Composer : Shri Prasannavenkata dasaru
ದೇವ ಬಾರೋ ಶ್ರೀನಿವಾಸ ದೇವನೆ ಬಾರೋ ನನ್ನ
ದಾವ ದಾವ ಪರಿಯ ತಪ್ಪ ಕಾವನೆ ಬಾರೋ || ಪ ||
ಜೀವನ ಪಾವನವ ಮಾಡುವನೆ ಬಾರೋ ನನ್ನ-
ಭವದ ಬಯಕೆ ಪೂರೈಸುವನೆ ಬಾರೋ || ೧ ||
ಧ್ಯಾನಿಸಲೊಮ್ಮ್ಯಾರೆ ದಯದಿ ನೀ ನಿಲ್ಲ ಬಾರೋ ಅ-
ಜ್ಞಾನ ನಾಶ ಮಾಡುವ ಕೃಪಾನಿಧಿ ಬಾರೋ || ೨ ||
ಹಡೆದ ತಾಯಿ ತಂದೆ ಗುರು ಒಡೆಯನೆ ಬಾರೋ ಎನ್ನ
ನಡೆ ನುಡಿ ವಿಷಮೆನ್ನದೆ ಕೈ ಪಿಡಿಯಲು ಬಾರೋ || ೩ ||
ತೆರೆ ತೆರೆ ಬಪ್ಪಾಸೆಯ ಚರಿಸಲಿ ಬಾರೋ ಆ-
ತುರದ ಕಾಮಾದ್ಯರ ನೀನೊರೆಸಲು ಬಾರೋ || ೪ ||
ಕ್ಷುಲ್ಲನೆಂದುದಾ-ಸಿಸುವದುಚಿತಲ್ಲವೊ ಬಾರೊ ಪ್ರಾಣ-
ದೊಲ್ಲಭ ಬಿರಿದು ನಿನ್ನದಲ್ಲೇನೋ ಬಾರೊ || ೫ ||
ಪಾಪಗಳು ಘನ್ನವಾದರೇನಯ್ಯ ಬಾರೋ ಕೃ-
ಪಾಪಾಂಗದಲ್ಲವು ಉಳಿಯಲಾಪವೆ ಬಾರೋ || ೬ ||
ಶ್ರೀರಮಣ ಎಂದಿಗಾಪ್ತರಾರಿಲ್ಲೊ ಬಾರೋ ಸುಖ-
ತೀರಥೇಶ ಪ್ರಸನ್ವೆಂಕಟರಾಯ ಬಾರೋ || ೭ ||
dEva bArO SrInivAsa dEvane bArO nanna –
dAva dAva pariya tappa kAvane bArO || pa ||
jIvana pAvanava mADuvane bArO nanna-
Bavada bayake pUraisuvane bArO || 1 ||
dhyAnisalommyAre dayadi nI nilla bArO a-
j~jAna nASa mADuva kRupAnidhi bArO || 2 ||
haDeda tAyi taMde guru oDeyane bArO enna –
naDe nuDi viShamennade kai piDiyalu bArO || 3 ||
tere tere bappAseya carisali bArO A-
turada kAmAdyara nInoresalu bArO || 4 ||
kShullaneMdudA-sisuvaducitallavo bAro prANa-
dollaBa biridu ninnadallEnO bAro || 5 ||
pApagaLu GannavAdarEnayya bArO kRu-
pApAMgadallavu uLiyalApave bArO || 6 ||
SrIramaNa eMdigAptarArillo bArO suKa-
tIrathESa prasanveMkaTarAya bArO || 7 ||

Leave a Reply
You must be logged in to post a comment.