Udayakalavidu namma

Composer : Shri Shyamasundara dasaru

By Smt.Shubhalakshmi Rao

ಉದಯ ಕಾಲವಿದು ನಮ್ಮ ಪದುಮನಾಭನ
ಉದಯಕಾಲವಿದು [ಪ]

ಉದಯಕಾಲವಿದು ಪದುಮನಾಭನ ದಿವ್ಯ,
ವಿಧವಿಧ ಸೃಷ್ಟಿಯ ಮುದದಿ ಸಾಗಿಸುವಂಥ [ಅ.ಪ]

ಪರಮ ಕರುಣಿ ದೇವ
ತನ್ನ ಚರಣದಾಸರ ಕಾವ |
ಮರವೆ ಮಾಯದೊಳು ಹೊರಳುತ ಒರಲುವ
ನರರಿಗರಿವನಿತ್ತು ವರವ ಪಾಲಿಸುವ [೧]

ಅನ್ನ ಆಹಾರವಿತ್ತು
ಸೃಷ್ಟಿಯ ಭಿನ್ನವಿಲ್ಲದೆ ಪೊತ್ತು |
ಬನ್ನ ಬಡುತ ಬಲು ಕುನ್ನಿ ಪ್ರಾಣಿಗಳಿಗೆ
ಉನ್ನತ ಸುಖವಿತ್ತು ತನ್ನಂತೆ ನೋಡುವ [೨]

ಕುಜನರ ಶಿಕ್ಷಿಸುವ
ಮಾಧವ ಸುಜನರ ಪಾಲಿಸುವ |
ನಿಜ ಮನದೊಳು ತನ್ನ ಭಜಿಸುವ ಜನರಿಗೆ
ನಿಜಜ್ಞಾನ ಕರುಣಿಸಿ ಸಾಯುಜ್ಯ ನೀಡುವ [೩]

ಯೋಗಿ ಜನರ ಪ್ರಿಯ
ಕ್ಷೀರ ಸಾಗರ ಕನ್ಯೆಯೊಡೆಯ |
ಬಾಗಿ ಸದೃಢದಿ ಸುರಾಗದಿ ಪಾಡುವ
ಭಾಗವತರ ನಿಜ ಯೋಗಕ್ಷೇಮ ಕೇಳ್ತ [೪]

ಶಾಮಸುಂದರಾಂಗ
ಪುಣ್ಯನಾಮ ಕೋಮಲಾಂಗ |
ಕಾಮಿತಜನ ಪೂರ್ಣ ಕಾಮಜನಕ
ತ್ರಿ ಭೂಮಿಗಧಿಕ ಮಮಸ್ವಾಮಿ ಶ್ರೀರಾಮ [೫]

Padmanabha rupa


udaya kAlavidu namma padumanABana
udayakAlavidu [pa]

udayakAlavidu padumanABana divya,
vidhavidha sRuShTiya mudadi sAgisuvaMtha [a.pa]

parama karuNi dEva
tanna caraNadAsara kAva |
marave mAyadoLu horaLuta oraluva
nararigarivanittu varava pAlisuva [1]

anna AhAravittu
sRuShTiya Binnavillade pottu |
banna baDuta balu kunni prANigaLige
unnata suKavittu tannaMte nODuva [2]

kujanara SikShisuva
mAdhava sujanara pAlisuva |
nija manadoLu tanna Bajisuva janarige
nijaj~jAna karuNisi sAyujya nIDuva [3]

yOgi janara priya
kShIra sAgara kanyeyoDeya |
bAgi sadRuDhadi surAgadi pADuva
BAgavatara nija yOgakShEma kELta [4]

SAmasuMdarAMga
puNyanAma kOmalAMga |
kAmitajana pUrNa kAmajanaka
tri BUmigadhika mamasvAmi SrIrAma [5]

Padmanabha rupa

Leave a Reply

You might also like

error: Content is protected !!