-
Deva baro Srinivasa
Composer : Shri Prasannavenkata dasaru ದೇವ ಬಾರೋ ಶ್ರೀನಿವಾಸ ದೇವನೆ ಬಾರೋ ನನ್ನದಾವ ದಾವ ಪರಿಯ ತಪ್ಪ ಕಾವನೆ ಬಾರೋ || ಪ || ಜೀವನ ಪಾವನವ ಮಾಡುವನೆ ಬಾರೋ ನನ್ನ-ಭವದ ಬಯಕೆ ಪೂರೈಸುವನೆ ಬಾರೋ || ೧ || ಧ್ಯಾನಿಸಲೊಮ್ಮ್ಯಾರೆ ದಯದಿ ನೀ ನಿಲ್ಲ ಬಾರೋ ಅ-ಜ್ಞಾನ ನಾಶ ಮಾಡುವ ಕೃಪಾನಿಧಿ ಬಾರೋ || ೨ || ಹಡೆದ ತಾಯಿ ತಂದೆ ಗುರು ಒಡೆಯನೆ ಬಾರೋ ಎನ್ನನಡೆ ನುಡಿ ವಿಷಮೆನ್ನದೆ ಕೈ ಪಿಡಿಯಲು ಬಾರೋ…
