Composer : Shri Vidyaratnakara Teertharu
ಇಂದಿರಾರಮಣ ಆನಂದಮೂರುತಿ ನಿನ್ನ
ವಂದಿಸಿ ಕರಗಳ ಬಂಧಿಸಿ ಬೇಡುವೇ [ಪ]
ಎಂದಿಗೂ ಎನ್ನ ಹೃದಯಮಂದಿರ ಬಿಡದಿರೋ
ನಂದಿಮುನೀಶ್ವರ ವಂದಿತ ಚರಣನೇ [ಅ.ಪ]
ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾ
ಕೃತಿಯಾಗಿರಲು ಶ್ರೀಪತಿಯೇ ನೀ ಬಂದು
ರತಿಪತಿ ಪಿತನೆ ಯುವತಿಯನ್ನೆ ಮಾಡಿದ
ಪತಿತಪಾವನ ನೀನಲ್ಲವೇನೋ ಹರಿಯೇ (೧)
ನಾಕರಾಜನ ಸುತನು ಕಾಕರೂಪದಿ ಬಂದು
ಏಕಾಂತದೊಳು ಅವಿವೇಕವ ಮಾಡಲು
ಶ್ರೀಕಾಂತ ತೃಣದಿಂದ ಭೀಕರಿಸಿ ಮೂರು
ಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೇ (೨)
ಮತ್ತು ಗಜೇಂದ್ರನಾಪತ್ತು ಪರಿಹರಿಸಿ
ಉತ್ತಮ ಪದವವಗಿತ್ತು ರಕ್ಷಿಸಿದೇ
ಭಕ್ತವತ್ಸಲ ಎನ್ನ ಕುತ್ತುಗಳನು ನೀ
ಚಿತ್ತಕೆ ತರದೇ ಸದ್ವೃತ್ತನೆಂದೆನಿಸೈ (೩)
ನೇತ್ರವೆಂಬುದು ನಾರಿಗಾತ್ರದೊಳಿರುವುದು
ಶ್ರೋತ್ರವು ಗೀತ ವಾದಿತ್ರದೊಳಿಹುದು
ಚಿತ್ತ ವಿಷಯ ಭೋಗಾಸಕ್ತವು ಗೋಪಿಕಾ
ಮಿತ್ರನೇ ಅಂಜಲಿಮಾತ್ರ ನೀನೊಪ್ಪಿಕೋ (೪)
ವರನಾಮಗಿರಿ ಲಕ್ಷ್ಮೀ ನರಹರಿ ಮೂರುತೇ
ಚರಣ ಕಮಲಯುಗ ಸ್ಮರಣೆಯ ಎನಗೆ
ಸ್ಥಿರವಾಗಿರುವಂತೆ ವರವಿತ್ತು ಸಲಹೆಲೋ
ಪರಮಪುರುಷ ದಿನಕರ ಕುಲತಿಲಕನೇ (೫)
iMdirAramaNa AnaMdamUruti ninna
vaMdisi karagaLa baMdhisi bEDuvE [pa]
eMdigU enna hRudayamaMdira biDadirO
naMdimunISvara vaMdita caraNanE [a.pa]
kRutiramaNanE munisatiyu SApadi SilA
kRutiyAgiralu SrIpatiyE nI baMdu
ratipati pitane yuvatiyanne mADida
patitapAvana nInallavEnO hariyE (1)
nAkarAjana sutanu kAkarUpadi baMdu
EkAMtadoLu avivEkava mADalu
SrIkAMta tRuNadiMda BIkarisi mUru
lOka suttisi avana nI kADide hariyE (2)
mattu gajEMdranApattu pariharisi
uttama padavavagittu rakShisidE
Baktavatsala enna kuttugaLanu nI
cittake taradE sadvRuttaneMdenisai (3)
nEtraveMbudu nArigAtradoLiruvudu
SrOtravu gIta vAditradoLihudu
citta viShaya BOgAsaktavu gOpikA
mitranE aMjalimAtra nInoppikO (4)
varanAmagiri lakShmI narahari mUrutE
caraNa kamalayuga smaraNeya enage
sthiravAgiruvaMte varavittu salahelO
paramapuruSha dinakara kulatilakanE (5)

Leave a Reply
You must be logged in to post a comment.