-
Palasagara Sambhute
Composer: Shri Gurujagannatha dasaru ಪಾಲಸಾಗರ ಸಂಭೂತೆ ಕೈವಲ್ಯದಾತೆಪಾಲಿಸೆನ್ನನು ನಿಜಮಾತೆ [ಪ] ಆಲಿಸು ನಿನ್ನಯ ಬಾಲನ ನುಡಿ ಈಕಾಲದಿ ಮನ್ಮನ, ಆಲಯದೊಳು ನಿಂದು [ಅ.ಪ]ಪಾಲಿಸೆನ್ನನು ನಿಜಮಾತೆ | ಶ್ರೀ ಮಾ ರಮಾ ಲಕುಮಿ ಕಮಲೆ, ನಿತ್ಯ ನಿರ್ಮಲೆ,ಈ ಮಹಾಮಹಿಮ ವಿಶಾಲೆ,ಕಾಮನ ಜನನಿ ಸುಲೀಲೆ ಜಲಜಸುಮಾಲೇ,ಕಾಮಿಪ ಜನರ ಸುರಸಾಲೆ,ತಾಮರಸಾಂಬಕ ಸಾಮಜಭವ ಸು –ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ –ಧಾಮೆ ನಿನ್ನಯ ಪಾದ ಯಾಮ ಯಾಮಕೆ ನಿತ್ಯನೇಮದಿ ಭಜಿಪೆ ಶ್ರೀರಾಮನ ತೋರೆ [೧] ವೇದಾಭಿಮಾನಿ ಅಂಭ್ರೀಣಿ ಸುಗಣಸನ್ಮಣಿವೇದವತಿಯೆ ರುಕ್ಮಿಣಿ,ವೇದವಂದ್ಯಳೆ ಗುಣಪೂರ್ಣೇ…
-
Indire mandiradolu
Composer: Shri Vadirajaru ಇಂದಿರೆ ಮಂದಿರದೊಳು ನಿಂದಿರೆ,ಇಂದಿರೆ ನೀ ನಿಂದಿರೆ |ಪ| ಇಂದಿರೆ ಹೊಂದಿದೆ ನಿನ್ನ ಮುದ-ದಿಂದ ಪಾಲಿಸು ನಿತ್ಯಾ ಎನ್ನ |ಆಹಾ|ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪ-ದಿಂದ ಪೂಜಿಸುವೆನು ಕುಂದುಗಳೆಣಿಸದೆ |ಇಂದಿರೆ ನೀ ನಿಂದಿರೆ | ಘಲು ಘಲು ಗೆಜ್ಜೆಯ ನಾದದಿಂದಫಳಫಳಿಸುವ ದಿವ್ಯಪಾದದೊಳುಪಿಲ್ಯ ಕಾಲುಂಗುರ ನಾದ ಅಂಘ್ರಿಚಲಿಸುವ ದಿವ್ಯ ಸುಸ್ವಾದ |ಆಹಾ|ಕಾಲಲಂದುಗೆ ಗೆಜ್ಜೆ ಝಳಪಿಸುತ ನ–ಮ್ಮಾಲಯದೊಳು ನಿಲ್ಲೆ ಪಾಲವಾರಿಧಿ ಕನ್ಯೆ |೧|ಇಂದಿರೆ ನೀ ನಿಂದಿರೆ | ಹರಡಿ ಕಂಕಣ ವಂಕಿ ಡೋರ್ಯಕೊರಳೊಳಗೆ ನಾನಾ ವಿಧದ್-ಹಾರಬಾಯಲಿರುವೋ ಕರ್ಪೂರ…
-
Nambi kettavarillavo rangayyana
Composer: Shri Vyasarajaru ನಂಬಿಕೆಟ್ಟವರಿಲ್ಲವೊ ರಂಗಯ್ಯನನಂಬದೆ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಅಖಿಳ ಲೋಕೇಶನಕಂಬುಕಂಧರ ಕೃಷ್ಣಕರುಣಾಸಾಗರನ ||ಅ.ಪ|| ತರಳ ಪ್ರಹ್ಲಾದ ಸಾಕ್ಷಿಸರಸಿಯೊಳಿದ್ದ ಕರಿರಾಜನೊಬ್ಬ ಸಾಕ್ಷಿಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವರಹಿತನ ||೧|| ದೊರೆಯೂರು ಏರಬಂದ ಪುತ್ರನನ್ನುಕೊರಳ್-ಹಿಡಿದ್ಹೊರಡಿಸಲು ,ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ ||೨|| ತರುಣಿ ದ್ರೌಪದಿ ಸೀರೆಯ ದುಶ್ಯಾಸನಸರಸರ ಸೆಳೆಯುತ್ತಿರೆ,ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟುತ್ವರದಿ ಅಕ್ಷಯವಿತ್ತ ಸಿರಿಕೃಷ್ಣ ರಾಯನ ||೩|| naMbikeTTavarillavo raMgayyananaMbade keTTare keDali ||pa|| aMbujanABana aKiLa lOkESanakaMbukaMdhara kRuShNakaruNAsAgarana ||a.pa|| taraLa…