-
Anna Bhaganna
Composer : Shri Varada gopalavittala ಅಣ್ಣ ಭಾಗಣ್ಣ ನೀ ಕಣ್ಣಿಗೆ ಮರೆಯಾಗಿಪುಣ್ಯ ಲೋಕವ ಸೇರಿದ್ಯಾ ಗುರುವೆ |ಸಣ್ಣವರು ನಾವು ಅನುಗುಣ್ಯ |ನಿನ್ನಯ ಪಾದವನ್ನುಬಿಟ್ಟಿರಲಾರೆವೊ ಗುರುವೇ || ಪ || ಚಿಕ್ಕಂದಿನಿಂದ ಬಲುಅಕ್ಕರತೆಯಿಂದೆಮಗೆ ನೀ |ದಿಕ್ಕೆಂದು ನಂಬಿದೆವೊ ಗುರುವೆ |ಮಕ್ಕಳಾಟಿಕೆ ಮಾಡಿ ಠಕ್ಕಿಸಿನಮ್ಮನ್ನು | ಬಿಟ್ಟು ಪೋಪುದನರಿಯೆವೊ |ಕಕ್ಕಸದಿ ಯಾತನೆಯ ಕರಕರಿಯ ಸಂಸಾರ |ಹೊಕ್ಕು ನೋಡನ್ನರಿಯವೊ ಗುರುವೆ |ಪಕ್ಕಿವಾಹನ ನಿನ್ನ ಕರದೊಯ್ದನೇ |ಅಕಟಕಟ ದಿಕ್ಕು ಗೇಡಿಗಳಾದೆವೊ |೧| ಮನಸಿಗತಿ ಹರುಷವಾದಂಥ ಮಾತನು |ಹೇಳಿ ಕುಣಿಕುಣಿಸ್ಯಾಡಿಸುವಿಯೊ ಗುರುವೆ |ಅನಘ…
-
Kandugorala shiva
Composer : Shri Prasannavenkata dasaru ಕಂದುಗೊರಳ ಶಿವ ಸುಂದರೇಶ್ವರನಾ |ವಂದಿಸಿ ಬೇಡಾನಂದವ ದಿನ ದಿನಾ [ಪ] ಚಂದ್ರಧರ ಶರಶ್ಚಂದ್ರವದನೆ |ಮಂದಾಕಿನಿವರ ಭಕ್ತವೃಂದವನೆ ||ಚಂದದಿ ಸಲಹುವ ನಂದಿಗಮನನೆ |ಕುಂದನಳಿದು ಮುಕುಂದನ ತೋರ್ಪನನೆ [೧] ಪಾತಾಳೇಶ್ವರ ಪ್ರಪಾತಕಿಳಿದ ಭವಜರ |ಎತ್ತಿ ತನ್ನಾತುಮದಿ ಸ್ಥಾನವಿತ್ತು ಪರ ||ಗತಿ ಸಾಧನ ದಾರಿಯ ತೋರಿದ ಮುನಿವರ |ಚಿತ್ತಜೈಯ್ಯನತಿಪ್ರೀತಿಯ ಶಂಕರ [೨] ಮುದದಿ ಶ್ರೀಹರಿ ಮಂಚ ಪದವಿ ಪಡೆದ |ವಿಧಿಭವಾದ್ಯರಿಗೆಲ್ಲ ಸರ್ವತ್ರ ಬೇಕಾದ ||ಸದ್ಯೋಜಾತಾದಿ ಪವಿತರೈದು ಮೊಗದ |ಸ್ಪರ್ಧುನಿಪಿತ ಪ್ರಸನ್ವೆಂಕಟಗೆ ಸಖನಾದ [೩] kaMdugoraLa…
-
Guru Vadiraja Yatiya
Composer : Shri Vijayadasaru ಗುರು ವಾದಿರಾಜ ಯತಿಯಾ ನೆನಸೋದುನಿರುತ ಕರುಣಿಪ ಮತಿಯಾ ||ಪ|| ಆರ್ತನಾ ಸರಿದಾರು ನವನವರ್ತಮಾನವನೆ ಕೇಳಿ |ಕರ್ತೃತ್ವ ಪರಿಹರಿಸಿ ಸಂಸೃತಿಯಗರ್ತದಿಂದೆತ್ತಿ ನೋಳ್ಪ ||೧|| ದುರಿತ ರಾಶಿಗಳ ಶೀಳಿ ಹೊರದೆಗೆದುಮರುತ ಶಾಸ್ತ್ರವನೆ ಪೇಳಿ |ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿಧರಿಯೊಳಗೆ ಮೆರೆದ ಧೀರ ||೨|| ವಂದಿಸಿ ಸೌಂದರ್ಯಪುರಿಯ ವಾಸವರಪ್ರದ ನಂದ ಸತ್ಕೀರ್ತಿ ಭೂಪ |ವಂದಿಸಿದವರಿಗೆ ಲೇಸಾಗಿ ಕೊಡುವಮುಕುಂದನಂಘ್ರಿಯ ದಾಸ ||೩|| ತೀರ್ಥಯಾತ್ರೆಯನೆ ಮಾಡಿಹರಿ ಭೇದಾರ್ಥದಿಂದಲೆ ಕೊಂಡಾಡಿ |ಅರ್ಥಾಸೆಗಳ ಈಡಾಡಿಹಯಮೊಗನ ಅರ್ಥಿಯಿಂದಲಿ ಪೂಜಿಪ ||೪|| ತ್ರಿಜಗದೊಳಗಿನವರಿಗೆ ಎಣೆಗಾಣೆಕುಜನ…
