಷುಧೆಯ-ಗೋಸುಗ — ಪೋಗಿ- ಕಾನನ |
ಬದರಿ- ಫಲಗಳ — ಪೇಕ್ಷೆ-ಯಿಂದಲಿ |
ಪೊದೆಯೊ-ಳಗೆ ಸಿಗ — ಬಿದ್ದು- ಬಾಯ್ದೆರೆ — ದವನ- ತೆರದಂ-ತೆ ||
ವಿಧಿಪಿ-ತನ ಪೂ — ಜಿಸದೆ- ನಿನ್ನಯ |
ಉದರ-ಕೋಸುಗ — ಸಾಧು-ಲಿಂಗ |
ಪ್ರದರ-ಶಕರಾ — ರಾಧಿ-ಸುತ ಬಳ — ಲದಿರು- ಭವದೊಳ-ಗೆ || ೨೧-೨೦ ||
ಕ್ಷೋಣಿ-ಪತಿಸುತ — ನೆನಿಸಿ- ಕೈ ದು- |
ಗ್ಗಾಣಿ-ಗೊಡ್ಡುವ — ತೆರದಿ- ಸುಮನಸ |
ಧೇನು- ಮನೆಯೊಳ — ಗಿರಲು- ಗೋಮಯ — ಬಯಸು-ವಂದದ-ಲಿ ||
ವೇಣು-ಗಾನ — ಪ್ರಿಯನ- ಅಹಿಕ ಸು- |
ಖಾನು-ಭವ ಬೇ — ಡದಲೆ- ಲಕ್ಷ್ಮೀ- |
ಪ್ರಾಣ-ನಾಥನ — ಪಾದ- ಭಕ್ತಿಯ — ಬೇಡು- ಕೊಂಡಾ-ಡು || ೨೧-೨೧ ||
ಜ್ಞಾನ- ಜ್ಞೇಯ — ಜ್ಞಾತೃ-ವೆಂಬಭಿ- |
ಧಾನ-ದಿಂ ಬು — ದ್ಧ್ಯಾದಿ-ಗಳಧಿ- |
ಷ್ಠಾನ-ದಲಿ ನೆಲೆ — ಸಿದ್ದು- ಕರೆಸುವ — ತತ್ತ-ದಾಹ್ವಯ-ದಿ ||
ಭಾನು- ಮಂಡಲ — ಗ ಪ್ರ-ದರ್ಶಕ |
ತಾನೆ-ನಿಸಿ ವಶ — ನಾಗು-ವನು ಶುಕ- |
ಶೌನ-ಕಾದಿ ಮು — ನೀಂದ್ರ- ಹೃದಯಾ — ಕಾಶ- ಗತ ಚಂ-ದ್ರ || ೨೧-೨೨ ||
ಉದಯ- ವ್ಯಾಪಿನಿ — ದರ್ಶ- ಪೌರ್ಣಿಮ |
ಅಧಿಕ-ಯಾಮವು — ಶ್ರವಣ-ವಭಿಜಿತು |
ಸದನ- ವೈದಿರೆ — ಮಾಳ್ಪ- ತೆರದಂ — ದದಲಿ- ಹರಿಸೇ-ವೆ ||
ವಿಧಿ ನಿ-ಷೇಧಗ — ಳೇನು- ನೋಡದೆ |
ವಿಧಿಸು-ತಿರು ನಿ — ತ್ಯದಲಿ- ತನ್ನಯ |
ಸದನ-ದೊಳಗಿಂ — ಬಿಟ್ಟು- ಸಲಹುವ — ಭಕ್ತ- ವತ್ಸಲ-ನು || ೨೧-೨೩ ||
ನಂದಿ- ವಾಹನ — ರಾತ್ರಿ- ಸಾಧನೆ |
ಬಂದ- ದ್ವಾದಶಿ — ದಶಮಿ- ಪೈತೃಕ |
ಸಂಧಿ-ಸಿಹ ಸಮ — ಯದಲಿ- ಶ್ರವಣವ — ತ್ಯಜಿಸು-ವಂತೆ ಸ-ದಾ ||
ನಿಂದ್ಯ-ರಿಂದಲಿ — ಬಂದ- ದ್ರವ್ಯವ |
ಕಣ್ದೆ-ರೆದು ನೋ — ಡದಲೆ- ಶ್ರೀಮದಾ- |
ನಂದ-ತೀರ್ಥಾಂ — ತರ್ಗ-ತನ ಸ — ರ್ವತ್ರ- ಭಜಿಸುತಿ-ರು || ೨೧-೨೪ ||
ಶ್ರೀ ಮ-ನೋರಮ — ಮೇರು-ತ್ರಿಕಕು- |
ದ್ಧಾಮ- ಸತ್ಕ — ಲ್ಯಾಣ- ಗುಣ ನಿ- |
ಸ್ಸೀಮ- ಪಾವನ — ನಾಮ- ದಿವಿಜೋ — ದ್ಧಾಮ- ರಘುರಾ-ಮ ||
ಪ್ರೇಮ- ಪೂರ್ವಕ — ನಿತ್ಯ- ತನ್ನ ಮ- |
ಹಾ ಮ-ಹಿಮೆಗಳ — ತುತಿಸು-ವರಿಗೆ ಸು- |
ಧಾಮ-ಗೊಲಿದಂ — ದದಲಿ- ಅಖಿಳಾ — ರ್ಥಗಳ- ಕೊಡುತಿ-ಪ್ಪ || ೨೧-೨೫ ||
ತಂದೆ- ತಾಯ್ಗಳ — ಕುರುಹ-ನರಿಯದ |
ಕಂದ- ದೇಶಾಂ — ತರದೊ-ಳಗೆ ತ- |
ನ್ನಂದ-ದಲಿ ಇ — ಪ್ಪವರ- ಜನನೀ — ಜನಕ-ರನು ಕಂ-ಡು ||
ಹಿಂದೆ- ಎನ್ನನು — ಪಡೆದವರು ಇವ- |
ರಂದ-ದಲಿ ಇ — ಪ್ಪರಲ- ನಾನವ- |
ರೆಂದು- ಕಾಣುವೆ — ನೆನುತ- ಹುಡುಕುವ — ತೆರದಿ- ಕೋವಿದ-ರು || ೨೧-೨೬ ||
ಶೃತಿ ಪು-ರಾಣ ಸ — ಮೂಹ-ದೊಳು ಭಾ- |
ರತ ಪ್ರ-ತಿಪ್ರತಿ — ಪದಗ-ಳೊಳು ನಿ- |
ರ್ಜಿತನ- ಗುಣ ರೂ — ಪಗಳ- ಪುಡುಕುತ — ಪರಮ- ಹರುಷದ-ಲಿ ||
ಮತಿಯು-ತರು ಪ್ರತಿ — ದಿವಸ- ಸಾರ- |
ಸ್ವತ ಸ-ಮುದ್ರದಿ — ಶಫರಿ-ಯಂದದಿ |
ಸತತ- ಸಂಚರಿ — ಸುವರು- ಕಾಣುವ — ಲವಲ-ವಿಕೆಯಿಂ-ದ || ೨೧-೨೭ ||
ಮತ್ಸ್ಯ- ಕೇತನ — ಜನಕ- ಹರಿ ಶ್ರೀ- |
ವತ್ಸ-ಲಾಂಛನ — ನಿಜ ಶ-ರಣ ಜನ- |
ವತ್ಸ-ಲ ವರಾ — ರೋಹ- ವೈಕುಂ — ಠಾಲ-ಯ ನಿವಾ-ಸಿ ||
ಚಿತ್ಸು-ಖ ಪ್ರದ — ಸಲಹೆ-ನಲು ಗೋ- |
ವತ್ಸ- ಧ್ವನಿಗೊದ — ಗುವ ತೆ-ರದಿ ಪರ- |
ಮೋತ್ಸ-ಹದಿ ಬಂ — ದೊದಗು-ವನು ನಿ — ರ್ಮತ್ಸ-ರರ ಬಳಿ-ಗೆ || ೨೧-೨೮ ||
ಸೂರಿ-ಗಳಿಗೆ ಸ — ಮೀಪ-ಗ ದುರಾ- |
ಚಾರಿ-ಗಳಿಗೆಂ — ದೆಂದು- ದೂರಾ- |
ದ್ದೂರ-ತರ ದು — ರ್ಲಭನೆ-ನಿಸುವನು — ದೈತ್ಯ- ಸಂತತಿ-ಗೆ ||
ಸಾರಿ- ಸಾರಿಗೆ — ನೆನೆವ-ವರ ಸಂ- |
ಸಾರ- ವೆಂಬ ಮ — ಹೋರ-ಗಕೆ ಸ- |
ರ್ಪಾರಿ-ಯೆನಿಸಿ ಸ — ದಾ ಸು-ಸೌಖ್ಯವ — ನೀವ- ಸುಜನರಿ-ಗೆ || ೨೧-೨೯ ||
ಚಕ್ರ- ಶಂಖ ಗ — ದಾಬ್ಜ- ಧರ ದುರ- |
ತಿಕ್ರ-ಮ ದುರಾ — ವಾಸ- ವಿಧಿ ಶಿವ- |
ಶಕ್ರ- ಸೂರ್ಯಾ — ದ್ಯಮರ- ಪೂಜ್ಯ ಪ — ದಾಬ್ಜ- ನಿರ್ಲ-ಜ್ಜ ||
ಶುಕ್ರ- ಶಿಷ್ಯನ — ಅಶ್ವ-ಮೇಧ- |
ಪ್ರಕ್ರಿ-ಯವ ಕೆಡಿ — ಸ್ಯಬ್ಜ-ಜಾಂಡವ- |
ತಿಕ್ರ-ಮಿಸಿ ಜಾ — ಹ್ನವಿಯ- ಪಡೆದ ತ್ರಿ — ವಿಕ್ರ-ಮಾಹ್ವಯ-ನು || ೨೧-೩೦||
ಶಕ್ತ-ರೆನಿಸುವ — ರಿಲ್ಲ- ಹರಿ ವ್ಯತಿ- |
ರಿಕ್ತ- ಸುರಗಣ — ದೊಳಗೆ- ಸರ್ವೋ- |
ದ್ರಿಕ್ತ-ನೆನಿಸುವ — ಸರ್ವ-ರಿಂದಲಿ — ಸರ್ವ-ಕಾಲದ-ಲಿ ||
ಭಕ್ತಿ-ಪೂರ್ವಕ — ವಾಗಿ- ಅನ್ಯಪ್ರ- |
ಸಕ್ತಿ-ಗಳನೀ — ಡ್ಯಾಡಿ- ಪರಮಾ- |
ಸಕ್ತ-ನಾಗಿರು — ಹರಿಕ-ಥಾಮೃತ — ಪಾನ- ವಿಷಯದ-ಲಿ || ೨೧-೩೧ ||
ಪ್ರಣತ- ಕಾಮದ — ಭಕ್ತ- ಚಿಂತಾ- |
ಮಣಿ ಮ-ಣಿಮಯಾ — ಭರಣ- ಭೂಷಿತ |
ಘೃಣಿ ಗು-ಣತ್ರಯ — ದೂರ- ವರ್ಜಿತ — ಗಹನ- ಸನ್ಮಹಿ-ಮ ||
ಎಣಿಸ- ಭಕ್ತರ — ದೋಷ-ಗಳ ಕುಂ- |
ಭಿಣಿಜೆ-ಯಾಣ್ಮ ಶ — ರಣ್ಯ- ರಾಮಾ- |
ರ್ಪಣವೆ-ನಲು ಕೈ — ಕೊಂಡ- ಶಬರಿಯ — ಫಲವ- ಪರಮಾ-ಪ್ತ || ೨೧-೩೨ ||
ಬಲ್ಲೆ-ನೆಂಬವ — ರಿಲ್ಲ-ವೀತನ |
ಒಲ್ಲೆ-ನೆಂಬುವ — ರಿಲ್ಲ- ಲೋಕದೊ- |
ಳಿಲ್ಲ-ದಿಪ್ಪ ಪ್ರ — ದೇಶ-ವಿಲ್ಲಾ — ಜ್ಞಾತ- ಜನರಿ-ಲ್ಲ ||
ಬೆಲ್ಲ-ದಚ್ಚಿನ — ಬೊಂಬೆ-ಯಂದದಿ |
ಎಲ್ಲ-ರೊಳಗಿರು — ತಿಪ್ಪ- ಶ್ರೀ ಭೂ- |
ನಲ್ಲ- ಇವಗೆಣೆ — ಯಿಲ್ಲ- ಅಪ್ರತಿ — ಮಲ್ಲ- ಜಗಕೆ-ಲ್ಲ || ೨೧-೩೩ ||
ಶಬ್ದ- ಗೋಚರ — ಶಾರ್ವ-ರೀಕರ- |
ಅಬ್ದ- ವಾಹನ — ನನುಜ- ಯದುವಂ- |
ಶಾಬ್ಧಿ- ಚಂದ್ರಮ — ನಿರುಪ-ಮ ಸುನಿ — ಸ್ಸೀಮ- ಸಮಿತ ಸ-ಮ |
ಲಬ್ದ-ನಾಗುವ — ತನ್ನ-ವಗೆ ಪ್ರಾ- |
ರಬ್ಧ- ಕರ್ಮಗ — ಳುಣಿಸಿ- ತೀವ್ರದಿ |
ಕ್ಷುಬ್ಧ- ಪಾವಕ — ನಂತೆ- ಬಿಡದಿ — ಪ್ಪನು ದ-ಯಾ ಸಾಂ-ದ್ರ || ೨೧-೩೪ ||
ಶ್ರೀವಿ-ರಿಂಚಾ — ದ್ಯಮರ- ವಂದಿತ |
ಈ ವ-ಸುಂಧರೆ — ಯೊಳಗೆ- ದೇವಕಿ- |
ದೇವಿ- ಜಠರದೊ — ಳವತ-ರಿಸಿದನು — ಅಜನು- ನರನಂ-ತೆ ||
ರೇವ-ತೀರಮ — ಣಾನು-ಜನು ಸ್ವಪ- |
ದಾವ-ಲಂಬಿಗ — ಳನು ಸ-ಲಹಿ ದೈ- |
ತ್ಯಾವ-ಳಿಯ ಸಂ — ಹರಿಸಿ-ದ ಜಗ — ನ್ನಾಥ-ವಿಠ್ಠಲ-ನು || ೨೧-೩೫ ||
|| ಇತಿ ಶ್ರೀ ಸ್ತೋತ್ರ ಸಂಧಿ ಸಂಪೂರ್ಣಂ ||
|| ಇತಿ ಶ್ರೀಕರ್ಮವಿಮೋಚನ ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||
22. Bhaktaparadha sahishnu sandhi
- stOtra saMdhi
|| karmavimOcana saMdhi ||
harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||
moola- naaraa — yaNanu- maayaa- |
lOla-naMtava — taara- naamaka |
vyaaLa-roopa ja — yaara-maNanaa — vEsha-nenisuva-nu ||
leele-gaivaa — naMta- cEtana- |
jaala-doLu pra — dyumna- brahmaaM- |
Daala-yada oLa — horage- nelesiha — shaaMti-yaniru-ddha || 21-1 ||
aidu- kaaraNa — roopa- ippa- |
ttaidu- kaaryaga — Lenisu-vavu aa |
raidu- roopadi — ramisu-tippanu — ee ca-raacara-di ||
bhEda- varjita — mooja-gajja- |
nmaadi- kaaraNa — mukti-daayaka |
swOda-radoLi — TTella-ranu saM — taipa- sarva-j~ja || 21-2 ||
kaarya- kaaraNa — kartRu-gaLoLu swa- |
bhaarya-riMdoDa — gooDi- kapilaa- |
caarya- kreeDisu — tippa- tannoLu — taane- swEcCheya-li ||
prErya-nalla ra — maabja-bhava bhava- |
raarya- rakShisi — shikShi-suvanu swa- |
veerya-diMdali — divija- daanava — tatiya- dinadina-di || 21-3 ||
ee sa-masta ja — gatti-noLagaa- |
kaasha-dOLiru — tippa- vyaaptaa- |
vEsha-navataa — raaMta-raatmaka — naagi- paramaa-tma ||
naasha- rahita ja — gatti-noLagava- |
kaasha-danu taa — naagi- yOgee- |
shaasha-yasthita — tanno-Lellara — niTTu- salahuva-nu || 21-4 ||
daaru- paaShaa — Nagata- paavaka |
bEre- bEri — ppaMte- kaaraNa- |
kaarya-gaLa oLa — giddu- kaaraNa — kaarya-neMdeni-si ||
tOri-koLLade — yella-roLu vyaa- |
paara- maaDuva — yOgya-tegaLanu – |
saara- phalagaLa — nuNisi- saMtai — suva kRu-paasaaM-dra || 21-5 ||
oormi-gaLa vO — lippa- karma vi- |
karma-janya pha — laapha-laMgaLa |
nirma-laatmanu — maaDi- maaDisi — uMDu-Nisuti-ppa ||
nirma-ma niraa — maya ni-raashraya |
dharma-viddha — rmaatma- dharmaga |
durma-tI jana — rolla-naprati — malla- shreena-lla || 21-6 ||
jalada-baDa baa — nalaga-LaMbudhi |
jalava-nuMbuvu — abda- maLegare- |
diLege- shaaMtiya — neevu-danalanu — taane- bhuMjipu-du ||
tiLivu-deepari — yalli- lakShmI- |
nilaya- guNakRuta — karma-ja phalaa- |
phalaga-LuMDuNi — suvanu- sarvaga — sarva- jeevari-ge || 21-7 ||
pusta-kagaLava — lOki-suta maM- |
trastu-tigaLana — lEnu- raviyuda- |
yasta-maya pari — yaMta- japagaLa — maaDi- phalavE-nu ||
hRutstha- paramaa — tmane sa-mastaa- |
vasthe-gaLoLi — ddella-roLage ni- |
rasta- kaamanu — maaDi- maaDipa — neMdu- tiLiyada-va || 21-8 ||
madya- bhaaMDava — dEva-nadiyoLa- |
gaddi- toLeyalu — nitya-dali pari- |
shuddha-vaahude — eMdi-gaadaru — hari pa-daabjaga-La ||
buddhi- poorvaka — bhajisa-davage vi- |
ruddha-venisuvu — vella- karma sa- |
mRuddhi-gaLu duH — khavane- koDutiha — vadhama- jeevari-ge || 21-9 ||
bhakti- poorvaka — vaagi- muktaa- |
mukta- neeyaa — makana- sarvO- |
drikta- mahimega — Lanava-rata koM — DaaDu- mareyada-le ||
sakta-naagade — lOka-vaarte pra- |
sakti-gaLanee — DaaDi- shruti smRu- |
tyukta- karmava — maaDu-tiru hari — yaaj~je-yeMdari-du || 21-10 ||
lOpa-vaadaru — sariye- karmaja- |
paapa- puNyaga — LeraDu- ninnanu |
lEpi-savu ni — Shkaama-kanu nee — naagi- maaDuti-re ||
soupa-raNi vara — vahana- ninna ma- |
haapa-raadhaga — LeNisa-dale swa- |
rgaapa-vargado — LiTTu- salahuva — satata- sukhasaaM-dra || 21-11 ||
swarata- sukhamaya — sulabha- vishwaM- |
bhara vi-shOka su — raasu-raarcita- |
caraNa-yuga caa — rvaaMga- shaar~gga sha — raNya- jitama-nyu ||
parama- suMdara — tara pa-raatpara |
sharaNa- jana sura — dhEnu- shaashwata |
karuNi- kaMjada — LaakSha- kaayene — kaMgo-Lipa shee-ghra || 21-12 ||
nirma-manu nee — naagi- karma vi- |
karma-gaLanu ni — raMta-radali su- |
dharma- naamaka — garpi-suta ni — ShkaluSha- neenaa-gu ||
bharma- garbhana — janaka- dayadali |
durma-tigaLanu — koDade- tannaya |
harmya-doLagi — TTella- kaaladi — kaava- kRupeyiM-da || 21-13 ||
kalpa- kalpadi — sharaNa-jana vara- |
kalpa-vRukShanu — tanna- nija saM- |
kalpa-danusaa — radali- koDuti — ppanu pha-laaphala-va ||
alpa-sukhadaa — pEkShe-yiMdahi- |
talpa-naaraa — dhisadi-reMdigu |
shilpa-kana kai — sikka- shileyaM — dadali- saMtai-pa || 21-14 ||
dEsha- bhEdaa — kaasha-daMdadi |
vaasu-dEvanu — sarva- bhoota ni- |
vaasi-yenisi ca — raa ca-raatmaka — neMdu- karesuva-nu ||
dwESha- snEhO — daasi-nagaLi- |
llI sha-reeraga — LoLage- avarO- |
paasa-negaLaM — dadali- phalavee — vanu pa-rabra-hma || 21-15 ||
saMci-taagaa — migaLa- karma vi- |
riMci- janakana — bhajise- keDuvavu |
miMci-naMdadi — poLeva- puruShO — ttama hRu-daMbara-di ||
vaMci-suva jana — rolla- shreeva- |
tsaaMci-ta susa — dwakSha- taa ni- |
ShkiMca-na jana — preeya- suramuni — gEya- shubhakaa-ya || 21-16 ||
kaala- dravya su — karma- shuddhiya- |
pELu-varu a — lparige- avu ni- |
rmoola- gaisuva — valla- paapaga — Lella- kaalada-li |
taila-dhaarE — yaMta-vana pada |
Ola-yisi tuti — sadale- nityadi |
baali-sharu ka — rmagaLe- taaraka — veMdu- pELuva-ru || 21-17 ||
kamala- saMbhava — sharva- shakraa- |
dyamara-rellaru — ivana- durati- |
krama ma-himegaLa — manava-canadiM — praaMta-gaaNada-le ||
shramita-raagi pa — daabja- kalpa- |
drumane-Lalanaa — shrayisi- lakShmI- |
ramaNa- saMtai — seMdu- praarthipa — rati bha-kutiyiM-da || 21-18 ||
vaari-caraveni — suvavu- dardura |
taara-kagaLeM — daridu- bhEkava- |
nEri- jaladhiya — daaTu-venu eM — bavana- teradaM-te ||
taara-tamya — j~jaana- shoonyaru |
soori-gamyana — tiLiya-lariyade |
soura- shaiva ma — taanu-gara anu — sarisi- keDutiha-ru || 21-19 ||
kShudheya-gOsuga — pOgi- kaanana |
badari- phalagaLa — pEkShe-yiMdali |
podeyo-Lage siga — biddu- baaydere — davana- teradaM-te ||
vidhipi-tana poo — jisade- ninnaya |
udara-kOsuga — saadhu-liMga |
pradara-shakaraa — raadhi-suta baLa — ladiru- bhavadoLa-ge || 21-20 ||
kShONi-patisuta — nenisi- kai du- |
ggaaNi-goDDuva — teradi- sumanasa |
dhEnu- maneyoLa — giralu- gOmaya — bayasu-vaMdada-li ||
vENu-gaana — priyana- ahika su- |
khaanu-bhava bE — Dadale- lakShmI- |
praaNa-naathana — paada- bhaktiya — bEDu- koMDaa-Du || 21-21 ||
jjaana- jjEya — j~jaatRu-veMbabhi- |
dhaana-diM bu — ddhyaadi-gaLadhi- |
ShThaana-dali nele — siddu- karesuva — tatta-daahwaya-di ||
bhaanu- maMDala — ga pra-darshaka |
taane-nisi vasha — naagu-vanu shuka- |
shouna-kaadi mu — neeMdra- hRudayaa — kaasha- gata caM-dra || 21-22 ||
udaya- vyaapini — darsha- pourNima |
adhika-yaamavu — shravaNa-vabhijitu |
sadana- vaidire — maaLpa- teradaM — dadali- harisE-ve ||
vidhi ni-ShEdhaga — LEnu- nODade |
vidhisu-tiru ni — tyadali- tannaya |
sadana-doLagiM — biTTu- salahuva — bhakta- vatsala-nu || 21-23 ||
naMdi- vaahana — raatri- saadhane |
baMda- dwaadashi — dashami- paitRuka |
saMdhi-siha sama — yadali- shravaNava — tyajisu-vaMte sa-daa ||
niMdya-riMdali — baMda- dravyava |
kaNde-redu nO — Dadale- shreemadaa- |
naMda-teerthaaM — targa-tana sa — rvatra- bhajisuti-ru || 21-24 ||
shree ma-nOrama — mEru-trikaku- |
ddhaama- satka — lyaaNa- guNa ni- |
ssIma- paavana — naama- divijO — ddhaama- raghuraa-ma ||
prEma- poorvaka — nitya- tanna ma- |
haa ma-himegaLa — tutisu-varige su- |
dhaama-golidaM — dadali- akhiLaa — rthagaLa- koDuti-ppa || 21-25 ||
taMde- taaygaLa — kuruha-nariyada |
kaMda- dEshaaM — tarado-Lage ta- |
nnaMda-dali i — ppavara- jananI — janaka-ranu kaM-Du ||
hiMde- ennanu — paDedavaru iva- |
raMda-dali i — pparala- naanava- |
reMdu- kaaNuve — nenuta- huDukuva — teradi- kOvida-ru || 21-26 ||
shRuti pu-raaNa sa — mooha-doLu bhaa- |
rata pra-tiprati — padaga-LoLu ni- |
rjitana- guNa roo — pagaLa- puDukuta — parama- haruShada-li ||
matiyu-taru prati — divasa- saara- |
swata sa-mudradi — shaphari-yaMdadi |
satata- saMcari — suvaru- kaaNuva — lavala-vikeyiM-da || 21-27 ||
matsya- kEtana — janaka- hari shree- |
vatsa-laaMChana — nija sha-raNa jana- |
vatsa-la varaa — rOha- vaikuM — Thaala-ya nivaa-si ||
citsu-kha prada — salahe-nalu gO- |
vatsa- dhwanigoda — guva te-radi para- |
mOtsa-hadi baM — dodagu-vanu ni — rmatsa-rara baLi-ge || 21-28 ||
soori-gaLige sa — meepa-ga duraa- |
caari-gaLigeM — deMdu- dooraa- |
ddoora-tara du — rlabhane-nisuvanu — daitya- saMtati-ge ||
saari- saarige — neneva-vara saM- |
saara- veMba ma — hOra-gake sa- |
rpaari-yenisi sa — daa su-soukhyava — neeva- sujanari-ge || 21-29 ||
cakra- shaMkha ga — daabja- dhara dura- |
tikra-ma duraa — vaasa- vidhi shiva- |
shakra- sooryaa — dyamara- poojya pa — daabja- nirla-jja ||
shukra- shiShyana — ashwa-mEdha- |
prakri-yava keDi — syabja-jaaMDava- |
tikra-misi jaa — hnaviya- paDeda tri — vikra-maahwaya-nu || 21-30||
shakta-renisuva — rilla- hari vyati- |
rikta- suragaNa — doLage- sarvO- |
drikta-nenisuva — sarva-riMdali — sarva-kaalada-li ||
bhakti-poorvaka — vaagi- anyapra- |
sakti-gaLanee — DyaaDi- paramaa- |
sakta-naagiru — harika-thaamRuta — paana- viShayada-li || 21-31 ||
praNata- kaamada — bhakta- ciMtaa- |
maNi ma-Nimayaa — bharaNa- bhooShita |
ghRuNi gu-Natraya — doora- varjita — gahana- sanmahi-ma ||
eNisa- bhaktara — dOSha-gaLa kuM- |
bhiNije-yaaNma sha — raNya- raamaa- |
rpaNave-nalu kai — koMDa- shabariya — phalava- paramaa-pta || 21-32 ||
balle-neMbava — rilla-veetana |
olle-neMbuva — rilla- lOkado- |
Lilla-dippa pra — dEsha-villaa — j~jaata- janari-lla ||
bella-daccina — boMbe-yaMdadi |
ella-roLagiru — tippa- shree bhoo- |
nalla- ivageNe — yilla- aprati — malla- jagake-lla || 21-33 ||
shabda- gOcara — shaarva-rIkara- |
abda- vaahana — nanuja- yaduvaM- |
shaabdhi- caMdrama — nirupa-ma suni — ssIma- samita sa-ma |
labda-naaguva — tanna-vage praa- |
rabdha- karmaga — LuNisi- tIvradi |
kShubdha- paavaka — naMte- biDadi — ppanu da-yaa saaM-dra || 21-34 ||
shreevi-riMcaa — dyamara- vaMdita |
ee va-suMdhare — yoLage- dEvaki- |
dEvi- jaTharado — Lavata-risidanu — ajanu- naranaM-te ||
rEva-tIrama — Naanu-janu swapa- |
daava-laMbiga — Lanu sa-lahi dai- |
tyaava-Liya saM — harisi-da jaga — nnaatha-viThThala-nu || 21-35 ||
|| iti shree stOtra saMdhi saMpoorNaM ||
|| iti shreekarmavimOcana saMdhi saMpoorNaM ||
|| shreekRuShNaarpaNamastu ||

Leave a Reply
You must be logged in to post a comment.