Composer : Shri Helavanakatte Giriyamma
ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದ
ಸಾರೆ ರುಗ್ಮಿಣಿ ಸಹಿತ ಆನಂದದಿಂದ
ವಾರಿಜಾಂಬಕ ವಾಲಗದೊಳು ಚಂದ
ನಾರಂದಮುನಿ ತಾ ಪಾರಿಜಾತವ ತಂದ (೧)
ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ
ಪುಷ್ಪಯಾರಿಗೆ ಎಂದ
ವಲ್ಲಭೆ ರುಗ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನು
ಬಲ್ಲದೆ ಇಂತೆಂದ
ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು
ಕೇಳಿದಳಾಕೆ ನಿಂದು
ತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದು
ಮನದಲ್ಲಿ ಅತಿನೊಂದು (೧)
ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು
ಮಂದಗಮನೆಯ ಮುಡಿಗೆ ತಾ ಮುಡಿಸಿದನು
ಎಂದು ಎನ್ನೊಳು ಎರವು ಇಲ್ಲವು ಕಾಣಿ
ಇಂದು ಮಾಡಿದ ಕುಹಕವ ಕೃಷ್ಣ ತಾನು (೨)
ಪದ : ಹರಿಯು ಮಾಡಿದ ಮಾಟವನು ಕಂಡೆನು ನಾನು
ಇನ್ನಾರಿಗೆ ಪೇಳುವೆನು
ಪರಿಮಳದ ಪಾರಿಜಾತದ ಹೂವ ತಂದನು ಭಾಮೆ
ರುಗ್ಮಿಣಿ ತನ್ನ ಜೀವ
ಸರಿ ಬಂದ ಮಡದಿಗೆ ಮುಡಿಸಿದ ಶೃಂಗರಿಸಿದ
ಬಹುಪ್ರೀತಿ ಬಡಿಸಿದ
ಬರಿಯ ಮಾತಿನ ಬನ್ನಣೆಯಿಲ್ಲ ಸ್ನೇಹ ತನಗಲ್ಲಿ
ಠಕ್ಕು ಠವಳಿಗಳಿಲ್ಲಿ (೨)
ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ
ಹಚ್ಚಿರೆ ಮಾತ ಹರಿಯು ತಾ ಕೇಳಿದನೆ
ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ
ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ (೩)
ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ
ಇನ್ನೇನು ತೆರನೆ
ತೋರಿಸೆ ಕೃಷ್ಣನ್ನ ಅಮ್ಮಯ್ಯ ಕೇಳು ದಮ್ಮಯ್ಯ
ಕಂತು ಕಮಲಜನಯ್ಯ
ಬಾರದಿದ್ದರೆ ಪ್ರಾಣ ಉಳಿಯದು ಮತ್ತೆ ಅಳಿವುದು
ಏನೆಂದು ತಿಳಿಯದು
ಸಾರಿದ ಸರಿಬಂದ ಸತಿಯಳ ಬಹುರತಿಯಳ
ಬಹು ಪ್ರೀತಿ ಇದ್ದವಳ (೩)
ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕಮ್ಮ
ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ
ಗಿಳಿ ಇಲ್ಲದ ಗೂಡು ತಾನ್ಯಾತಕಮ್ಮ
ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ (೪)
ಪದ : ಯಾಕೆನ್ನ ಬ್ರಹ್ಮ ಪುಟ್ಟಿಸಿದನೊ ಸೃಷ್ಟಿಸಿದನೊ
ಮಾತೆನ್ಮ್ಯಾಕ ಪಡೆದಳೊ
ಸಾಕಿನ್ನು ಹೆಣ್ಣು ಜನ್ಮದ ಬಾಳು ಯಾತಕೆ ಹೇಳು
ತಾಕಲೆನ್ನಯ ಗೋಳು
ಕುಹಕ ಪೇಳ್ದು ನಾರದ ಸಿದ್ಧ ಎಂಬುದು ಬದ್ಧ
ಮೂರುಲೋಕ ಪ್ರಸಿದ್ಧ
ಶ್ರೀಕೃಷ್ಣಂಗೆ ಎನಗೆ ಭೇದವ ಮಾಡಿ ಹೋದನು
ಓಡಿ ತನಗ್ಯಾಕಿದು ಬ್ಯಾಡಿ (೪)
ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು
ವಶವಾದನೆ ಒಲಿದು ರುಗ್ಮಿಣಿಗೆ ತಾನು
ಶಶಿಮುಖಿಯಳೆ ಸವತಿ ಅಟ್ಟುಳಿ ಇದೇನು
ಆಸೆಬಟ್ಟೆನೆ ಬಹಳ ವಸುದೇವ ಸುತಗೆ (೫)
ಪದ : ಸಿಟ್ಟಿನಿಂದತಿ ಘುಡಘುಡಿಸುತ ಆರ್ಭಟಿಸುತ
ಎಲ್ಲರೊಡನೆ ಕೋಪಿಸುತ
ತೊಟ್ಟತೊಡಿಗೆ ಈಡಾಡುತ ಬಿಸಾಡುವ
ನನಗ್ಯಾಕಿದು ಎಂದು
ಪಟ್ಟೆ ಮಂಚದ ಮೇಲೆ ಒರುಗುತ ತಾ ಎರಗುತ
ಮನದೊಳು ಮರುಗುತ
ಇಷ್ಟು ಮಾಡುವುದಿದು ನೀತವೆ ಪ್ರಖ್ಯಾತವೆ
ಸುರಪಾರಿಜಾತವೆ (೫)
ಶ್ಲೋಕ : ದೇವಲೋಕದ ಹೂವ ತನಗಿಲ್ಲವಲ್ಲ
ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ
ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ
ಜೀವದೊಲ್ಲಭೆಯೊಡನೆ ಪಂಥವು ಸಲ್ಲ (೬)
ಪದ : ಮಂದಗಮನೆ ಮುನಿದಿಹಳೊ ಎನ್ನ ಪ್ರಿಯೆಳೊ
ಎನ್ನೊಡನೆ ನುಡಿಯಳೊ
ಇಂದು ಅಲ್ಲಿಗೆ ಹೋಗದಿದ್ದರೆ ಇಲ್ಲಿದ್ದರೆ
ಅಪ್ರಬುದ್ಧನಾದರೆ
ಕುಂದು ಎನ್ನ ಮ್ಯಾಲಿಡುವಳೋ ಸ್ನೇಹ ಬಿಡುವಳೊ
ಕೋಪವನು ತಾಳುವಳೊ ಇಂ
ತೆಂದು ನುಡಿದ ಮುಕುಂದ ನಿತ್ಯಾನಂದನು
ಬಾಗಿಲೊಳು ನಿಂದನು (೬)
ಶ್ಲೋಕ : ಚಿತ್ತದೊಲ್ಲಭೆ ಚದುರೆ ಮೋಹನಾಕಾರೆ
ಮುತ್ತುರತ್ನವ ಮನೆಯೊಳಗೆಲ್ಲ ಬೀರಿ
ಎತ್ತ ಹೋದಳೊ ಎನ್ನ ಪ್ರಾಣದ ನಾರಿ
ಸತ್ಯಭಾಮೆಯ ಸುಳುಹು ಕಾಣೆನು ತೋರಿ (೭)
ಪದ : ಕನ್ನಡಿ ಕದಪಿನ ಜಾಣೆಯ ಸುಪ್ರವೀಣೆಯ
ಕೋಕಿಲವಾಣಿಯ
ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು
ಹಾರೈಸಿ ನಿಂತವರು ಕಣ್ಣು
ಸನ್ನೆಯ ಮಾಡಿ ತೋರ್ವದು ನೋಡಿ ಮೆಲ್ಲಗೆ
ಮಾತಾಡಿ (೭)
ಶ್ಲೋಕ : ಹಾಸಿ ಮಲಗಿದ್ದ ಸತಿಯ ಕಂಡು
ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು
ಸೂಸು ಪರಿಮಳದ ಪಾರಿಜಾತದ ಹೂವ ಹಾ-
ರೈಸಿ ಕಂಗಳು ತೀರವು ನೋಡಿದಳು ಕಾಂತೆ (೮)
ಪದ : ಕಂಡಳು ಕಾರುಣ್ಯಮೂರ್ತಿಯ ಸತ್ಕೀರ್ತಿಯ
ಫಲ್ಗುಣನ ಸಾರಥಿಯ
ಇಲ್ಲಿಗ್ಯಾತಕೆ ಬಂದೆ ಹೋಗೆಂದು ಅತ್ತ ಸಾಗೆಂದು
ಇದು ಏನು ಸೋಗೆಂದು
ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ
ಮುನಿಸ್ಯಾತಕೆನ್ನೊಡನೆ
ಕಂಡ ಕನಸು ಎಂದು ಭಾವಿಸೆ ಎನ್ನ ಜೀವಿಸೆ
ಅಪರಾಧವ ಕ್ಷಮಿಸೆ (೮)
ಶ್ಲೋಕ : ಅಕ್ಕರಿಂದಲೆ ರುಗ್ಮಿಣಿಗೆ ಇತ್ತ ಹೂವ
ಮಿಕ್ಕ ಸತಿಯರಿಗ್ಯಾತಕೆಂಬ ಭಾವ
ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ
ಸೊಕ್ಕ ಬ್ಯಾಡವೊ ಸಾಕು ಹೋಗೆಲೊ ಗೋವ (೯)
ಪದ : ಮಲಯಜಗಂಧಿ ಮರನ ತಂದು
ನಿಲಿಸುವೆನಿಂದು ಮನ್ನಿಸೆ ಕೃಪಾಸಿಂಧು
ಬಲರಾಮ ನಂದಗೋಪನಾಣೆ ತಪ್ಪೆನು ಕಾಣೆ
ಕೋಕಿಲಸ್ವರಗಾನೆ
ಛಲವ್ಯಾತಕೆಂದು ತಕ್ಕೈಸಿದ ಸಂತೈಸಿದ ತೊಡೆಯಲ್ಲಿ
ಕುಳ್ಳಿರಿಸಿದ
ಹೆಳವನಕಟ್ಟೆಯ ರಂಗನು ಕೃಪಾಂಗನು
ದೇವೋತ್ತುಂಗ ವಿಕ್ರಮನು (೯)
SlOka : dvArAvatiyali danujadallaNa mukuMda
sAre rugmiNi sahita AnaMdadiMda
vArijAMbaka vAlagadoLu caMda
nAraMdamuni tA pArijAtava taMda (1)
pada : ballida muniya kuLLirisida satkarisida
puShpayArige eMda
vallaBe rugmiNigallade byAre salladu ella nInu
ballade iMteMda
I suddi satyaBAmege taMdu hELidaraMdu
kELidaLAke niMdu
tallaNisuta ede dhigileMdu BugiBugileMdu
manadalli atinoMdu (1)
SlOka : iMdralOkada caMdada kusumavannu
maMdagamaneya muDige tA muDisidanu
eMdu ennoLu eravu illavu kANi
iMdu mADida kuhakava kRuShNa tAnu (2)
pada : hariyu mADida mATavanu kaMDenu nAnu
innArige pELuvenu
parimaLada pArijAtada hUva taMdanu BAme
rugmiNi tanna jIva
sari baMda maDadige muDisida SRuMgarisida
bahuprIti baDisida
bariya mAtina bannaNeyilla snEha tanagalli
Thakku ThavaLigaLilli (2)
SlOka : mecci baMdene mOhakke maruLAdene
haccire mAta hariyu tA kELidane
necci iddene ennoLu vaMcisidane
racchigikkida raMpu mADida kANe (3)
pada : mAranaTTuLi tALalArene muKadOrane
innEnu terane
tOrise kRuShNanna ammayya kELu dammayya
kaMtu kamalajanayya
bAradiddare prANa uLiyadu matte aLivudu
EneMdu tiLiyadu
sArida saribaMda satiyaLa bahuratiyaLa
bahu prIti iddavaLa (3)
SlOka : maLe illada mEGavidyAtakamma
beLe illada BUmi matyAtakamma
giLi illada gUDu tAnyAtakamma
tALalAreno SrI kRuShNanillade emma (4)
pada : yAkenna brahma puTTisidano sRuShTisidano
mAtenmyAka paDedaLo
sAkinnu heNNu janmada bALu yAtake hELu
tAkalennaya gOLu
kuhaka pELdu nArada siddha eMbudu baddha
mUrulOka prasiddha
SrIkRuShNaMge enage BEdava mADi hOdanu
ODi tanagyAkidu byADi (4)
SlOka : bisajAkShana bahaLa naMbidde nAnu
vaSavAdane olidu rugmiNige tAnu
SaSimuKiyaLe savati aTTuLi idEnu
AsebaTTene bahaLa vasudEva sutage (5)
pada : siTTiniMdati GuDaGuDisuta ArBaTisuta
ellaroDane kOpisuta
toTTatoDige IDADuta bisADuva
nanagyAkidu eMdu
paTTe maMcada mEle oruguta tA eraguta
manadoLu maruguta
iShTu mADuvudidu nItave praKyAtave
surapArijAtave (5)
SlOka : dEvalOkada hUva tanagillavalla
BAve ennoLu muniyade biDuvaLalla
Ava pariyali tiLidu hELuvenu solla
jIvadollaBeyoDane paMthavu salla (6)
pada : maMdagamane munidihaLo enna priyeLo
ennoDane nuDiyaLo
iMdu allige hOgadiddare illiddare
aprabuddhanAdare
kuMdu enna myAliDuvaLO snEha biDuvaLo
kOpavanu tALuvaLo iM
teMdu nuDida mukuMda nityAnaMdanu
bAgiloLu niMdanu (6)
SlOka : cittadollaBe cadure mOhanAkAre
mutturatnava maneyoLagella bIri
etta hOdaLo enna prANada nAri
satyaBAmeya suLuhu kANenu tOri (7)
pada : kannaDi kadapina jANeya supravINeya
kOkilavANiya
innelli hOdaLu tOrise hatra sErise baMdenu
hAraisi niMtavaru kaNNu
sanneya mADi tOrvadu nODi mellage
mAtADi (7)
SlOka : hAsi malagidda satiya kaMDu
bIsaNikeyali bIsida kRuShNa tAnu
sUsu parimaLada pArijAtada hUva hA-
raisi kaMgaLu tIravu nODidaLu kAMte (8)
pada : kaMDaLu kAruNyamUrtiya satkIrtiya
PalguNana sArathiya
illigyAtake baMde hOgeMdu atta sAgeMdu
idu Enu sOgeMdu
hiMDu strIyara SirOrannaLe mOhannaLe
munisyAtakennoDane
kaMDa kanasu eMdu BAvise enna jIvise
aparAdhava kShamise (8)
SlOka : akkariMdale rugmiNige itta hUva
mikka satiyarigyAtakeMba BAva
kakkulAtiya kaMDe ninnalli jIva
sokka byADavo sAku hOgelo gOva (9)
pada : malayajagaMdhi marana taMdu
nilisuveniMdu mannise kRupAsiMdhu
balarAma naMdagOpanANe tappenu kANe
kOkilasvaragAne
CalavyAtakeMdu takkaisida saMtaisida toDeyalli
kuLLirisida
heLavanakaTTeya raMganu kRupAMganu
dEvOttuMga vikramanu (9)

Leave a Reply
You must be logged in to post a comment.