-
Sarideno naa ninna
Composer : Shri Vadirajaru ಸಾರಿದೆನೊ ನಾ ನಿನ್ನ ವೆಂಕಟರನ್ನ ||ಪ||ನೀರಜನಯನನೆ ನಿರ್ಮಲ ಗುಣಪೂರ್ಣ ||ಅ.ಪ|| ಅನಾಥನು ನಾನು ಎನಗೆ ಬಂಧುವು ನೀನುನಿನ್ನವನೆಂದು ನೋಡೊ ನೀನಾಗಿ ದಯಮಾಡೊ ||೧|| ಎನ್ನ ಕುಂದುಗಳನ್ನು ಎಣಿಸಲಾಗದೊ ದೇವಪನ್ನಗಾದ್ರಿವಾಸ ನೀನೆ ನಿರ್ದೋಷ ||೨|| ದೇಶದೇಶದವರ ಪೊರೆವಂತೆ ಪೊರೆಯೆನ್ನಶೇಷಾಚಲ ಘನ್ನ ಶ್ರೀಶ ಶ್ರೀಹಯವದನ ||೩|| sArideno nA ninna veMkaTaranna ||pa||nIrajanayanane nirmala guNapUrNa ||a.pa|| anAthanu nAnu enage baMdhuvu nInuninnavaneMdu nODo nInAgi dayamADo ||1|| enna kuMdugaLannu eNisalAgado…
-
Endu kambenu enna
Composer : Shri Vadirajaru ಎಂದು ಕಾಂಬೆನು ಎನ್ನ ಸಲಹುವಬಂಧು ಬಳಗ ನಮ್ಮಪ್ಪನ ||ತಿರುಪತಿಲಿಪ್ಪನ ವರಾಹ ತಿಮ್ಮಪ್ಪನ ||ಪ|| ದಂಡಿಗೆಯ ಬಾರಿಸುತ ಶ್ರುತಿಗೂಡಿಕೊಂಡು ಪಾಡುತ ||ಮನದಿ ಲೋಲ್ಯಾಡುತ ಕುಣಿಕುಣಿದಾಡುತ ||೧|| ಬೆಟ್ಟದೊಡೆಯನ ಚರಣಕಮಲಕೆ ಶಿರವಿಟ್ಟು ಕರಗಳ ||ಮುಗಿವೆ ನಾ ಕವಕವ ನಗುವೆ ನಾ ಎನ್ನೊಡೆಯನಾ ಪೊಗಳಿ ||೨|| ಸ್ವಾಮಿ ಪುಷ್ಕರಿಣಿಯಲ್ಲಿ ಸ್ನಾನ ನೇಮವ ಮಾಡುವೆ ||ಪುಣ್ಯಕ್ಷೇತ್ರವ ನೋಡುವೆ, ಹಯವದನನ ಕೊಂಡಾಡುವೆ ||೩|| eMdu kAMbenu enna salahuvabaMdhu baLaga nammappana ||tirupatilippana varAha timmappana ||pa|| daMDigeya…
-
Yadupatiya toramma
Composer : Shri Vadirajaru ಯದುಪತಿಯ ತೋರಮ್ಮಾ ಯೆನ್ನ ನೀ ಬಿಡದಿರಮ್ಮಯದೆಯೊಳು ನಿನ್ನ ನಿಲಿಸಿಕೊಂಡನಾಖಳಕುಲಖಂಡನಾ ನಿನ್ನಯ ಗಂಡನಾ ||ಪ|| ಸರಸೀಹ ದಳನೇತ್ರೇ ಸದಮಲ ಶುಭಗಾತ್ರೇಸರಸಾದಿ ನಿನ್ನ ಕೂಡ ಮಾತನಾಡುವಭಕ್ತರೊಡನಾಡುವ ಕರುಣಾದಿ ನೋಡುವ ||೧|| ಮದಗಜ ಸಮಯಾತ್ರೆ ಮೇದಿನಿಯೊಳತಿಚಿತ್ರೆಅದುಭೂತ ಪ್ರಳಯಾಬ್ಧಿಯೊಳಿಪ್ಪನನಿನಗೊಲಿದಿಪ್ಪನ ಮನ್ಮಥನಪ್ಪನ ||೨|| ಆದ್ಯಂತಾ ಮಧ್ಯರಹಿತೆ ಅಜಭವಸುರಮಾತೆಮುದ್ದು ಹಯವದನನಾ ಶ್ರೀಧರೇಶನಾಸ್ವಾದಿಪುರವಾಸನ ವಾದಿರಾಜಾಧೀಶನ ||೩|| yadupatiya tOrammA yenna nI biDadirammayadeyoLu ninna nilisikoMDanAKaLakulaKaMDanA ninnaya gaMDanA ||pa|| sarasIha daLanEtrE sadamala SuBagAtrEsarasAdi ninna kUDa mAtanADuvaBaktaroDanADuva karuNAdi…
