-
Bit hyage iralin ee charana
Composer : Shri Amba bai ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ [ಪ.]ವಿಠ್ಠಲನಾ ಪುಟ್ಟ ಚರಣಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ [ಅ.ಪ.] ಭಕ್ತರಿಗೊಲಿಯುವ ಚರಣಾ | ವೇದಉಕ್ತಿಗೆ ನಿಲುಕದ ಚರಣಾಹತ್ತಿ ಪಾರ್ಥನ ರಥ ಮತ್ತೆಭೀಷ್ಮನಿಗೊಲಿದು ಹಸ್ತದಿ ಚಕ್ರವಪಿಡಿದು ಬಂದಾ ಚರಣ (೧) ಬಲಿಯನ್ನು ತುಳಿದಂಥ ಚರಣಾ | ಮೂರುಇಳೆಯನಳೆದ ಪುಟ್ಟ ಚರಣಕುಲಕೋಟಿ ಉದ್ಧಾರಗೈವಂಥ ಗಂಗೆಯಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ (೨) ಹಸ್ತಿ ಕರೆಯೆ ಬಂದ ಚರಣಾ | ಲಕ್ಷ್ಮಿವತ್ತುವೋ ಮೃದುತಳ ಚರಣಾಚಿತ್ತದಿ…
-
Ranganyake tirugi baarane
Composer : Shri Prasannavenkata dasaru ರಂಗನ್ಯಾಕೆ ತಿರುಗಿ ಬಾರನೆ ಅಂತರಂಗಪೀಠದಿ ಮೊಗದೋರನೆ [ಪ.] ಮಂಗಳಾಂಗನೊಳು ಮಾತಾಡದೆ ಸತಿಕಂಗಳು ದಣಿಯದೆ ನೋಡಿಅಂಗನೆ ಹ್ಯಾಂಗೆ ಜೀವಿಸಲಮ್ಮಎನ್ನಿಂಗಿತವಾರಿಗುಸುರಲಮ್ಮ [೧] ಕಲ್ಲೆದೆಯಾದೆ ಇನಿತುದಿನ ಜೀವಕೊಲ್ಲದು ಹೋಯೆಂಬ ರೋದನಫುಲ್ಲನಾಭನ ಎಂಜಲುಂಡರೆ ಕಷ್ಟವಿಲ್ಲದೆ ಸುಖ ಕಣ್ಣು ಕಂಡರೆ [೨] ಕೃಷ್ಣನ ಶುಭಗುಣ ಹೊಗಳುತ ಬಹುಕಷ್ಟ ನೀಗಿದೆ ನಕ್ಕು ತತ್ವಶ:ಸೃಷ್ಟೀಶನ ಪ್ರಸನ್ವೆಂಕಟೇಶನ ನೆನೆವಷ್ಟರೊಳಗೆ ಮಾಯವಾದನೆ [೩] raMganyAke tirugi bArane aMtaraMgapIThadi mogadOrane [pa.] maMgaLAMganoLu mAtADade satikaMgaLu daNiyade nODiaMgane hyAMge jIvisalammaenniMgitavArigusuralamma [1]…
-
Ishtu dina intha sukha
Composer : Shri Indiresha ankita ಇಷ್ಟು ದಿನ ಇಂಥ ಸುಖ ಕಾಣಲಿಲ್ಲ ಕೃಷ್ಣಈ ದಿನ ನೋಡಿ ತುಷ್ಟನಾದೆನೊ ದೇವಾ [ಪ] ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲಪಾಠಗಳು ಸುಖವಲ್ಲ ಕೂಟವಲ್ಲ ತೋಟದೊಳು |ರವಿಸುತನ ಕೂಟದೊಳು ಗೋಪಿಯರ ಆಟಕದಕೊಳಲೂದೊ ನೋಟ ಸ್ಮರಣೆಗೆ ತರುವೆ [೧] ಏನು ಸೌಂದರ್ಯವೊ ಕೃಷ್ಣ ಏನು ಸೌಭಾಗ್ಯವೊಧೇನುಪಾಲನ ನೋಟಕಾಶ್ಚರ್ಯವೊ |ನಾನು ಒಲ್ಲೆನು ಸೀದಾ ಆಣೆ ಮಾಡುವೆ ನೀಗಧೇನು ಮುಖ ಸಮ ತೋರಿ ಧ್ಯಾನ ತಪ್ಪಿಸೋ ಜಗದಿ [೨] ನಿಂದು ಕೊಳಲನು ಕರದಿ ಇಂದು…
