Composer : Shri Pradyumna Teertharu
ಬೀರೆ ಸನ್ಮತಿಯ ಪಾರ್ವತಿ
ಬೀರೆ ಸನ್ಮತಿಯ [ಪ]
ಪೋರನಲ್ಲಪಾರ ದೋಷ
ದೂರಗೈಯುತ ಮಾರನೈಯ್ಯನ
ಚಾರು ಮೂರುತಿ ತೋರಿ ನಿರುತ
ಸಾರಸಾಕ್ಷಿ ಗಾರು ಮಾಡದೆ [೧]
ಕ್ಷೋಣಿಯಲ್ಲಿ ಪ್ರಾಣಮತವ
ಜ್ಞಾನದಿಂದಲಿ ಗಾನಮಾಡುವ
ದಾನವಿತ್ತು ಸಾನುರಾಗದಿ
ದಾನವಾಂತಕ ಕಾಣುವಂತೆ [೨]
ಕಾಮಹರನ ವಾಮಭಾಗದಿ
ಪ್ರೇಮದಿ ಇರುವ ಭಾಮಾಮಣಿಯೆ
ಕಾಮಮಾರ್ಗಣ ಧಾಮ ಕೆಡಹಿ
ಶ್ರೀ ನರಹರಿ ನಾಮಸುಖವ [೩]
bIre sanmatiya pArvati
bIre sanmatiya [pa]
pOranallapAra dOSha
dUragaiyuta mAranaiyyana
cAru mUruti tOri niruta
sArasAkShi gAru mADade [1]
kShONiyalli prANamatava
j~jAnadiMdali gAnamADuva
dAnavittu sAnurAgadi
dAnavAMtaka kANuvaMte [2]
kAmaharana vAmaBAgadi
prEmadi iruva BAmAmaNiye
kAmamArgaNa dhAma keDahi
SrI narahari nAmasuKava [3]

Leave a Reply
You must be logged in to post a comment.