ಇನ್ನೆಂದಿಗೋ ನಿನ್ನ ದರುಶನ ಶೇಷಾದ್ರಿವಾಸ ||ಪ||
ಪನ್ನಂಗ ಶಯನ ಪ್ರಸನ್ನರ ಪಾಲಿಪ
ಘನ್ನ ಮಹಿಮ ನೀನೆನ್ನನುದ್ಧರಿಸೂ ||ಅ.ಪ||
ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ
ಪರಮಾದರ-ದಿಂದಿರುವ ಸಮಯದಿ
ನಾರದ ಮುನಿ ಬಂದೊದಗಿ ನಿಂದ ಇಂ-
ದಾರಿಗರ್ಪಿತ-ವೆಂದರುಹಿ ಮರಳೀ ತೆರಳಿದ
ಸುರಮುನಿ ವಚನದಿ ಭೃಗು ಮುನಿವರ ಪೋಗಿ
ಹರ ವಿರಂಚಿಯರ ನೋಡಿದಾ ಉರುತರ ಕೋಪದಿ ನಿಲ್ಲುತ
ಪರಮಪುರುಷ-ರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ,
ಹರುಷದಿ ಶ್ರೀಹರಿ ಉರಗ ಶಯನನಾಗಿ,
ಪರಮ ಯೋಗನಿದ್ರೆ ಮಾಡುತಾ, ಅರಿಯದಂತೆ ತಾ ನಟಿಸುತ,
ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ,
ಹರುಷದಿ ಮುನಿಪಾದ ಕರದಲಿ ಒತ್ತುತ,
ಕರುಣದಿ ಸಲಹಿದೆ ದುರಿತವ ಹರಿಸಿ,
ಹರಿ ಭಕುತರ ಅಘ ಹರಿಸಿ ಕಾಯುವಂಥ,
ಕರುಣಿಗಳುಂಟೇ ಶ್ರೀಹರಿ ಸರ್ವೋತ್ತಮ ||೧||
ಸ್ವಾಮಿ ನೀನಿಜ ಧಾಮವನೇ ತೊರೆದೂ
ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ
ವಲ್ಮೀಕವನೆ ನೋಡಿ,
ವಿಮಲ ಸ್ಥಳವಿದೆಂದು ಮನದಲಿ ಆನಂದದಿಂದಲಿ ಬಂದು ನಿಂದೆ,
ಸನ್ಮುದವನ್ನೇ ತೋರುತ,
ಕಮಲ ಭವ ಶಿವ ತುರು ಕರು ರೂಪದಿ,
ಈ ಮಹ ಗಿರಿಯನ್ನು ಅರಸುತ ಸ್ವಾಮಿ ನೀನಿಲ್ಲಹೆ-ನೆಂದೆನ್ನುತ,
ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ,
ಭೂಮಿಗೊಡೆಯ ಚೋಳ ನೃಪ ಸೇವಕನು,
ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು,
ಭೀಮ ವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು,
ಅಮಿತ ಸುಗುಣಪೂರ್ಣ ಅಜರಾಮರಣ,
ನೀ ಮಸ್ತಕ ಸ್ಪೋಟನ ವ್ಯಾಜವ ತೋರಿ,
ಪ್ರೇಮದಿ ಗುರು ಪೇಳ್ದೌಷಧಕ್ಕಾಗಿ,
ನೀ ಮೋಹವ ತೋರಿದೆ ವಿಡಂಬನ ಮೂರ್ತೇ ||೨||
ಮಾಯಾ ರಮಣನೆ ಜೀಯಾ ಕಾಯುವೆ ಜೀವನಿಕಾಯಾ
ತೋಯಜಾಂಬಕ ಹಯವನೇರಿ ಭರದಿ ತಿರುಗಿ ತಿರುಗೀ,
ವನವನೆಲ್ಲ ಮೃಗನೆವನದಿ ನಿಂದು ನೋಡಿದೇ
ಪ್ರಿಯ ಸಖಿಯರ ಕೂಡಿ ಪದುಮಾವತಿಯು ತಾ
ಹಯದಿ ಕುಳಿತ ನಿನ್ನ ನೋಡಲು,
ಪ್ರಿಯಳಿವಳೆನಗೆಂದು ಯೋಚಿಸಿ,
ಕಾಯಜಪಿತ ನಿನ್ನ ಹಯವನೆ ಕಳಕೊಂಡು,
ಮಾಯದಿಂದ ನೀ ಮಲಗಿದೆ,
ತಾಯಿ ಬಕುಳೆಯೊಳು ಪೇಳಿದೆ,
ತೋಯಜ ಮುಖಿಯಳ ಬೇಡಿದೇ,
ಆ ಯುವತಿಯನ್ನೇ ಸ್ಮರಿಸುತಾ
ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ
ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು,
ಶ್ರೇಯವೆಂದು ಆಕಾಶನನೊಪ್ಪಿಸಿ
ತಾಯಿಯಭೀಷ್ಟವನಿತ್ತೆ ಸ್ವರಮಣಾ ||೩||
ಸಕಲ ಲೋಕೈಕನಾಥಾ ಭಕುತರಭೀಷ್ಟ ಪ್ರದಾತಾ,
ಭಕುತನಾದ ಆಕಾಶ ನೃಪತಿಯು ಬಕುಳೆ ಮಾ-
ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ,
ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ-
ಗೆ ಕೊಟ್ಟನು ತಾ ಲಗ್ನ ಪತ್ರಿಕಾ,
ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ
ರಕಾ ತಾ ಕಳುಹಿದ ಪುಣ್ಯ ಶ್ಲೋಕನು,
ಶೋಕರಹಿತ ಜಗದೇಕ ವಂದ್ಯ ಅವಲೋಕಿಸಿ ಪತ್ರಿಕವನ್ನು,
ಸಕಲ ಸಾಧನವಿಲ್ಲಿನ್ನು,
ಲೋಕೇಶಗರುಹ ಬೇಕಿನ್ನು, ಏಕಾಂಗಿ ನಾನು ಎನ್ನಲು
ಲೋಕಪತಿಯೆ ಸುರ ಕೋಟಿಗಳಿಂದಲಿ,
ಈ ಕುವಲಯದಿ ನಿನ್ನಯ ಪರಿಣಯವೆಸಗಲು,
ಲೋಕ ಜನಕೆ ಕಲ್ಯಾಣವ ತೋರಿದೆ,
ಭಕುತ ಜನಪ್ರಿಯ ಶ್ರೀವತ್ಸಾಂಕಿತ ||೪||
ಖಗವರ ವಾಹನ ದೇವಾ
ತ್ರಿಗುಣರಹಿತ ಜಗಕಾವ
ಅಗಣಿತ ಮಹಿಮ ಗೋಮಯನೆನಿಸಿ
ಬಗೆಬಗೆ ರೂಪವ ಧರಿಸಿ ಪರಮಾದರದಲಿ
ಸುರರ ಪೊರೆಯುತಾ,
ನಗಧರ ನೀನೀ ಗಿರಿಯೊಳು ನೆಲೆಸಿಹೆ,
ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ
ಖಗ ಮೃಗ ರೂಪವ ಬಗೆಬಗೆ ಇಹೆ
ಪೊಗಳಲಳವೇ ಗಿರಿವರವು,
ಹಗಲು ಇರುಳು ಭಗವಂತನೆ ನಿನ್ನನ್ನು,
ಪೊಗಳುತಿಹರು ನಿನ್ನ ಭಕುತರು,
ನಿಗಮವ ಪಠಿಸುತ ನಡೆವರು ನಗೆ
ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ,
ಯುಗ ಯುಗದೊಳು ನೀನಗದೊಳು ನೆಲಸಿಹೆ
ಜಗದ ದೇವ ರಾಜಿಸುವವನಾಗಿಹೆ,
ಮಿಗಿಲೆನಿಸಿದ ಶ್ರೀ ವೆಂಕಟೇಶಾ,
ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ ||೫||
inneMdigO ninna daruSana SEShAdrivAsa ||pa||
pannaMga Sayana prasannara pAlipa
Ganna mahima nInennanuddharisU ||a.pa||
vara suramunigaLa vRuMda nerahida yAgagaLiMda
paramAdara-diMdiruva samayadi
nArada muni baMdodagi niMda iM-
dArigarpita-veMdaruhi maraLI teraLida
suramuni vacanadi BRugu munivara pOgi
hara viraMciyara nODidA urutara kOpadi nilluta
paramapuruSha-ralleMdennuta vaikuMThavannE sAruta,
haruShadi SrIhari uraga SayananAgi,
parama yOganidre mADutA, ariyadaMte tA naTisuta,
ire muni padadiMdodeyuta tvaritadiMda tAnELuta,
haruShadi munipAda karadali ottuta,
karuNadi salahide duritava harisi,
hari Bakutara aGa harisi kAyuvaMtha,
karuNigaLuMTE SrIhari sarvOttama ||1||
svAmi nInija dhAmavanE toredU
svAmikAsAra tIradi niMdU dhAmavanarasi
valmIkavane nODi,
vimala sthaLavideMdu manadali AnaMdadiMdali baMdu niMde,
sanmudavannE tOruta,
kamala Bava Siva turu karu rUpadi,
I maha giriyannu arasuta svAmi nInillahe-neMdennuta,
kAmadhEnu pAlgareyutA I mahimeyannE bIrutA,
BUmigoDeya cOLa nRupa sEvakanu,
dhEnuvannu tA hoDeyalu kAmanayya nInELalu,
BIma vikramava tOralu kShamiside nRupana dayALu,
amita suguNapUrNa ajarAmaraNa,
nI mastaka spOTana vyAjava tOri,
prEmadi guru pELdauShadhakkAgi,
nI mOhava tOride viDaMbana mUrtE ||2||
mAyA ramaNane jIyA kAyuve jIvanikAyA
tOyajAMbaka hayavanEri Baradi tirugi tirugI,
vanavanella mRuganevanadi niMdu nODidE
priya saKiyara kUDi padumAvatiyu tA
hayadi kuLita ninna nODalu,
priyaLivaLenageMdu yOcisi,
kAyajapita ninna hayavane kaLakoMDu,
mAyadiMda nI malagide,
tAyi bakuLeyoLu pELide,
tOyaja muKiyaLa bEDidE,
A yuvatiyannE smarisutA
SrIyarasane nInu strIrUpadi hOgi
SrIyAgihaLinnu SrIharigIyalu,
SrEyaveMdu AkASananoppisi
tAyiyaBIShTavanitte svaramaNA ||3||
sakala lOkaikanAthA BakutaraBIShTa pradAtA,
BakutanAda AkASa nRupatiyu bakuLe mA-
ta kELi aBayavittu mannisi padumAvatiya pariNaya,
Sukara sanmuKahalli akaLaMka mahima-
ge koTTanu tA lagna patrikA,
svIkarisuvadI kannikA I kAryake nIve prE
rakA tA kaLuhida puNya SlOkanu,
SOkarahita jagadEka vaMdya avalOkisi patrikavannu,
sakala sAdhanavillinnu,
lOkESagaruha bEkinnu, EkAMgi nAnu ennalu
lOkapatiye sura kOTigaLiMdali,
I kuvalayadi ninnaya pariNayavesagalu,
lOka janake kalyANava tOride,
Bakuta janapriya SrIvatsAMkita ||4||
Kagavara vAhana dEvA
triguNarahita jagakAva
agaNita mahima gOmayanenisi
bagebage rUpava dharisi paramAdaradali
surara poreyutA,
nagadhara nInI giriyoLu nelesihe,
agaNita suragaNa kinnararu sAdhyaru taru Pala
Kaga mRuga rUpava bagebage ihe
pogaLalaLavE girivaravu,
hagalu iruLu BagavaMtane ninnannu,
pogaLutiharu ninna Bakutaru,
nigamava paThisuta naDevaru nage
mogadali ninna dAsaru gOviMda mukuMda ennutA,
yuga yugadoLu nInagadoLu nelasihe
jagada dEva rAjisuvavanAgihe,
migilenisida SrI veMkaTESA,
sadguNa saccidAnaMda mukuMda gOviMdA ||5||

Leave a Reply
You must be logged in to post a comment.