Tag: Udayakalavidu namma

  • Udayakalavidu namma

    Composer : Shri Shyamasundara dasaru ಉದಯ ಕಾಲವಿದು ನಮ್ಮ ಪದುಮನಾಭನಉದಯಕಾಲವಿದು [ಪ] ಉದಯಕಾಲವಿದು ಪದುಮನಾಭನ ದಿವ್ಯ,ವಿಧವಿಧ ಸೃಷ್ಟಿಯ ಮುದದಿ ಸಾಗಿಸುವಂಥ [ಅ.ಪ] ಪರಮ ಕರುಣಿ ದೇವತನ್ನ ಚರಣದಾಸರ ಕಾವ |ಮರವೆ ಮಾಯದೊಳು ಹೊರಳುತ ಒರಲುವನರರಿಗರಿವನಿತ್ತು ವರವ ಪಾಲಿಸುವ [೧] ಅನ್ನ ಆಹಾರವಿತ್ತುಸೃಷ್ಟಿಯ ಭಿನ್ನವಿಲ್ಲದೆ ಪೊತ್ತು |ಬನ್ನ ಬಡುತ ಬಲು ಕುನ್ನಿ ಪ್ರಾಣಿಗಳಿಗೆಉನ್ನತ ಸುಖವಿತ್ತು ತನ್ನಂತೆ ನೋಡುವ [೨] ಕುಜನರ ಶಿಕ್ಷಿಸುವಮಾಧವ ಸುಜನರ ಪಾಲಿಸುವ |ನಿಜ ಮನದೊಳು ತನ್ನ ಭಜಿಸುವ ಜನರಿಗೆನಿಜಜ್ಞಾನ ಕರುಣಿಸಿ ಸಾಯುಜ್ಯ ನೀಡುವ [೩]…

error: Content is protected !!