Ba Ba bhakutara hrudaya

Composer : Shri Vijayadasaru

ಬಾ ಬಾ ಭಕುತರ ಹೃದಯ ಮಂದಿರ
ಬಾ ಬಾ ಜಗದೋದ್ಧಾರ ||ಪ||

ಬಾ ಬಾ ವೇಂಕಟಾಚಲ ವಿಹಾರ
ಬಾ ಬಾನೇಕಾವತಾರ ಧೀರ-ಶೂರ ||ಅ.ಪ||

ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ
ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ
ಪಕ್ಷಿವಾಹನ ಪೂರ್ಣ ಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವ ಪಕ್ಷ
ಅಕ್ಷಯವಂತ ಸೂಕ್ಷ್ಮಾಂಬರ ಧರಾ-
ಧ್ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೇರ ತಕ್ಷಣದಲಿ ತಂದ
ಅಕ್ಷರ ಪುರುಷ ಗೋವಿಂದ ||೧||

ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ
ಕಾಳೆ ಹೆಗ್ಗಾಳೆ ತಮ್ಮಟೆ, ನಿ-
ಸ್ಸಾಳೆ ಪಟಹ ತಂಬೂರಿ ಪಣವ
ಕಂಸಾಳೆ ಕಂಬುಡಕ್ಕ ವಾದ್ಯ,
ಸೂಳೈಸುತಲಿರೆ ಭಾಗವತರ ಸಂ
ಮೇಳನ ಕುಣಿದೊಲಿದಾಡೆ,
ಸಾಲುಪಂಜಿನ ಗುಂಪು ಛತ್ರ ಚಾಮರ ಧ್ವಜ
ಢಾಲುಗಳು ಒಪ್ಪಿಹರೊ ||೨||

ಬಂಗಾರ ರಥದೊಳು ಶೃಂಗಾರವಾದ ಶ್ರೀ
ಮಂಗಳಾಂಗ ಕಳಿಂಗ
ಭಂಗ ನರಸಿಂಗ ಅಂಗಜ ಜನಕ ಶಾ-
ರಂಗ ರಥಾಂಗ ಪಾಣಿ
ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲ-
ವಂಗ ನಾಯಕ ಪರಿಪಾಲ
ಸಂಗೀತ ಲೋಲ ಗೋಪಾಂಗನೆಯರ ಅಂತ-
ರಂಗ ಸಂತಾಪ ವಿದೂರ ||೩||

ಹತ್ತವತಾರದ ಹರಿಯೆ ಘನಸಿರಿಯೆ ನಾನು
ಮತ್ತೊಬ್ಬರನು ಹೀಗೆ ಕರೆಯೆ,
ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎನ್-
ಹತ್ತಿಲಿ ಆಡುವ ಮರಿಯೆ,
ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ
ಎತ್ತ ನೋಡಲು ನಿನಗೆ ಸರಿಯೆ
ಅತ್ತಿತ್ತ ಪೋಗದೆ ಇತ್ತ ಬಾರೈಯ್ಯ ಎನ್-
ಹತ್ತಿಲಿ ವೆಂಕಟದೊರೆಯ ||೪||


bA bA Bakutara hRudaya maMdira
bA bA jagadOddhAra ||pa||

bA bA vEMkaTAcala vihAra
bA bAnEkAvatAra dhIra-SUra ||a.pa||

dakSha kamalAkSha rAkShasa kula SikSha
lakShmaNanagraja lakShmIvakSha
pakShivAhana pUrNa lakShaNa sarvESa
mOkShadAyaka pAMDava pakSha
akShayavaMta sUkShmAMbara dharA-
dhyakSha pratyakShada daiva
akShatanArEra takShaNadali taMda
akShara puruSha gOviMda ||1||

tALa jAgaTe maddaLe duMduBi BEri
kALe heggALe tammaTe, ni-
ssALe paTaha taMbUri paNava
kaMsALe kaMbuDakka vAdya,
sULaisutalire BAgavatara saM
mELana kuNidolidADe,
sAlupaMjina guMpu Catra cAmara dhvaja
DhAlugaLu oppiharo ||2||

baMgAra rathadoLu SRuMgAravAda SrI
maMgaLAMga kaLiMga
BaMga narasiMga aMgaja janaka shA-
raMga rathAMga pANi
saMga nissaMga mAtaMga vihaMga pla-
vaMga nAyaka paripAla
saMgIta lOla gOpAMganeyara aMta-
raMga saMtApa vidUra ||3||

hattavatArada hariye Ganasiriye nAnu
mattobbaranu hIge kareye,
BRutyara saMgaDODyADuva doreye en-
hattili ADuva mariye,
cittadollaBa namma vijayaviThThalarEya
etta nODalu ninage sariye
attitta pOgade itta bAraiyya en-
hattili veMkaTadoreya ||4||

You might also like

error: Content is protected !!