22. Bhaktaparadha sahishnu sandhi

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

Shri Kesava Rao Tadipatri

English Script

೨೨. ಭಕ್ತಾಪರಧಸಹಿಷ್ಣು ಸಂಧಿ
|| (ಸಕಲದುರಿತನಿವಾರಣ ಸಂಧಿ )||

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||

ಶ್ರೀ ಲ-ಕುಮಿವ — ಲ್ಲಭಗೆ- ಸಮ ಕರು- |
ಣಾಳು-ಗಳ ನಾ — ಕಾಣೆ-ನೆಲ್ಲಿ ಕು- |
ಚೇಲ-ನವಲಿಗೆ — ಮೆಚ್ಚಿ- ಕೊಟ್ಟನು — ಸಕಲ- ಸಂಪದ-ವ ||
ಕೇಳಿ-ದಾಕ್ಷಣ — ವಸ್ತ್ರ-ಗಳ ಪಾಂ- |
ಚಾಲಿ-ಗಿತ್ತನು — ದೈತ್ಯ-ನುದರವ |
ಸೀಳಿ- ಸಂತೈ — ಸಿದನು- ಪ್ರಹ್ಲಾ — ದನ ಕೃ-ಪಾಸಾಂ-ದ್ರ || ೨೨-೧ ||

ದೇವ- ಶರ್ಮಾ — ಹ್ವಯ ಕು-ಟುಂಬಕೆ |
ಜೀವ-ನೋಪಾ — ಯವನು- ಕಾಣದೆ |
ದೇವ- ದೇವ ಶ — ರಣ್ಯ- ರಕ್ಷಿಸು — ರಕ್ಷಿ-ಸೆನೆ ಕೇ-ಳಿ ||
ತಾ ವೊ-ಲಿದು ಪಾ — ಲಿಸಿದ- ಸೌಖ್ಯ ಕೃ- |
ಪಾವ-ಲೋಕನ — ದಿಂದ-ಲೀತನ |
ಸೇವಿ-ಸದೆ ಸೌ — ಖ್ಯಗಳ- ಬಯಸುವ — ರಲ್ಪ- ಮಾನವ-ರು || ೨೨-೨ ||

ಶ್ರೀನಿ-ವಾಸನ — ಪೋಲ್ವ- ಕರುಣಿಗ- |
ಳೀ ನ-ಳಿನಜಾಂ — ಡದೊಳು- ಕಾಣೆ ಪ್ರ- |
ವೀಣ-ರಾದವ — ರರಸಿ- ನೋಳ್ಪುದು — ಶೃತಿ ಪು-ರಾಣದೊ-ಳು ||
ದ್ರೋಣ- ಭೀಷ್ಮ ಕೃ — ಪಾದಿ-ಗಳು ಕುರು- |
ಸೇನೆ-ಯೊಳಗಿರೆ — ಅವರ-ವಗುಣಗ- |
ಳೇನು- ನೋಡದೆ — ಪಾಲಿ-ಸಿದ ಪರ — ಮಾತ್ಮ- ಪರಗತಿ-ಯ || ೨೨-೩ ||

ಚಂಡ- ವಿಕ್ರಮ — ಚಕ್ರ- ಶಂಖವ |
ತೋಂಡ-ಮಾನ ನೃ — ಪಾಲ-ಗಿತ್ತನು |
ಭಾಂಡ-ಕಾರಕ — ಭೀಮ-ನ ಮೃದಾ — ಭರಣ-ಗಳಿಗೊಲಿ-ದ ||
ಮಂಡೆ-ಯೊಡದಾ — ಕಾಶ-ರಾಯನ |
ಹೆಂಡ-ತಿಯ ನುಡಿ — ಕೇಳಿ- ಮಗಳಿಗೆ |
ಗಂಡ-ನೆನಿಸಿದ — ಗಹನ- ಮಹಿಮ ಗ — ದಾಬ್ಜ-ಧರಪಾ-ಣಿ || ೨೨-೪ ||

ಗೌತ-ಮನ ನಿಜ — ಪತ್ನಿ-ಯನು ಪುರು |
ಹೂತ- ನೈದಿರೆ — ಕಾಯ್ದ- ವೃತ್ರನ |
ಘಾತಿ-ಸಿದ ಪಾ — ಪವನು- ನಾಲ್ಕು ವಿ — ಭಾಗ- ಮಾಡಿದ-ನು ||
ಶಾಂತ- ಕುಂಭಾ — ತ್ಮಕ ಕಿ೦ರೀಟವ |
ಕೈತ-ವದಿ ಕ — ದ್ದೊಯ್ದ- ಇಂದ್ರಾ |
ರಾತಿ- ಬಾಗಿಲ — ಕಾಯ್ದ- ಭಕ್ತ — ತ್ವೇನ- ಸ್ವೀಕರಿ-ಸಿ || ೨೨-೫ ||

ನಾರ- ನಂದ — ವ್ರಜದ- ಸ್ತ್ರೀಯರ |
ಜಾರ- ಕರ್ಮಕೆ — ಒಲಿದ- ಅಜ ಸುಕು |
ಮಾರ-ನೆನಿಸಿದ — ನಂದ-ಗೋಪಗೆ — ನಳಿನ- ಭವ ಜನ-ಕ ||
ವೈರ- ವರ್ಜಿತ — ದೈತ್ಯ-ರನು ಸಂ |
ಹಾರ- ಮಾಡಿದ — ವಿಪ ಗ-ಮನ ಪೆಗ |
ಲೇರಿ-ದನು ಗೋ — ಪಾಲ-ಕರ ವೃಂ — ದಾವ-ನದೊಳಂ-ದು || ೨೨-೬ ||

ಶ್ರೀಕ-ರಾರ್ಚಿತ — ಪಾದ- ಪಲ್ಲವ |
ಗೋಕು-ಲದ ಗೊ — ಲ್ಲತಿಯ-ರೊಲಿಸಿದ |
ಪಾಕ-ಶಾಸನ — ಪೂಜ್ಯ- ಗೋ ಗೋ — ವತ್ಸ-ಗಳ ಕಾಯ್-ದ ||
ನೀಕ-ರಿಸಿ ಕುರು — ಪತಿಯ- ಭೋಜನ |
ಸ್ವೀಕ-ರಿಸಿದನು — ವಿದುರ-ನೌತಣ |
ಬಾಕು-ಲಿಕನಂ — ದದಲಿ- ತೋರಿದ — ಭಕ್ತ- ವತ್ಸಲ-ನು || ೨೨-೭ ||

ಪುತ್ರ-ನೆನಿಸಿದ — ಗೋಪಿ-ದೇವಿಗೆ |
ಭರ್ತೃ-ವೆನಿಸಿದ — ವೃಜದ- ನಾರಿಯ |
ರುತ್ರ- ಲಾಲಿಸಿ — ಪರ್ವ-ತವ ನೆಗ — ಹಿದ ಕೃ-ಪಾಸಾಂ-ದ್ರ ||
ಶತ್ರು- ತಾಪನ — ಯಜ್ಞ- ಪುರುಷನ |
ಪುತ್ರಿ-ಯರ ತಂ — ದಾಳ್ದ- ತ್ರಿಜಗ |
ದ್ಧಾತ್ರ- ಮಂಗಳ — ಗಾತ್ರ- ಪರಮ ಪ — ವಿತ್ರ- ಸುರಮಿ-ತ್ರ || ೨೨-೮ ||

ರೂಪ-ನಾಮವಿ — ಹೀನ- ಗರ್ಗಾ |
ರೋಪಿ-ತ ಸುನಾ — ಮದಲಿ- ಕರೆಸಿದ |
ವ್ಯಾಪ-ಕ ಪರಿ — ಚ್ಛಿನ್ನ- ರೂಪದಿ — ತೋರ್ದ- ಲೋಗರಿ-ಗೆ ||
ದ್ವಾಪ-ರಾಂತ್ಯದಿ — ದೈತ್ಯ-ರನು ಸಂ |
ತಾಪ-ಗೊಳಿಸುವೆ — ನೆಂದು- ಶ್ವೇತ |
ದ್ವೀಪ- ಮಂದಿರ — ನವತ-ರಿಸಿ ಸಲ — ಹಿದನು- ತನ್ನವ-ರ || ೨೨-೯ ||

ಶ್ರೀವಿ-ರಿಂಚಾ — ದ್ಯಮರ-ನುತ ನಾ |
ನಾವ-ತಾರವ — ಮಾಡಿ- ಸಲಹಿದ |
ದೇವ-ತೆಗಳನು — ಋಷಿಗ-ಳನು ಕ್ಷಿತಿ — ಪರನು- ಮಾನವ-ರ ||
ಸೇವೆ-ಗಳ ಕೈ — ಕೊಂಡು- ಫಲಗ-ಳ – |
ನೀವ- ನಿತ್ಯಾ — ನಂದ-ಮಯ ಸು- |
ಗ್ರೀವ- ಧೃವ ಮೊದ — ಲಾದ- ಭಕ್ತರಿ — ಗಿತ್ತ- ಪುರುಷಾ-ರ್ಥ || ೨೨-೧೦ ||

ದುಷ್ಟ- ದಾನವ — ಹರಣ- ಸರ್ವೋ- |
ತ್ಕೃಷ್ಟ- ಸದ್ಗುಣ — ಭರಿತ- ಭಕ್ತಾ- |
ಭೀಷ್ಟ-ದಾಯಕ — ಭಯ ವಿ-ನಾಶಕ — ವಿಗತ- ಭಯ ಶೋ-ಕ ||
ನಷ್ಟ- ತುಷ್ಟಿಗ — ಳಿಲ್ಲ- ಸೃಷ್ಟ್ಯಾ- |
ದ್ಯಷ್ಟ-ಕರ್ತನಿ — ಗಾವ- ಕಾಲದಿ |
ಹೃಷ್ಟ-ನಾಗುವ — ಸ್ಮರಣೆ- ಮಾತ್ರದಿ — ಹೃದ್ಗು-ಹಾವಾ-ಸಿ || ೨೨-೧೧ ||

ಹಿಂದೆ- ಪ್ರಳಯೋ — ದಕದಿ- ತಾವರೆ- |
ಕಂದ- ನಂಜಿಸಿ — ಕಾಯ್ದ- ತಲೆಯಲಿ |
ಬಾಂದೊ-ರೆಯ ಪೊ — ತ್ತವಗೊ-ಲಿದು ಪರಿ — ಯಂಕ- ಪದವಿ-ತ್ತ ||
ವಂದಿ-ಸಿದ ವೃಂ — ದಾರ-ಕರ ಸ- |
ದ್ವೃಂದ- ಕುಣಿಸಿದ — ಸುಧೆಯ- ಕರುಣಾ- |
ಸಿಂಧು- ಕಮಲಾ — ಕಾಂತ- ಬಹು ನಿ — ಶ್ಚಿಂತ- ಜಯವಂ-ತ || ೨೨-೧೨ ||

ಸತ್ಯ-ಸಂಕ — ಲ್ಪಾನು-ಸಾರ ಪ್ರ- |
ವರ್ತಿ-ಸುವ ಪ್ರಭು — ತನಗೆ- ತಾನೇ |
ಭೃತ್ಯ-ನೆನಿಸುವ — ಭೋಕ್ತೃ- ಭೋಗ್ಯ ಪ — ದಾರ್ಥ-ದೊಳಗಿ-ದ್ದು ||
ತತ್ತ-ದಾಹ್ವಯ — ನಾಗಿ- ತರ್ಪಕ |
ತೃಪ್ತಿ- ಬಡಿಸುವ — ತತ್ತ್ವ- ಪತಿಗಳ |
ಮತ್ತ-ರಾದಸು — ರರ್ಗೆ- ಅಸಮೀ — ಚೀನ- ಫಲವೀ-ವ || ೨೨-೧೩ ||

ಬಿಟ್ಟಿ-ಗಳ ನೆವ — ದಿಂದ-ಡಾಗಲಿ |
ಪೊಟ್ಟೆ-ಗೋಸುಗ — ವಾದ-ಡಾಗಲಿ |
ಕೆಟ್ಟ-ರೋಗ ಪ್ರ — ಯುಕ್ತ-ವಾಗಲಿ — ಅಣಕ-ದಿಂದೊ-ಮ್ಮೆ ||
ನಿಟ್ಟು-ಸಿರಿನಿಂ — ಬಾಯ್ದೆ-ರೆದು ಹರಿ |
ವಿಠ್ಠ-ಲಾ ಸಲ — ಹೆಂದೆ-ನಲು ಕೈ- |
ಗೊಟ್ಟು- ಕಾವ ಕೃ — ಪಾಳು- ಸಂತತ — ತನ್ನ- ಭಕುತರ-ನು || ೨೨-೧೪ ||

ಈ ವ-ಸುಂಧರೆ — ಯೊಳಗೆ- ಶ್ರೀಭೂ |
ದೇವಿ-ಯರಸನ — ಸುಗುಣ- ಕರ್ಮಗ- |
ಳಾವ- ಬಗೆಯಿಂ — ದಾದ-ಡಾಗಲಿ — ಕೀರ್ತಿ-ಸುವ ನರ-ರ ||
ಕಾವ- ಕಮಲದ — ಳಾಯ-ತಾಕ್ಷ ಕೃ – |
ಪಾವ- ಲೋಕನ — ದಿಂದ- ಕಪಿ ಸು- |
ಗ್ರೀವ-ಗೊಲಿದಂ — ದದಲಿ- ಒಲಿದಭಿ — ಲಾಷೆ- ಪೂರೈ-ಪ || ೨೨-೧೫ ||

ಚೇತ-ನಾಂತ — ರ್ಯಾಮಿ- ಲಕ್ಷ್ಮೀ- |
ನಾಥ- ಕರ್ಮಗ — ಳನುಸ-ರಿಸಿ “ಜನಿ- |
ತೋಥ- ವಿಷ್ಣೋ” — ಯೆಂಬ- ಶ್ರುತಿ ಪ್ರತಿ — ಪಾದ್ಯ- ಎಮ್ಮೊಡ-ನೆ ||
ಜಾತ-ನಾಗುವ — ಜನ್ಮ-ರಹಿತಾ |
ಕೂತಿ-ನಂದನ — ಭಕ್ತ-ರಿಂದಾ- |
ಹೂತ-ನಾಗಿ ಮ — ನೋರ-ಥವ ಬೇ — ಡಿಸಿಕೊ-ಳದಲೀ-ವ || ೨೨-೧೬ ||

ನೃಷತು- ಎನಿಸುವ — ಮನುಜ-ರೊಳು ಸುರ |
ಋಷಭ-ನಿಂದ್ರಿಯ — ಗಳೊಳು- ತತ್ತ- |
ದ್ವಿಷಯ-ಗಳ ಭುಂ — ಜಿಸುವ- ಹೋತಾ — ಹ್ವಯನು- ತಾನಾ-ಗಿ ||
ಮೃಷ ರ-ಹಿತ ವೇ — ದದೊಳು- ಋತಸತು- |
ಪೆಸರಿ-ನಿಂದಲಿ — ಕರೆಸು-ತ ಜಗ- |
ತ್ಪ್ರಸವಿ-ತ ನಿರಂ — ತರದಿ- ಸಂತೈ — ಸುವನು- ಭಕುತರ-ನು || ೨೨-೧೭ ||

ಅಬ್ಜ-ಭವಪಿತ — ಜಲಧ-ರಾದ್ರಿಯೊ- |
ಳಬ್ಜ- ಗೋಜಾ — ದ್ರಿಜ ನೆ-ನಿಸಿ ಜಲ- |
ದುಬ್ಬ-ಳೆಯು ಪೀ — ಯೂಷ-ದಾವರೆ — ಶ್ರೀಶ-ಶಾಂಕರೊ-ಳು ||
ಕಬ್ಬು- ಕದಳಿ ಲ — ತಾ ತೃ-ಣ ದ್ರುಮ |
ಹೆಬ್ಬ-ಗೆಯ ಮಾ — ಡುತಿಹ- ಗೋಜನು |
ಇಬ್ಬ-ಗೆ ಪ್ರತೀ — ಕ ಮಣಿ-ಮೃಗಗಳ — ಸೃಜಿಪ-ನದ್ರಿಜ-ನು || ೨೨-೧೮ ||

ಶೃತಿ ವಿ-ನುತ ಸ — ರ್ವತ್ರ-ದಲಿ ಭಾ- |
ರತಿ ರ-ಮಣನೊಳ — ಗಿದ್ದು- ತಾ ಶುಚಿ- |
ಷತು ಎ-ನಿಸಿ ಜಡ — ಚೇತ-ನರನು ಪ — ವಿತ್ರ- ಮಾಡುತಿ-ಹ ||
ಅತುಳ- ಮಹಿಮ ಅ — ನಂತ-ರೂಪಾ- |
ಚ್ಯುತನೆ-ನಿಸಿ ಚಿ — ದ್ದೇಹ-ದೊಳು ಪ್ರಾ- |
ಕೃತ ಪು-ರುಷನಂ — ದದಲಿ- ನಾನಾ — ಚೇಷ್ಟೆ-ಗಳ ಮಾ-ಳ್ಪ || ೨೨-೧೯ ||

ಅತಿಥಿ- ಎನಿಸುವ — ನನ್ನ-ಮಯ ಭಾ- |
ರತಿ ರ-ಮಣನೊಳು — ಪ್ರಾಣ-ಮಯ ಪ್ರಾ- |
ಕೃತ ವಿ-ಷಯ ಚಿಂ — ತನೆಯ- ಮಾಡಿಸು — ವನು ಮ-ನೋಮಯ-ನು ||
ಯತನ- ವಿಜ್ಞಾ — ನಮಯ- ಬರಲದ |
ಜತನ- ಮಾಡಿಸಿ — ಆತ್ಮ-ಜಾಯಾ |
ಸುತರ- ಸಂಗದಿ — ಸುಖವ-ನೀವಾ — ನಂದ-ಮಯನೆನಿ-ಸಿ || ೨೨-೨೦ ||

ಇನಿತು- ರೂಪಾ — ತ್ಮನಿಗೆ- ದೋಷಗ |
ಳೆನಿತು- ಬಪ್ಪವು — ಪೇಳಿ-ರೈ ಬ್ರಾ- |
ಹ್ಮಣ ಕು-ಲೋತ್ತಮ — ರಾದ-ವರು ನಿ — ಷ್ಕಪಟ- ಬುದ್ಧಿಯ-ಲಿ ||
ಗುಣನಿ-ಯಾಮಕ — ತತ್ತ-ದಾಹ್ವಯ- |
ನೆನಿಸಿ- ಕಾರ್ಯವ — ಮಾಳ್ಪ- ದೇವನ |
ನೆನೆದ- ಮಾತ್ರದಿ — ದೋಷ-ರಾಶಿಗ — ಳೆಲ್ಲ- ಕೆಡುತಿಹ-ವು || ೨೨-೨೧ ||

ಕುಸ್ಥ-ನೆನಿಸುವ — ಭೂಮಿ-ಯೊಳು ಆ- |
ಶಸ್ಥ-ನೆನಿಸುವ — ದಿಗ್ವ-ಲಯದೊಳು |
ಖಸ್ಥ-ನೆನಿಪಾ — ಕಾಶ-ದೊಳು ಒ — ಬ್ಬೊಬ್ಬ-ರೊಳಗಿ-ದ್ದು |
ವ್ಯಸ್ತ-ನೆನಿಸುವ — ಸರ್ವ-ರೊಳಗೆ ಸ- |
ಮಸ್ತ-ನೆನಿಸುವ — ಬಳಿಯ-ಲಿದ್ದು ಉ- |
ಪಸ್ಥ-ನೆನಿಪ ವಿ — ಶೋಧ-ನ ವಿಶು — ದ್ಧಾತ್ಮ- ಲೋಕದೊ-ಳು || ೨೨-೨೨ ||

ಜ್ಞಾನ-ದನು ಎಂ — ದೆನಿಪ- ಶಾಸ್ತ್ರದಿ |
ಮಾನ-ದನು ಎಂ — ದೆನಿಪ- ವಸನದಿ |
ದಾನ-ಶೀಲ ಸು — ಬುದ್ಧಿ-ಯೊಳಗೆ ವ — ದಾನ್ಯ-ನೆನಿಸುವ-ನು ||
ವೈನ-ತೇಯವ — ರೂಥ- ತತ್ತ- |
ತ್ಸ್ಥಾನ-ದಲಿ ತ — ತ್ತತ್ಸ್ವ-ಭಾವಗ- |
ಳಾನು-ಸಾರ ಚ — ರಿತ್ರೆ- ಮಾಡುತ — ನಿತ್ಯ- ನೆಲೆಸಿ-ಪ್ಪ || ೨೨-೨೩ ||

ಗ್ರಾಮ-ಪನೊಳ — ಗ್ರಣಿ ಎ-ನಿಸುವನು |
ಗ್ರಾಮ-ಣೀಯೆನಿ — ಸುವನು- ಜನರೊಳು |
ಗ್ರಾಮು-ಪಗ್ರಾ — ಮಗಳೊ-ಳಗೆ ಶ್ರೀ — ಮಾನೆ-ನಿಸುತಿ-ಪ್ಪ ||
ಶ್ರೀಮ-ನೋರಮ — ತಾನೆ- ಯೋಗ- |
ಕ್ಷೇಮ- ನಾಮಕ — ನಾಗಿ- ಸಲಹುವ |
ಈ ಮ-ಹಿಮೆ ಮಿ — ಕ್ಕಾದ- ದೇವರಿ — ಗುಂಟೆ- ಲೋಕದೊ-ಳು || ೨೨-೨೪ ||

ವಿಜಯ-ಸಾರಥಿ — ಯೆಂದು- ಗರುಡ- |
ಧ್ವಜನ- ಮೂರ್ತಿಯ — ಭಕ್ತಿ- ಪೂರ್ವಕ |
ಭಜಿಸು-ತಿಪ್ಪ ಮ — ಹಾತ್ಮ-ರಿಗೆ ಸ — ರ್ವತ್ರ-ದಲಿ ಒಲಿ-ದು ||
ವಿಜಯ-ದನು ತಾ — ನಾಗಿ- ಸಲಹುವ |
ಭುಜಗ-ಭೂಷಣ — ಪೂಜ್ಯ- ಚರಣಾಂ -|
ಭುಜ ವಿ-ಭೂತಿದ — ಭುವನ- ಮೋಹನ — ರೂಪ- ನಿರ್ಲೇ-ಪ || ೨೨-೨೫ ||

ಅನಭಿ-ಮತಕ — ರ್ಮ ಪ್ರ-ವಹದೊಳ- |
ಗನಿಮಿ-ಷಾದಿ ಸ — ಮಸ್ತ- ಚೇತನ |
ಗಣವಿ-ಹುದು ತ — ತ್ಫಲಗ-ಳುಣ್ಣದೆ — ಸೃಷ್ಟಿ-ಸದ ಮು-ನ್ನ ||
ವನಿತೆ-ಯಿಂದೊಡ — ಗೂಡಿ- ಕರುಣಾ- |
ವನಧಿ- ನಿರ್ಮಿಸೆ — ತಮ್ಮ- ತಮ್ಮಯ |
ಅನುಚಿ-ತೋಚಿತ — ಕರ್ಮ- ಫಲಗಳ — ಉಣುತ- ಚರಿಸುವ-ರು || ೨೨-೨೬ ||

ಝಲ್ಲ-ಡಿಯ ನೆಳ — ಲಂತೆ- ಭವಸುಖ- |
ತಲ್ಲ-ಣವ ಗೊಳಿ — ಸುವುದು- ನಿಶ್ಚಯ- |
ವಲ್ಲ- ಸಾಲವ — ಮಾಡಿ- ಸಕ್ಕರೆ — ಮೆದ್ದ- ತೆರದಂ-ತೆ ||
ಕ್ಷುಲ್ಲ-ಕರ ಕೂ — ಡಾಡ-ದಲೆ ಶ್ರೀ- |
ವಲ್ಲ-ಭನ ಸ — ದ್ಗುಣಗ-ಣಂಗಳ |
ಬಲ್ಲ-ವರ ಕೂ — ಡಾಡಿ- ಸಂಪಾ — ದಿಸು ಪ-ರಂಪದ-ವ || ೨೨-೨೭ ||

ಝಲ್ಲ-ಡಿಯ ನೆಳ — ಲಂತೆ- ತೋರ್ಪುದು |
ಎಲ್ಲ- ಕಾಲದಿ — ಭವದ- ಸೌಖ್ಯವು |
ಎಲ್ಲಿ- ಪೊಕ್ಕರು — ಬಿಡದೆ- ಬೆಂಬ — ತ್ತಿಹುದು- ಜೀವರಿ-ಗೆ- ||
ಒಲ್ಲೆ-ನೆಂದರೆ — ಬಿಡದು- ಹರಿ ನಿ- |
ರ್ಮಾಲ್ಯ- ನೈವೇ — ದ್ಯವನು- ಭುಂಜಿಸಿ |
ಬಲ್ಲ-ವರ ಕೂ — ಡಾಡು- ಭವದುಃ — ಖಗಳ – ನೀಡಾಡು || ೨೨-೨೮ ||

ಕುಟ್ಟಿ- ಕೊಯ್ದುದ — ನಟ್ಟು- ಇಟ್ಟುದ |
ಸುಟ್ಟು- ಕೊಟ್ಟುದ — ಮುಟ್ಟ-ಲಘ ಹಿ- |
ಟ್ಟಿಟ್ಟು- ಮಾಳ್ಪುದು — ವಿಠ್ಠ-ಲುಂಡು — ಚ್ಛಿಷ್ಠ- ಸಜ್ಜನ-ರ ||
ಬಿಟ್ಟು- ತನ್ನಯ — ಪೊಟ್ಟೆ-ಗೋಸುಗ |
ಥಟ್ಟ-ನುಣುತಿಹ — ಕೆಟ್ಟ- ಮನುಜರ |
ಕಟ್ಟಿ- ಒಯ್ದೆಮ — ಪಟ್ಟ-ಣದೊಳೊ — ತ್ತಟ್ಟಿ-ಲಿಡುತಿಹ-ರು || ೨೨-೨೯ ||

ಜಾಗು- ಮಾಡದೆ — ಭೋಗ-ದಾಸೆಯ |
ನೀಗಿ- ಪರಮನು — ರಾಗ-ದಲಿ ವರ- |
ಭೋಗಿ- ಶಯನನ — ಆಗ-ರದ ಹೆ — ಬ್ಬಾಗಿ-ಲಲಿ ನಿಂ-ದು ||
ಕೂಗು-ತಲಿ ಶಿರ — ಬಾಗಿ- ಕರುಣಾ- |
ಸಾಗ-ರನೆ ಭವ — ರೋಗ- ಭೇಷಜ |
ಕೈಗೊ-ಡೆಂದೆನೆ — ಬೇಗ- ಒದಗುವ — ಭಾಗ-ವತರರ-ಸ || ೨೨-೩೦ ||

ಏನು- ಕರುಣವೊ — ತನ್ನ-ವರಲಿ ದ- |
ಯಾನಿ-ಧಿಗೆ ಸ — ದ್ಭಕ್ತಿ- ಜನರತಿ – |
ಹೀನ- ಕರ್ಮವ — ಮಾಡಿ-ದರು ಸರಿ — ಸ್ವೀಕ-ರಿಸಿ ಪೊರೆ-ವ ||
ಪ್ರಾಣ-ಹಿಂಸಕ — ಲುಬ್ಧ-ಕಗೆ ಸು- |
ಜ್ಞಾನ- ಪಾಲಿಸಿ — ತನ್ನ- ಮಹಿಮೆ ಪು- |
ರಾಣ- ರೂಪದಿ — ಪೇಳಿ-ಸಿದ ರಘು — ಸೂನು- ಸುಚರಿ-ತ್ರ || ೨೨-೩೧ ||

ಮೂಢ- ಮಾನವ — ಎಲ್ಲ- ಕಾಲದಿ |
ಬೇಡಿ-ಕೊಂಬಿನಿ — ತೆಂದು- ದೈನ್ಯದಿ |
ಬೇಡ-ದಂದದಿ — ಮಾಡು- ಪುರುಷಾ — ರ್ಥಗಳ- ಸ್ವಪ್ನದ-ಲಿ ||
ನೀಡು-ವರೆ ನಿ — ನ್ನಮಲ-ಗುಣ ಕೊಂ- |
ಡಾಡಿ- ಹಿಗ್ಗುವ — ಭಾಗ-ವತರೊಡ- |
ನಾಡಿ-ಸೆನ್ನನು — ಜನ್ಮ-ಜನ್ಮಗ — ಳಲ್ಲಿ- ಮರೆಯದ-ಲೆ || ೨೨-೩೨ ||

ಚತುರ-ವಿಧ ಪುರು — ಷಾರ್ಥ- ರೂಪನು |
ಚತುರ- ಮೂರ್ತ್ಯಾ — ತ್ಮಕನಿ-ರಲು ಮ- |
ತ್ತಿತರ- ಪುರುಷಾ — ರ್ಥಗಳ- ಬಯಸುವ — ರೇನು- ಬಲ್ಲವ-ರು ||
ಮತಿ ವಿ-ಹೀನರು — ಅಹಿಕ- ಸುಖ ಶಾ- |
ಶ್ವತವಿ-ದೆಂದರಿ — ದನುದಿ-ನದಿ ಗಣ -|
ಪತಿಯೆ- ಮೊದಲಾ — ದನ್ಯ- ದೇವತೆ — ಗಳನೆ- ಭಜಿಸುವ-ರು || ೨೨-೩೩ ||

ದ್ರುಹಿಣ- ಮೊದಲಾ — ದಮರ-ಗಣ ಸ- |
ನ್ಮಹಿತ- ಸರ್ವ — ಪ್ರಾಣಿ-ಗಳ ಹೃ- |
ದ್ಗುಹ ನಿ-ವಾಸಿ ಗ — ಭೀರ- ಸರ್ವಾ — ರ್ಥ ಪ್ರ-ದಾಯಕ-ನು ||
ಅಹಿಕ- ಪಾರ — ತ್ರದಲಿ- ವಿಹಿತಾ- |
ವಿಹಿತ- ಕರ್ಮಗ — ಳರಿತು- ಫಲ ಸ- |
ನ್ನಿಹಿತ-ನಾಗಿ — ದ್ದೆಲ್ಲ-ರಿಗೆ ಕೊಡು — ತಿಪ್ಪ- ಸರ್ವ-ಜ್ಞ || ೨೨-೩೪ ||

ಒಮ್ಮೆ-ಗಾದರು — ಜೀವ-ರೊಳು ವೈ- |
ಷಮ್ಯ- ದ್ವೇಷಾ — ಸೂಯ-ವಿಲ್ಲ ಸು- |
ಧರ್ಮ- ನಾಮಕ — ಸಂತ-ಯಿಸುವನು — ಸರ್ವ-ರನು ನಿ-ತ್ಯ- ||
ಬ್ರಹ್ಮ- ಕಲ್ಪಾಂ — ತದಲಿ- ವೇದಾ |
ಗಮ್ಯ- ಶ್ರೀ ಜಗ — ನ್ನಾಥ-ವಿಠ್ಠಲ |
ಸುಮ್ಮ-ನೀವನು — ತ್ರಿವಿಧ-ರಿಗೆ ಅವ — ರವರ- ನಿಜಗತಿ-ಯ || ೨೨-೩೫ ||

|| ಇತಿ ಶ್ರೀ ಭಕ್ತಾಪರಾಧಸಹಿಷ್ಣು ಸಂಧಿ ಸಂಪೂರ್ಣಂ ||
|| (ಇತಿ ಶ್ರೀ ಸಕಲದುರಿತನಿವಾರಣ ಸಂಧಿ ಸಂಪೂರ್ಣಂ) ||
|| ಶ್ರೀ ಕೃಷ್ಣಾರ್ಪಣಮಸ್ತು ||

23. Bruhat taratamya Sandhi – HKS


  1. bhaktaaparadhasahiShNu saMdhi
    || (sakaladuritanivaaraNa saMdhi )||

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||

shree la-kumiva — llabhage- sama karu- |
NaaLu-gaLa naa — kaaNe-nelli ku- |
cEla-navalige — mecci- koTTanu — sakala- saMpada-va ||
kELi-daakShaNa — vastra-gaLa paaM- |
caali-gittanu — daitya-nudarava |
seeLi- saMtai — sidanu- prahlaa — dana kRu-paasaaM-dra || 22-1 ||

dEva- sharmaa — hwaya ku-TuMbake |
jeeva-nOpaa — yavanu- kaaNade |
dEva- dEva sha — raNya- rakShisu — rakShi-sene kE-Li ||
taa vo-lidu paa — lisida- soukhya kRu- |
paava-lOkana — diMda-leetana |
sEvi-sade sou — khyagaLa- bayasuva — ralpa- maanava-ru || 22-2 ||

shreeni-vaasana — pOlwa- karuNiga- |
LI na-LinajaaM — DadoLu- kaaNe pra- |
veeNa-raadava — rarasi- nOLpudu — shRuti pu-raaNado-Lu ||
drONa- bheeShma kRu — paadi-gaLu kuru- |
sEne-yoLagire — avara-vaguNaga- |
LEnu- nODade — paali-sida para — maatma- paragati-ya || 22-3 ||

caMDa- vikrama — cakra- shaMkhava |
tOMDa-maana nRu — paala-gittanu |
bhaaMDa-kaaraka — bheema-na mRudaa — bharaNa-gaLigoli-da ||
maMDe-yoDadaa — kaasha-raayana |
heMDa-tiya nuDi — kELi- magaLige |
gaMDa-nenisida — gahana- mahima ga — daabja-dharapaa-Ni || 22-4 ||

gouta-mana nija — patni-yanu puru |
hoota- naidire — kaayda- vRutrana |
Gaati-sida paa — pavanu- naalku vi — bhaaga- maaDida-nu ||
shaaMta- kuMbhaa — tmaka ki0reeTava |
kaita-vadi ka — ddoyda- iMdraa |
raati- baagila — kaayda- bhakta — twEna- sweekari-si || 22-5 ||

naara- naMda — vrajada- streeyara |
jaara- karmake — olida- aja suku |
maara-nenisida — naMda-gOpage — naLina- bhava jana-ka ||
vaira- varjita — daitya-ranu saM |
haara- maaDida — vipa ga-mana pega |
lEri-danu gO — paala-kara vRuM — daava-nadoLaM-du || 22-6 ||

shreeka-raarcita — paada- pallava |
gOku-lada go — llatiya-rolisida |
paaka-shaasana — poojya- gO gO — vatsa-gaLa kaay-da ||
neeka-risi kuru — patiya- bhOjana |
sweeka-risidanu — vidura-noutaNa |
baaku-likanaM — dadali- tOrida — bhakta- vatsala-nu || 22-7 ||

putra-nenisida — gOpi-dEvige |
bhartRu-venisida — vRujada- naariya |
rutra- laalisi — parva-tava nega — hida kRu-paasaaM-dra ||
shatru- taapana — yaj~ja- puruShana |
putri-yara taM — daaLda- trijaga |
ddhaatra- maMgaLa — gaatra- parama pa — vitra- surami-tra || 22-8 ||

roopa-naamavi — heena- gargaa |
rOpi-ta sunaa — madali- karesida |
vyaapa-ka pari — cChinna- roopadi — tOrda- lOgari-ge ||
dwaapa-raaMtyadi — daitya-ranu saM |
taapa-goLisuve — neMdu- shwEta |
dweepa- maMdira — navata-risi sala — hidanu- tannava-ra || 22-9 ||

shreevi-riMcaa — dyamara-nuta naa |
naava-taarava — maaDi- salahida |
dEva-tegaLanu — RuShiga-Lanu kShiti — paranu- maanava-ra ||
sEve-gaLa kai — koMDu- phalaga-La – |
neeva- nityaa — naMda-maya su- |
greeva- dhRuva moda — laada- bhaktari — gitta- puruShaa-rtha || 22-10 ||

duShTa- daanava — haraNa- sarvO- |
tkRuShTa- sadguNa — bharita- bhaktaa- |
bhIShTa-daayaka — bhaya vi-naashaka — vigata- bhaya shO-ka ||
naShTa- tuShTiga — Lilla- sRuShTyaa- |
dyaShTa-kartani — gaava- kaaladi |
hRuShTa-naaguva — smaraNe- maatradi — hRudgu-haavaa-si || 22-11 ||

hiMde- praLayO — dakadi- taavare- |
kaMda- naMjisi — kaayda- taleyali |
baaMdo-reya po — ttavago-lidu pari — yaMka- padavi-tta ||
vaMdi-sida vRuM — daara-kara sa- |
dwRuMda- kuNisida — sudheya- karuNaa- |
siMdhu- kamalaa — kaaMta- bahu ni — shciMta- jayavaM-ta || 22-12 ||

satya-saMka — lpaanu-saara pra- |
varti-suva prabhu — tanage- taanE |
bhRutya-nenisuva — bhOktRu- bhOgya pa — daartha-doLagi-ddu ||
tatta-daahwaya — naagi- tarpaka |
tRupti- baDisuva — tattwa- patigaLa |
matta-raadasu — rarge- asamee — ceena- phalavee-va || 22-13 ||

biTTi-gaLa neva — diMda-Daagali |
poTTe-gOsuga — vaada-Daagali |
keTTa-rOga pra — yukta-vaagali — aNaka-diMdo-mme ||
niTTu-siriniM — baayde-redu hari |
viThTha-laa sala — heMde-nalu kai- |
goTTu- kaava kRu — paaLu- saMtata — tanna- bhakutara-nu || 22-14 ||

ee va-suMdhare — yoLage- shreebhoo |
dEvi-yarasana — suguNa- karmaga- |
Laava- bageyiM — daada-Daagali — keerti-suva nara-ra ||
kaava- kamalada — Laaya-taakSha kRu – |
paava- lOkana — diMda- kapi su- |
greeva-golidaM — dadali- olidabhi — laaShe- poorai-pa || 22-15 ||

cEta-naaMta — ryaami- lakShmI- |
naatha- karmaga — Lanusa-risi “jani- |
tOtha- viShNO” — yeMba- shruti prati — paadya- emmoDa-ne ||
jaata-naaguva — janma-rahitaa |
kooti-naMdana — bhakta-riMdaa- |
hoota-naagi ma — nOra-thava bE — Disiko-Ladalee-va || 22-16 ||

nRuShatu- enisuva — manuja-roLu sura |
RuShabha-niMdriya — gaLoLu- tatta- |
dwiShaya-gaLa bhuM — jisuva- hOtaa — hwayanu- taanaa-gi ||
mRuSha ra-hita vE — dadoLu- Rutasatu- |
pesari-niMdali — karesu-ta jaga- |
tprasavi-ta niraM — taradi- saMtai — suvanu- bhakutara-nu || 22-17 ||

abja-bhavapita — jaladha-raadriyo- |
Labja- gOjaa — drija ne-nisi jala- |
dubba-Leyu pee — yooSha-daavare — shreesha-shaaMkaro-Lu ||
kabbu- kadaLi la — taa tRu-Na druma |
hebba-geya maa — Dutiha- gOjanu |
ibba-ge pratee — ka maNi-mRugagaLa — sRujipa-nadrija-nu || 22-18 ||

shRuti vi-nuta sa — rvatra-dali bhaa- |
rati ra-maNanoLa — giddu- taa shuci- |
Shatu e-nisi jaDa — cEta-naranu pa — vitra- maaDuti-ha ||
atuLa- mahima a — naMta-roopaa- |
chyutane-nisi ci — ddEha-doLu praa- |
kRuta pu-ruShanaM — dadali- naanaa — cEShTe-gaLa maa-Lpa || 22-19 ||

atithi- enisuva — nanna-maya bhaa- |
rati ra-maNanoLu — praaNa-maya praa- |
kRuta vi-Shaya ciM — taneya- maaDisu — vanu ma-nOmaya-nu ||
yatana- vij~jaa — namaya- baralada |
jatana- maaDisi — aatma-jaayaa |
sutara- saMgadi — sukhava-neevaa — naMda-mayaneni-si || 22-20 ||

initu- roopaa — tmanige- dOShaga |
Lenitu- bappavu — pELi-rai braa- |
hmaNa ku-lOttama — raada-varu ni — ShkapaTa- buddhiya-li ||
guNani-yaamaka — tatta-daahwaya- |
nenisi- kaaryava — maaLpa- dEvana |
neneda- maatradi — dOSha-raashiga — Lella- keDutiha-vu || 22-21 ||

kustha-nenisuva — bhoomi-yoLu aa- |
shastha-nenisuva — digwa-layadoLu |
khastha-nenipaa — kaasha-doLu o — bbobba-roLagi-ddu |
vyasta-nenisuva — sarva-roLage sa- |
masta-nenisuva — baLiya-liddu u- |
pastha-nenipa vi — shOdha-na vishu — ddhaatma- lOkado-Lu || 22-22 ||

j~jaana-danu eM — denipa- shaastradi |
maana-danu eM — denipa- vasanadi |
daana-sheela su — buddhi-yoLage va — daanya-nenisuva-nu ||
vaina-tEyava — rootha- tatta- |
tsthaana-dali ta — ttatswa-bhaavaga- |
Laanu-saara ca — ritre- maaDuta — nitya- nelesi-ppa || 22-23 ||

graama-panoLa — graNi e-nisuvanu |
graama-NIyeni — suvanu- janaroLu |
graamu-pagraa — magaLo-Lage shree — maane-nisuti-ppa ||
shreema-nOrama — taane- yOga- |
kShEma- naamaka — naagi- salahuva |
ee ma-hime mi — kkaada- dEvari — guMTe- lOkado-Lu || 22-24 ||

vijaya-saarathi — yeMdu- garuDa- |
dhwajana- moortiya — bhakti- poorvaka |
bhajisu-tippa ma — haatma-rige sa — rvatra-dali oli-du ||
vijaya-danu taa — naagi- salahuva |
bhujaga-bhooShaNa — poojya- caraNaaM -|
bhuja vi-bhootida — bhuvana- mOhana — roopa- nirlE-pa || 22-25 ||

anabhi-mataka — rma pra-vahadoLa- |
ganimi-Shaadi sa — masta- cEtana |
gaNavi-hudu ta — tphalaga-LuNNade — sRuShTi-sada mu-nna ||
vanite-yiMdoDa — gooDi- karuNaa- |
vanadhi- nirmise — tamma- tammaya |
anuci-tOcita — karma- phalagaLa — uNuta- carisuva-ru || 22-26 ||

Jalla-Diya neLa — laMte- bhavasukha- |
talla-Nava goLi — suvudu- nishcaya- |
valla- saalava — maaDi- sakkare — medda- teradaM-te ||
kShulla-kara koo — DaaDa-dale shree- |
valla-bhana sa — dguNaga-NaMgaLa |
balla-vara koo — DaaDi- saMpaa — disu pa-raMpada-va || 22-27 ||

Jalla-Diya neLa — laMte- tOrpudu |
ella- kaaladi — bhavada- soukhyavu |
elli- pokkaru — biDade- beMba — ttihudu- jeevari-ge- ||
olle-neMdare — biDadu- hari ni- |
rmaalya- naivE — dyavanu- bhuMjisi |
balla-vara koo — DaaDu- bhavaduH — khagaLa – neeDaaDu || 22-28 ||

kuTTi- koyduda — naTTu- iTTuda |
suTTu- koTTuda — muTTa-laGa hi- |
TTiTTu- maaLpudu — viThTha-luMDu — cChiShTha- sajjana-ra ||
biTTu- tannaya — poTTe-gOsuga |
thaTTa-nuNutiha — keTTa- manujara |
kaTTi- oydema — paTTa-NadoLo — ttaTTi-liDutiha-ru || 22-29 ||

jaagu- maaDade — bhOga-daaseya |
neegi- paramanu — raaga-dali vara- |
bhOgi- shayanana — aaga-rada he — bbaagi-lali niM-du ||
koogu-tali shira — baagi- karuNaa- |
saaga-rane bhava — rOga- bhEShaja |
kaigo-DeMdene — bEga- odaguva — bhaaga-vatarara-sa || 22-30 ||

Enu- karuNavo — tanna-varali da- |
yaani-dhige sa — dbhakti- janarati – |
heena- karmava — maaDi-daru sari — sweeka-risi pore-va ||
praaNa-hiMsaka — lubdha-kage su- |
j~jaana- paalisi — tanna- mahime pu- |
raaNa- roopadi — pELi-sida raghu — soonu- sucari-tra || 22-31 ||

mooDha- maanava — ella- kaaladi |
bEDi-koMbini — teMdu- dainyadi |
bEDa-daMdadi — maaDu- puruShaa — rthagaLa- swapnada-li ||
neeDu-vare ni — nnamala-guNa koM- |
DaaDi- higguva — bhaaga-vataroDa- |
naaDi-sennanu — janma-janmaga — Lalli- mareyada-le || 22-32 ||

catura-vidha puru — Shaartha- roopanu |
catura- moortyaa — tmakani-ralu ma- |
ttitara- puruShaa — rthagaLa- bayasuva — rEnu- ballava-ru ||
mati vi-heenaru — ahika- sukha shaa- |
shwatavi-deMdari — danudi-nadi gaNa -|
patiye- modalaa — danya- dEvate — gaLane- bhajisuva-ru || 22-33 ||

druhiNa- modalaa — damara-gaNa sa- |
nmahita- sarva — praaNi-gaLa hRu- |
dguha ni-vaasi ga — bheera- sarvaa — rtha pra-daayaka-nu ||
ahika- paara — tradali- vihitaa- |
vihita- karmaga — Laritu- phala sa- |
nnihita-naagi — ddella-rige koDu — tippa- sarva-j~ja || 22-34 ||

omme-gaadaru — jeeva-roLu vai- |
Shamya- dwEShaa — sooya-villa su- |
dharma- naamaka — saMta-yisuvanu — sarva-ranu ni-tya- ||
brahma- kalpaaM — tadali- vEdaa |
gamya- shree jaga — nnaatha-viThThala |
summa-neevanu — trividha-rige ava — ravara- nijagati-ya || 22-35 ||

|| iti shree bhaktaaparaadhasahiShNu saMdhi saMpoorNaM ||
|| (iti shree sakaladuritanivaaraNa saMdhi saMpoorNaM) ||
|| shree kRuShNaarpaNamastu ||

23. Bruhat taratamya Sandhi – HKS

Leave a Reply

You might also like

error: Content is protected !!