-
Nee karuniso vittala
Composer : Shri Prasannavenkata dasaru ನೀ ಕರುಣಿಸೋ ವಿಟ್ಠಲ ನಮ್ಮ ಸಾಕೋ ಪಂಡರಿ ವಿಟ್ಠಲಾ ||ಪ|| ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಟ್ಠಲಾ |ಸಾಸುವೆಯಷ್ಟು ಬಕುತಿಯನರಿಯೆನು ಶೇಷಶಯನ ಹರಿ ವಿಠಲಾ ವಿಠಲಾ ||೧|| ಭವ ಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಸುವರೆ ವಿಟ್ಠಲಾ |ನವನವ ವಿಷಯಕೆ ಹಿಗ್ಗುತಲಿಹ ಮನದ-ವಸರ ಕಾಯೊ ವಿಠಲಾ ವಿಠಲಾ ||೨|| ನಿಶಿದಿನ ಅಶನಾ ವಸನಕೆ ಹೆಣಗುವೆ ಹುಸಿ ಸಂಗ್ರಹಿಸಿದೆ ವಿಟ್ಠಲಾನಿಷೇಧ ಮಾಯ ಎಲ್ಲವು ನರಕದ ಘಸಣೆಗೆ ಅಂಜುವೆ ವಿಠಲಾ ವಿಠಲಾ ||೩|| ತನು…
