Composer : Shri Prasannavenkata dasaru
ನೀ ಕರುಣಿಸೋ ವಿಟ್ಠಲ ನಮ್ಮ ಸಾಕೋ ಪಂಡರಿ ವಿಟ್ಠಲಾ ||ಪ||
ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಟ್ಠಲಾ |
ಸಾಸುವೆಯಷ್ಟು ಬಕುತಿಯನರಿಯೆನು ಶೇಷಶಯನ ಹರಿ ವಿಠಲಾ ವಿಠಲಾ ||೧||
ಭವ ಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಸುವರೆ ವಿಟ್ಠಲಾ |
ನವನವ ವಿಷಯಕೆ ಹಿಗ್ಗುತಲಿಹ ಮನದ-ವಸರ ಕಾಯೊ ವಿಠಲಾ ವಿಠಲಾ ||೨||
ನಿಶಿದಿನ ಅಶನಾ ವಸನಕೆ ಹೆಣಗುವೆ ಹುಸಿ ಸಂಗ್ರಹಿಸಿದೆ ವಿಟ್ಠಲಾ
ನಿಷೇಧ ಮಾಯ ಎಲ್ಲವು ನರಕದ ಘಸಣೆಗೆ ಅಂಜುವೆ ವಿಠಲಾ ವಿಠಲಾ ||೩||
ತನು ಸಂಬಂಧಿಗಳತಿ ಕಾಯಾರ್ಥಿಗಳ್ ಎನಗ್ಯಾರಿಲ್ಲವೊ ವಿಟ್ಠಲಾ |
ಬಿನುಗು ಮಾನವರ ಅನುಸರಣಿಯಲಿ ದಣಿಸದಿರಯ್ಯ ವಿಠಲಾ ವಿಠಲಾ ||೪||
ಝಾವಕೆ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುಧಿ ವಿಟ್ಠಲಾ |
ನಾ ವದಲ್ ಹೊಕ್ಕೆನೊ ಪ್ರಸನ್ವೆಂಕಟಪತಿ ಜೀವಕೆ ಹೊಣೆ ನೀ ವಿಠಲಾ ವಿಠಲಾ ||೫||
nI karuNisO viTThala namma sAkO paMDari viTThalA ||pa||
dOShigaLoLage hiriyanu nA nirdOShigaLarasanE viTThalA |
sAsuveyaShTu bakutiyanariyenu SEShaSayana hari viThalA viThalA ||1||
Bava sAgaradoLu muLuguve summane avalOkisuvare viTThalA |
navanava viShayake higgutaliha manada-vasara kAyo viThalA viThalA ||2||
niSidina aSanA vasanake heNaguve husi saMgrahiside viTThalA
niShEdha mAya ellavu narakada ghasaNege aMjuve viThalA viThalA ||3||
tanu saMbaMdhigaLati kAyArthigaL enagyArillavo viTThalA |
binugu mAnavara anusaraNiyali daNisadirayya viThalA viThalA ||4||
JAvake mADuve sAvira tappanu kAyO dayAMbudhi viTThalA |
nA vadal hokkeno prasanveMkaTapati jIvake hoNe nI viThalA viThalA ||5||
