-
Shri Madhwamata
Composer : Shri Pranesha dasaru ಶ್ರೀ ಮಧ್ವಮತವೆಂಬ ಕ್ಷೀರಪಾರಾವಾರ |ಸೋಮನೆನಿಸುತಿಹ ವರದೇಂದ್ರ ಕರಸಂಜಾತ |ನೀ ಮಹಿಯೊಳಾವಾವ ಪರಿ ಕಾಣಿಸುವ ನೋಡಿರಾಮಪದ ಜಲಜ ಭೃಂಗ [ಪ] ಕುಂಡಲಿಯೊ ಭಾರತಿಯೊ ಈಶನೊ ಎಂದು ದ್ವಿಜ|ಷಂಡ ತುತಿಸುವುದು ಶ್ರೀ ಭುವನೇಂದ್ರ ರಾಯರಾ |ಕಂಡು ಪದಯುಕ್ತ ಪುರುಷಾಕಾರ ಶಿಖಾರಹಿತಕೂಡದಿದು ಯೆನಲು ಪೇಳ್ವೆ |ದಂಡಧರ ಯೋಗದಾರ್ಢ್ಯದೊಳು ತಾ ಅಹಿಯಂತೆ |ಪಂಡಿತೇಶನು ವಾಗ್ ಬಲದಲಿ ಭಾರತಿಯಂತೆ |ರುಂಡಮಾಲಿಯ ತೆರದಿ ತೋರುವರು,ವೈರಾಗ್ಯದಲಿ ನಿರುತ ಭಜಿಸುವರಿಗೆ [೧] ವಿಧಿಯೊ ಅರ್ಕನೊ ಇಂದ್ರನೋ ಎಂಬ ತೆರದಿಂದ |ಬುಧ ಜನಕೆ…
-
Narasimha Narasimha
Composer : Shri Vijayaramachandra vittala ನಾರಸಿಂಹ ನಾರಸಿಂಹ ನಾರಸಿಂಹ | ಪ | ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯಕೃತ್ತಿ ಒತ್ತಿ, ಪರಿಹರಿಸಿ,ಭೃತ್ಯನಾದ ಜೀವನ್ನ ತೃಪ್ತಿ ಪಡಿಸುವ ದೇವಭಕ್ತವತ್ಸಲ, ನಾರಸಿಂಹ | ೧ | ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿನಿಂದು ನಾ ನಿನ್ನ, ಬೇಡೆ,ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿಮಂದೀಗೆ ಕುಂದು ಮಾಡ ಬ್ಯಾಡೆಂದೆ | ೨ | ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾನೊಂದ ಪರಿ ಪೇಳಲಾರೆ,ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತತಂದೆ ಈ ಸುತನ…
-
Srinivasa Kalyana – Uragadri vittala
ಇನ್ನೆಂದಿಗೋ ನಿನ್ನ ದರುಶನ ಶೇಷಾದ್ರಿವಾಸ ||ಪ|| ಪನ್ನಂಗ ಶಯನ ಪ್ರಸನ್ನರ ಪಾಲಿಪಘನ್ನ ಮಹಿಮ ನೀನೆನ್ನನುದ್ಧರಿಸೂ ||ಅ.ಪ|| ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದಪರಮಾದರ-ದಿಂದಿರುವ ಸಮಯದಿನಾರದ ಮುನಿ ಬಂದೊದಗಿ ನಿಂದ ಇಂ-ದಾರಿಗರ್ಪಿತ-ವೆಂದರುಹಿ ಮರಳೀ ತೆರಳಿದಸುರಮುನಿ ವಚನದಿ ಭೃಗು ಮುನಿವರ ಪೋಗಿಹರ ವಿರಂಚಿಯರ ನೋಡಿದಾ ಉರುತರ ಕೋಪದಿ ನಿಲ್ಲುತಪರಮಪುರುಷ-ರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ,ಹರುಷದಿ ಶ್ರೀಹರಿ ಉರಗ ಶಯನನಾಗಿ,ಪರಮ ಯೋಗನಿದ್ರೆ ಮಾಡುತಾ, ಅರಿಯದಂತೆ ತಾ ನಟಿಸುತ,ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ,ಹರುಷದಿ ಮುನಿಪಾದ ಕರದಲಿ ಒತ್ತುತ,ಕರುಣದಿ ಸಲಹಿದೆ ದುರಿತವ ಹರಿಸಿ,ಹರಿ ಭಕುತರ ಅಘ…
