Prasannavenkata dasaru

  • Karuni embe karunanidhi

    Composer : Shri Prasannavenkata dasaru ಕರುಣಿಯೆಂಬೆ ಕರುಣಾ ನಿಧಿಯೆಂಬೆಶರಣು ಶರಣೆಂಬೆ ಸ್ವಾಮಿ ಸ್ವಾಮಿ | ಪರಮ ಭಾಗವತರ ಅರಿಗಳ ತರಿದು ನೀನರಕ ತಪ್ಪಿಸಿ ನಿಜಪುರಕೊಯ್ಯುವೆಯೆಂದು [ಅ.ಪ.] ತಾಯಿಯೆಂಬೆ ಎನ್ನ ತವರೂರೆಂಬೆತ್ರಾಹಿ ತ್ರಾಹಿ ಎಂಬೆ ಸ್ವಾಮಿಬಾಯೆಂಬೆ ಮಾನವರ ಅಘ ಕಾಣಿಸುತಿರೆನೀಯಜಾಮಿಳಗೆ ಅಭಯವಿತ್ತೆಯೆಂಬೆ (೧) ತಾತನೆಂಬೆ ಎನಗಾಪ್ತನೆಂಬೆನಾಥಾ ನೀ ಎಂಬೆ ಸ್ವಾಮಿಪಾತಕ ಕೌರವರ ಆತಂಕ ಬಿಡಿಸಿ ಸಂಪ್ರೀತಿಲಿ ಪಾಂಡವರ ಮಾನ ಕಾಯ್ದೆಯೆಂಬೆ (೨) ಏಕಾನೆಂಬೆ ಅನೇಕಾನೆಂಬೆಸಾಕು ಸಾಕೆಂಬೆ ಸ್ವಾಮಿಶ್ರೀಕಾಂತ ಪ್ರಸನ್ವೆಂಕಟೇಕಾಂತ ದಾಸರಬೇಕಾಗಿ ದಡ ನೂಕುವೆಯೆಂದು (೩) karuNiyeMbe karuNA…

  • Ranganyake tirugi baarane

    Composer : Shri Prasannavenkata dasaru ರಂಗನ್ಯಾಕೆ ತಿರುಗಿ ಬಾರನೆ ಅಂತರಂಗಪೀಠದಿ ಮೊಗದೋರನೆ [ಪ.] ಮಂಗಳಾಂಗನೊಳು ಮಾತಾಡದೆ ಸತಿಕಂಗಳು ದಣಿಯದೆ ನೋಡಿಅಂಗನೆ ಹ್ಯಾಂಗೆ ಜೀವಿಸಲಮ್ಮಎನ್ನಿಂಗಿತವಾರಿಗುಸುರಲಮ್ಮ [೧] ಕಲ್ಲೆದೆಯಾದೆ ಇನಿತುದಿನ ಜೀವಕೊಲ್ಲದು ಹೋಯೆಂಬ ರೋದನಫುಲ್ಲನಾಭನ ಎಂಜಲುಂಡರೆ ಕಷ್ಟವಿಲ್ಲದೆ ಸುಖ ಕಣ್ಣು ಕಂಡರೆ [೨] ಕೃಷ್ಣನ ಶುಭಗುಣ ಹೊಗಳುತ ಬಹುಕಷ್ಟ ನೀಗಿದೆ ನಕ್ಕು ತತ್ವಶ:ಸೃಷ್ಟೀಶನ ಪ್ರಸನ್ವೆಂಕಟೇಶನ ನೆನೆವಷ್ಟರೊಳಗೆ ಮಾಯವಾದನೆ [೩] raMganyAke tirugi bArane aMtaraMgapIThadi mogadOrane [pa.] maMgaLAMganoLu mAtADade satikaMgaLu daNiyade nODiaMgane hyAMge jIvisalammaenniMgitavArigusuralamma [1]…

  • Endu Kambeno enna salahuva

    Composer : Shri Prasannavenkata dasaru ಎಂದು ಕಾಂಬೆನೊ ಎನ್ನ ಸಲಹುವತಂದೆ ಉಡುಪಿಯ ಜಾಣನಾ | ಮಂದಹಾಸ ಪ್ರವೀಣನಾಇಂದಿರಾ ಭೂರಮಣನಾ |ಪ| ದೇವಕಿಯ ಜಠರದಲಿ ಬಂದನಆವ ಪಳ್ಳಿಲಿ ನಿಂದನಾ |ಮಾವ ಕಂಸನ ಕೊಂದನಾಕಾವನಯ್ಯ ಮುಕುಂದನಾ ||೧|| ಕಡಲ ದಡದೋಳೆಸೆವ ರಂಗನಕಡಗೋಲ್-ನೆಣನು ಪಿಡಿದನಾ |ಮೃಡ ಪುರಂದರ ರೊಡೆಯನಾಈರಡಿಗಳಲಿ ಶಿರವಿಡುವೆನಾ ||೨|| ಪೂರ್ಣಪ್ರಜ್ಞರಿಗೊಲಿದು ದ್ವಾರಕೆಮಣ್ಣಿನೊಳ್ ಪ್ರಕಟಿಸಿದನಾ |ಭವಾರ್ಣವಕೆ ಪ್ಲವನಾದನಾಪ್ರಸನ್ನವೆಂಕಟ ಕೃಷ್ಣನಾ ||೩|| eMdu kAMbeno enna salahuvataMde uDupiya jANanA | maMdahAsa pravINanAiMdirA BUramaNanA |pa| dEvakiya jaTharadali…

error: Content is protected !!