Composer : Shri Prasannavenkata dasaru
ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆ
ಅಂಬುಜಾಯತಾಂಬಕನ ಇಂಬಲಿಹ ಬೊಂಬೆ [ಪ]
ಕಾವನಯ್ಯನ ಭಟರ ಕಾವೆ ವರವೀವೆ
ದೇವಾದಿ ದೇವರ್ಕಳಿಗೆ ಕುಲದ ದೇವೆ
ಭಾವಕರ ಜೀವೆ ಚಿದ್ ಭವನೈದಿಸುವೆ
ಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ [೧]
ಮಾಯಾಗುಣಮಯ ಅಂಬಾ ತರುವ ಹೊಂದಿರುವೆ
ತಾಯಂದಿರಖಿಳಾರ್ಥ ತಾಯಿ ನೀನೀವೆ
ಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆ
ಎನ್ನಯ ಪ್ರಿಯಳೆ ಪೀಯೂಷ ಉಣಿಸುವೆ [೨]
ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮ
ಸುಮ್ಮನಸರ ಮನೋರಮ್ಮೆ ಶ್ರೀರಮ್ಮೆ
ನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮ
ನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ [೩]
aMbe SrI aMbe jagadaMbe SaraNeMbe
aMbujAyatAMbakana iMbaliha boMbe [pa]
kAvanayyana BaTara kAve varavIve
dEvAdi dEvarkaLige kulada dEve
BAvakara jIve cid Bavanaidisuve
sEvakarAve kAyi enuve dhanya enuve [1]
mAyAguNamaya aMbA taruva hoMdiruve
tAyaMdiraKiLArtha tAyi nInIve
bAyenna tAyennalAyAsa biDisuve
ennaya priyaLe pIyUSha uNisuve [2]
bommanigamma parabommanolisamma
summanasara manOramme SrIramme
nimma mana nammariyA ummayavIyamma
nammaya prasannaveMkaTana meccinamma [3]

Leave a Reply
You must be logged in to post a comment.