Baagi bediro yati

Composer : Shri Khadri Narasimha

By Shrikanth BM

ಬಾಗಿ ಬೇಡಿರೋ ಯತಿ ರಾಘವೇಂದ್ರರ
ಯೋಗಿವರ್ಯರಾ ಭವದ ರೋಗ ಹರಿಪರ [ಪ]

ಭುವಿಯ ಬುಧರಿಗೆ ದಿವ್ಯ ಭವ್ಯ ಚರಿತೆಯ
ತವಕದಿಂದಲಿ ಬೆಳಗಿದವರ ಪಾಡಿರೋ (೧)

ಕರೆದು ಕಂಬದಿ ನರಹರಿಯ ತೋರ್ದರ
ಪರಮ ಭಕುತಿಯ ಧರಣಿ ಧರೆಗೆ ಸಾರ್ದರ (೨)

ಸೋಸಿನಿಂದಲೀ ಯತಿ ವ್ಯಾಸರಾದರ
ರಾಶಿ ಗ್ರಂಥವ ರಚಿಸಿ ಸಂತೋಷ ಬೀರ್ದರ (೩)

ಗುರು ಸುಧೀಂದ್ರರಾ ವರ ಕರ ಸುಜಾತರ
ಹರಿಯ ಪಾದವೆ ತಮ್ಮ ಸಿರಿ ಎಂದರಿತರ (೪)

ತುಂಗತೀರದಿ ಮೆರೆವ ಮಂಗಳಾಂಗರ
ರಂಗನಂಘ್ರಿಯ ಅಂತರಂಗ ಭಜಕರ (೫)

ಮೋದತೀರ್ಥರ ಮತವ ಸಾಧಿಸುವರ
ಸಾಧು ವೃಂದಕೆ ಸದ್ ಬೋಧೆ ಗೈವರ (೬)

ಇಂದು ನೋಡಿರೊ ಇವರ ಚಂದ ವೈಭವ
ಎಂದು ಕಾಣದ ಆನಂದದನುಭವ (೭)

ದೇಶ ದೇಶದ ಜನರು ದಾಸರಾಗುತ
ಸೂಸುಕರುಣದ ನಿಧಿಯ ರಾಶಿ ಕಂಡರು (೮)

ಮಾಡಬಾರದ ಕರ್ಮ ಮಾಡಿದವರು
ಬೇಡಿ ಬಾಗಿ ಕೊಂಡಾಡುತೀರ್ಪರು (೯)

ಮದಡನಾದರು ಇವರ ಮುದದಿ ಬೇಡಲು
ಬುಧನು ಆಗುವ ಶುಭದ ಉದಯ ನೋಡುವ (೧೦)

ಭಕ್ತಿಯಿಂದಲಿ ಮೂಲ ಮೃತ್ತಿಕಾ ಜಲ
ನಿತ್ಯ ಸೇವಿಪ ಜನಕೆ ಮುಕ್ತಿಯೇ ಫಲ (೧೧)

ಭೂತ ಗಣಗಳು ಈ ಖ್ಯಾತಿ ಮಹಿಮರ
ಪಾದದುದಕಕೆ ನಡುಗಿ ಸೋತು ಬೀಳ್ವರು (೧೨)

ರಾಘವೇಂದ್ರರ ನಾಮ ರೋಗ ಭಯಹರ
ಜಾಗು ಮಾಡದೆ ಪೀಡೆ ನೀಗಿ ಕೊಳ್ಳಿರೋ (೧೩)

ಪುತ್ರಕಾಮರೂ ಕರಗಳೆತ್ತಿ ಬೇಡಿರೋ
ಮತ್ತೆ ಫಲಗಳ ರಾಶಿ ಇತ್ತ ನೋಡಿರೋ (೧೪)

ಚರಣ ಕಮಲಕೆ ಎರಗಿ ಶಿರವ ಬಾಗುವ
ಶರಣ ಜನರಿಗೆ ಸುರತರುವು ಆಗುವ (೧೫)

ಶುಭದ ಗುಣನಿಧಿ ಭುವಿಗೆ ಅಭಯ ವಾರಿಧಿ
ನಭದ ಮಣಿ ಸಮ ಪ್ರಭೆಯ ವಿಭವದೂಪಮಾ (೧೬)

ಕರುವು ಕರೆದರೆ ಬರುವ ತುರುವ ತೆರದಲಿ
ಶರಣರಿಗೆ ದೊರೆ ಮರುಗಿ ಬರುವ ಭರದಲಿ

ಗಳಿಸಿ ತುಂಬಿದ ಪುಣ್ಯ ಫಲದ ರಾಶಿಯು
ಹೊಳೆಯುತಿರ್ಪುದು ಪಾಲ್ ಜಲಧಿಯಂದದಿ (೧೮)

ಕರುಣಸಾಗರನೆಂಬ ಬಿರುದು ಧರೆಯೊಳು
ಮೆರೆಯುತಿಪ್ಪುದು ರವಿಯ ಕಿರಣದಂದದಿ (೧೯)

ಯೊಗಿವರ್ಯ ಶ್ರೀ ರಾಘವೇಂದ್ರರ
ಭಾಗ್ಯಭೋಗಕೆ ಇಂದು ಯೋಗ್ಯರಾಗಿರೋ (೨೦)

ಅಪ್ಪಣಾರ್ಯರು ಇವರು ಒಪ್ಪುವಂದದೀ
ಒಪ್ಪಿಸಿರುವರು ಕವನದಿರ್ಪ ಸ್ತುತಿಯನು (೨೧)

ಗುರು ಕಟಾಕ್ಷವ ಪಡೆದು ಸರಳ ಸ್ತೊತ್ರವ
ಪಿರಿಯರೆಲ್ಲರೂ ಪಠಿಸಿ ಹರುಷ ಪಡುವರು (೨೨)

ಮಣಿದು ಬೇಡಿರೋ ಕುಣಿ ಕುಣಿದು ಪಾಡಿರೋ
ಎಣಿಕೆಯಿಲ್ಲದ ವರಗಳೆಣಿಸಿಗಳಿಸಿರೊ (೨೩)

ದೋಷದೂರ ಶ್ರೀ ರಾಘವೇಂದ್ರರ
ಈಶನೆಂಬರೂ ಸಂತೋಷ ಭರಿತರು (೨೪)

ಉದಯಕಾಲದಿ ಎದ್ದು ಸದಮಲಾತ್ಮರು
ಇದನು ಪಠಿಸಲು ದಿವ್ಯಪದವಿ ದೊರೆವುದು (೨೫)

ನಿತ್ಯದಲ್ಲಿ ಈ ಸ್ತುತ್ಯಗೀತೆಯ
ಎತ್ತಿ ಪಾಡಲು ಸರ್ವ ಸಿದ್ಧಿ ನಿಶ್ಚಯ (೨೬)

ಮೋದದಿಂದಲಿ ಇದನ್ನು ಓದಿ ಪೇಳ್ದರೆ
ಸಾಧು ಮಾರ್ಗ ಸದ್ಬೋಧೆ ದೊರೆವುದು (೨೭)

ಘನ್ನ ಗುರುಗಳ ಪಾವನ್ನ ಸ್ಮರಣೆಯ
ಮುನ್ನ ಮಾಡಿರೊ ಪರಮ ಧನ್ಯರಾಗಿರೋ (೨೮)

ಆದಿದೇವ ಶ್ರೀಖಾದ್ರಿದೇವನ
ಪಾದದೂತನ ಧ್ಯಾನ ಮೋದ ಸಾಧನಾ (೨೯)


bAgi bEDirO yati rAGavEMdrara
yOgivaryarA Bavada rOga haripara [pa]

Buviya budharige divya Bavya cariteya
tavakadiMdali beLagidavara pADirO (1)

karedu kaMbadi narahariya tOrdara
parama Bakutiya dharaNi dharege sArdara (2)

sOsiniMdalI yati vyAsarAdara
rASi graMthava racisi saMtOSha bIrdara (3)

guru sudhIMdrarA vara kara sujAtara
hariya pAdave tamma siri eMdaritara (4)

tuMgatIradi mereva maMgaLAMgara
raMganaMGriya aMtaraMga Bajakara (5)

mOdatIrthara matava sAdhisuvara
sAdhu vRuMdake sad bOdhe gaivara (6)

iMdu nODiro ivara caMda vaiBava
eMdu kANada AnaMdadanuBava (7)

dESa dESada janaru dAsarAguta
sUsukaruNada nidhiya rASi kaMDaru (8)

mADabArada karma mADidavaru
bEDi bAgi koMDADutIrparu (9)

madaDanAdaru ivara mudadi bEDalu
budhanu Aguva SuBada udaya nODuva (10)

BaktiyiMdali mUla mRuttikA jala
nitya sEvipa janake muktiyE Pala (11)

BUta gaNagaLu I KyAti mahimara
pAdadudakake naDugi sOtu bILvaru (12)

rAGavEMdrara nAma rOga Bayahara
jAgu mADade pIDe nIgi koLLirO (13)

putrakAmarU karagaLetti bEDirO
matte PalagaLa rASi itta nODirO (14)

caraNa kamalake eragi Sirava bAguva
SaraNa janarige surataruvu Aguva (15)

SuBada guNanidhi Buvige aBaya vAridhi
naBada maNi sama praBeya viBavadUpamA (16)

karuvu karedare baruva turuva teradali
SaraNarige dore marugi baruva Baradali

gaLisi tuMbida puNya Palada rASiyu
hoLeyutirpudu pAl jaladhiyaMdadi (18)

karuNasAgaraneMba birudu dhareyoLu
mereyutippudu raviya kiraNadaMdadi (19)

yogivarya SrI rAGavEMdrara
BAgyaBOgake iMdu yOgyarAgirO (20)

appaNAryaru ivaru oppuvaMdadI
oppisiruvaru kavanadirpa stutiyanu (21)

guru kaTAkShava paDedu saraLa stotrava
piriyarellarU paThisi haruSha paDuvaru (22)

maNidu bEDirO kuNi kuNidu pADirO
eNikeyillada varagaLeNisigaLisiro (23)

dOShadUra SrI rAGavEMdrara
ISaneMbarU saMtOSha Baritaru (24)

udayakAladi eddu sadamalAtmaru
idanu paThisalu divyapadavi dorevudu (25)

nityadalli I stutyagIteya
etti pADalu sarva siddhi niScaya (26)

mOdadiMdali idannu Odi pELdare
sAdhu mArga sadbOdhe dorevudu (27)

Ganna gurugaLa pAvanna smaraNeya
munna mADiro parama dhanyarAgirO (28)

AdidEva SrIKAdridEvana
pAdadUtana dhyAna mOda sAdhanA (29)

Leave a Reply

You might also like

error: Content is protected !!