-
Hari chitta Satya
Composer : Shri Purandara dasaru ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾನಮ್ಮ ನರಚಿತ್ತಕ್ಕೆ ಬಂದದ್ದು,ಲವಲೇಶ ನಡೆಯದು [ಪ] ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತಮದುವ್ಯಾಗದಿರುವುದು ಹರಿ ಚಿತ್ತವಯ್ಯ (೧) ಕುದುರೆ ಅಂದಣ ಆನೆ ಬಯಸೋದು ನರಚಿತ್ತಪದಚಾರಿಯಾಗೋದು ಹರಿ ಚಿತ್ತವಯ್ಯ (೨) ವಿಧವಿಧ ಯಾತ್ರೆಯ ಬಯಸೋದು ನರಚಿತ್ತಒದಗಿ ಬರುವ ರೋಗ ಹರಿ ಚಿತ್ತವಯ್ಯ (೩) ಸದಾ ಅನ್ನದಾನವ ಬಯಸೋದು ನರಚಿತ್ತಉದರಕ್ಕೆ ಅಳುವುದು ಹರಿ ಚಿತ್ತವಯ್ಯ (೪) ಧರಣಿಯ ಆಳಬೇಕೆಂಬುದು ನರಚಿತ್ತಪರರ ಸೇವಿಸುವುದು ಹರಿ ಚಿತ್ತವಯ್ಯ (೫) ಪುರಂದರ ವಿಠಲನ…
-
Indu sairisiri
Composer : Shri Kanakadasaru ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪಮುಂದಕೆ ನಿಮ್ಮ ಮನೆಗೆ ಬಾರನಮ್ಮ |ಪ| ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನು |ಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ ||೧|| ಹಸು ಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿ |ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆನಿಮ್ಮ ಹಸು ಮಗುವಿನಂತೆ ಭಾವಿಸಬಾರದೆ ||೨|| ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಡುವ |ಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ ||೩|| iMdu…
-
Endappikombe rangayyana
Composer : Shri Indiresha ankita ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ [ಪ] ಎಂದಪ್ಪಿಕೊಂಬೆನೋ ಎಂದು ಮುದ್ದಾಡುವೆನಂದ ಕಂದನ ಗೋವಿಂದನೆಂಬುವ ಕೂಸ [ಅ.ಪ] ಕರದಲಿ ತನ್ನಯ ಬೆರಳು ಬಾಯೊಳಗಿಟ್ಟುಜುರು ಜುರು ಚೀಪುವ ವರಮುದ್ದು ಬಾಲನ (೧) ಗುರುಳು ಮಧ್ಯದಿ ರತ್ನ ಅರಳೆಲೆ ಹೊಳೆಯುತಜರದ ಕುಂಚಿಗೆ ಹೊದ್ದು ಚರಿಸುವ ಕೂಸಿನ್ನ (೨) ಪುಟ್ಟ ಪುಟ್ ಹೆಜ್ಜೆಯನಿಟ್ಟು ಗೋಕುಲದೊಳುತುಷ್ಟಿ ನೀಡಲು ಬಾಲಕೃಷ್ಣನೆಂಬುವ ಕೂಸ (೩) ಬಾಲೆರ ಮನೆಪೊಕ್ಕು ಪಾಲುಮೊಸರು ತಿಂದಲೀಲೆ ಮಾಡುತ ಅಂಬೆಗಾಲನಿಕ್ಕುವ ಕೂಸ (೪) ಕಾಲಕಡಗ ರುಳಿಯ ಪೂಲು ಪೈಜಣನಿಟ್ಟುಮ್ಯಾಲೆ…
