Prasannavenkata dasaru

  • Ane bantaane

    Composer : Shri Prasannavenkata dasaru ಆನೆ ಬಂತಾನೆ ಬಂತಾನೆ ಬಂತಮ್ಮದಾನವ ಕದಳಿಯ ಕಾನನ ಮುರಿಯುತ ||ಪ|| ಗುಂಗುರುಗುರುಳ ನೀಲಾಂಗ ಚೆಲ್ವಾನೆಕಂಗಳಿಗ್ ಹೊಳೆವ ವ್ಯಾಂಘ್ರಾಗುಳಿ ಆನೆಭಂಗಾರದಣುಗಂಟೆ ಶೃಂಗಾರದಾನೆಮಂಗಳ ತಿಲಕದ ರಂಗನೆಂಬಾನೆ ||೧|| ಕೆಳದಿ ಗೋಪಿಯರೊಳು ಗೆಳೆತನದಾನೆಸುಲಭದಿಂದೊಲಿಯುವ ಎಳೆಮರಿ ಆನೆಘಲಿಳು ಘಳಿಲುರವದಿ ನಲಿದಾಡೋ ಆನೆಮಲೆತವರೆದೆಮ್ಯಾಲೆ ತುಳಿದಾಡೋ ಆನೆ ||೨|| ನಳಿನಜ ಭವರಿಗೆ ಸಿಲುಕದ ಆನೆಒಲವಿಂದ ಭಕುತರ ಸಲಹುವ ಆನೆಹಲವು ಕವಿಗಳೀಗೆ ನಿಲುಕದ ಆನೆಬಲ ಪ್ರಸನ್ವೇಂಕಟ ನಿಲಯನೆಂಬಾನೆ ||೩|| Ane baMtAne baMtAne baMtammadAnava kadaLiya kAnana muriyuta ||pa||…

  • Yaake kiri kiri

    Composer : Shri Prasannavenkata dasaru ಯಾಕೆ ಕಿರಿಕಿರಿ ಮಾಡುತಿ ನೀ –ನ್ಯಾಕೆ ಕಿರಿಕಿರಿ ಮಾಡುತಿ || ಪ ||ಭಕ್ತವತ್ಸಲ ಭಯನಿವಾರಣ ಬಟ್ಟಲು ಬಾರಿಸಲೇನೋ || ಅ.ಪ || ನೀರೊಳು ಮುಳುಗಿದೆ ಏನೋ ನಿನಗೆ ನೆಗಡಿಯಾಯಿತೇನೋ |ಭಾರವ ಪೊತ್ತು ನಿನ್ನ ಬೆನ್ನು ನೊಂದದೇನೋ ||ಧಾರುಣಿ ಬಗೆದು ನಿನ್ನ ದಾಡಿ ನೊಂದದೇನೋ |ದುರುಳ ಹಿರಣ್ಯಕನ ಬಗೆದು ಬೆರಳು ನೊಂದಾವೇನೋ || ೧ || ಭೂಮಿಯ ಅಳೆದು ನಿನ್ನ ಪಾದ ನೊಂದಾವೇನೋ |ರಾಯರಾಯರ ಗೆದ್ದು ಬಾಹು ನೊಂದಾವೇನೋ ||ಸೇತುವೆ ಕಟ್ಟಿ…

  • Jala jalangira

    Composer : Shri Prasannavenkata dasaru ಜಲ ಜಲಂಗಿರ ಅನಿಲ ದೇವನ |ಕಾಲಿಗೆರಗುತ ಕೇಳಿ ವರವನು [ಪ] ಆರು ಮೂರ್ಮ್ಯಾಲ್ಮೂರು ಸಾವಿರ |ಆರು ನೂರ್ಜಪ ಜೀವಗತಿಕ್ರಮ ||ತೋರಿ ಮೂರ್ಬಗೆ ಜೀವರಿಗೆ ದಿನ |ಸಿರಿರಮಣ ಖರೆಯೆಂದು ಸಾರುವ [೧] ಲೋಲೆಲಕುಮಿಪತಿಗೆ ಎಡ |ಬಲನೆನಿಸಿ ಮೂಲೋಕದಿ ಮೆರೆವನ ||ಪೌಲಮಿಗತ ಜೀವಲೋಕಕೆ |ಮೂಲ ಶ್ವಾಸನು ಜೀವರೋತ್ತಮ [೨] ವ್ಯಾಸರಾಜರ ತಪಸಿಗೊಲಿದು |ವಿಶೇಷ ರೂಪದಿ ನೆಲಿಸಿಯಿಲ್ಲಿಯೆ ||ಶ್ರೀಶ ಸಿರಿ ಪ್ರಸನ್ವೆಂಕಟನ ನಿಜ |ದಾಸನೆಂದ್-ಹೆಸರಾದ ಧೀಷಣ [೩] jala jalaMgira anila dEvana |kAligeraguta…

error: Content is protected !!