Composer : Shri Krishna vittala
ಗುರುರಾಜ ಕರುಣದಿ ನೋಡಯ್ಯ [ಪ]
ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆ
ಕರೆಕರೆ ಮಾಡದೆ ಚರಣವ ತೋರಿಸು [ಅ.ಪ]
ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟು
ಭವಣೇಗಳನೆ ಪಟ್ಟು ನಾ ಒದ್ದಾಡುವೆ ಇಂದು
ಅವನಿಯ ಜನರೊಳು ಅವಗುಣ ಪ್ರತಿಮೆಯ
ತವಕದಿ ಪೊರೆಯದೆ ಜವನಡಿ ಕಳಿಸೊದೇ [೧]
ಅನುದಿನದೀ ನಾನು ಅನುಮಾನದಿಂದಲಿ ನೊಂದೆ
ಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆ
ತನುಮನ ನಿನ್ನಡಿ ಅರ್ಪಿಸಿ ನಂಬಿದೆ
ದಿನದಿನ ದಯದಿಂ ನಿನ್ನವರೊಳು ಸೇರಿಸೊ [೨]
ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬೆರೆದೆ
ಕಾಮ ಜನಕನ ಮರೆತೆ ಸೋಮಶೇಖರ ಪ್ರಿಯನೆ
ಶಮದಮ ಪಾಲಿಸಿ ತಾಮಸ ಓಡಿಸಿ
ಸಾಮಜವರದನ ಪ್ರೇಮವ ಕೊಡಿಸೋ [೩]
ಜ್ಞಾನಶೂನ್ಯನು ಆಗಿ ಶ್ವಾನಂದದಿ ಇರುವೆ
ಮಾನಾಭಿಮಾನವನ್ನು ನಿನಗೆ ಅರ್ಪಿಸಿದೆನೊ
ಅನಿಲನ ಶಾಸ್ತ್ರದಿ ಜ್ಞಾನವ ನೀ ನೀಡಿ
ಮನದಲಿ ನಲಿನಲಿ ಮುನಿಗಳ ಒಡೆಯಾ [೪]
ವಿಧವಿಧ ಟೀಕೆಗಳನು ಮುದದಿಂದಲಿ ಮಾಡಿ
ಮೋದವಂತದ ತತ್ವಗಳ ಮುಂದಕ್ಕೆ ತಂದೆಯೋ
ಸದಯದಿ ಜಯಮುನಿ ವಾಯ್ವಾಂತರ್ಗತ
ಮಾಧವ ಕೃಷ್ಣವಿಠಲನ ತೋರುತ [೫]
gururAja karuNadi nODayya [pa]
suragaNa oDeyane karavetti mugiyuve
karekare mADade caraNava tOrisu [a.pa]
BavasAgaradi biddu Bava mOcakana biTTu
BavaNEgaLane paTTu nA oddADuve iMdu
avaniya janaroLu avaguNa pratimeya
tavakadi poreyade javanaDi kaLisodE [1]
anudinadI nAnu anumAnadiMdali noMde
anilana hAdiya biTTu anyarAnaMbI keTTe
tanumana ninnaDi arpisi naMbide
dinadina dayadiM ninnavaroLu sEriso [2]
kAmakELiyali muLugi kAminiyara berede
kAma janakana marete sOmaSEKara priyane
Samadama pAlisi tAmasa ODisi
sAmajavaradana prEmava koDisO [3]
j~jAnaSUnyanu Agi SvAnaMdadi iruve
mAnABimAnavannu ninage arpisideno
anilana SAstradi j~jAnava nI nIDi
manadali nalinali munigaLa oDeyA [4]
vidhavidha TIkegaLanu mudadiMdali mADi
mOdavaMtada tatvagaLa muMdakke taMdeyO
sadayadi jayamuni vAyvAMtargata
mAdhava kRuShNaviThalana tOruta [5]

Leave a Reply
You must be logged in to post a comment.