-
Moola Rama mahima suladi – Prasannavenkata dasaru
( ಈ ಸುಳಾದಿ ಸಂಕ್ಷಿಪ್ತ ರಾಮಾಯಣ ಕಥಾ ಸಂಗ್ರಹ. ರಘುವಂಶ ಕುಲತಿಲಕನಾದ ಶ್ರೀರಾಮಚಂದ್ರನನ್ನು ಬಣ್ಣಿಸಿದ್ದಾರೆ . ಅಕಳಂಕ – ಅಕಳಂಕ ಎಂದು ಪರಮಾತ್ಮನನ್ನು ನಿರ್ದೋಷಿ , ಗುಣಪೂರ್ಣನೆಂದು ಸ್ತುತಿಸುತ್ತಾ , ಶ್ರೀಮೂಲರಾಮನು ಆನಂದತೀರ್ಥರ ಬಳಿಗೆ ಬಂದ ವಿಚಾರವನ್ನು ಸೂಚಿಸಿದ್ದಾರೆ. ) ರಾಗ ಪೂರ್ವಿಕಲ್ಯಾಣಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾರ್ತಿಹರ ಸಾಮಗಾನಾದರ ನಿ –ಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ॥…
-
Entha Srimanthanantano
Composer: Shri Prasannavenkata dasaru ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮ ಮೃಢಮ್ಮರಿಮೊಮ್ಮಶ ಚಿಮ್ಮ ಸ್ವರಮ್ಮ ಪರಮ್ಮಅಮ್ಮರು ಸಮ್ಮೋಹ ನಿಮ್ಮಣುಗಮ್ಮರುನಮ್ಮೊ ನಮ್ಮ ಪರಮ್ಮ ಮಹಿಮ್ಮ |೧| ಅಂಗರು ಹೆಂಗಳ ಅಂಗನಂತ ಗಡಮಂಗಳ-ಪಾಂಗ ವಿಶ್ವಂಗಳ ಮಂಗಳಸಿಂಗರದಂಗುಟ ಸಂಗದ ಜಗದಅಘಂಗಳ-ಘಂಗಳ ಹಿಂಗಿಪಳಾಂಗಾ |೨| ಪನ್ನಗ ಪನ್ನ ಶಯನ್ನ ಮಹೋನ್ನತಪನ್ನಗ ವರ ವಾಹನ್ನ ರತುನ್ನಭವಾನ್ನ ಸುಖೋನ್ನತ ದನ್ನಗ ರನ್ನಿಜನಿನ್ನೆದುರಿನ್ನ್ಯಾ-ರೆನ್ನೊಡೆಯನ್ನೆ |೩| ಬಲ್ಲ ಕೈವಲ್ಯಜ್ಞ-ರೊಲ್ಲಭ ಸುಲ್ಲಭಬಲ್ಲಿದ ಖುಲ್ಲರ ದಲ್ಲಣ-ನಲ್ಲದೆಹುಲ್ಲುದನಲ್-ಲೊಳ-ವಲ್ಲ ನೀನ್ನಲ್ಲದೆಸಲ್ಲದು ಸೊಲ್ಲ ನೀ ನಿಲ್ಲದಿನಿಲ್ಲ |೪| ಅಂಬರ…
-
Yaduveera odagenna
Composer: Shri Prasannavenkata dasaru ಯದುವೀರ ಒದಗೆನ್ನ ನಾಲಿಗೆಗೆಉದಯಾದಿ ಅಸ್ತಾಂತ ಆವಾವಾಗೆ [ಪ] ನಿನ್ನ ನಾಮದ ಸ್ಮರಣೆಯೆ ಶುಭ ಕರ್ಮವುಉನ್ನತ ಸಂಕೀರ್ತನೆ ಶತಕ್ರತುವುಪುಣ್ಯ ಗಂಗಾ ಸ್ನಾನದ ಫಲಕಧಿಕವುಘನ್ನ ಜಪದ ಬೀಜವೆ ನಾಮವು [೧] ಬಂಗಾರ-ದಿಳೆಯಳೆ-ದೊಲಿದೀವ ದಾನದಿಹಿಂಗದೆ ಉಭಯಸ್ಯ ಗೋ ಶತದಿಶೃಂಗಾರ ಕೋಟಿ ಕನ್ಯಾ ದಾನಕಧಿಕವುಮಂಗಳ ಮಹಿಮ ಮುಕುಂದನ ನಾಮವು [೨] ಧರ್ಮಾರ್ಥ ಕಾಮ ಮೋಕ್ಷಗಳಮೂಲವಿದೆಂದು ನಿರ್ಮಲ ಶ್ರುತಿ ಸಾರುತಾವೆಂದುಮರ್ಮವರಿತು ನಾಮ ನಂಬಿದೆ ಶೇಷಾದ್ರಿಯಹರ್ಮ್ಯ ನಿಲಯ ಪ್ರಸನ್ವೆಂಕಟಯ್ಯ [೩] yaduvIra odagenna nAligegeudayAdi astAMta AvAvAge [pa] ninna…